ಎಲ್ಲರಿಗೂ ತಿಳಿದಿರುವ ಹಾಗೆ ಲಾಕ್ಡೌನ್ ಇರುವುದರಿಂದ ಚಿತ್ರರಂಗದ 27 ವಿಭಾಗದ ಎಲ್ಲಾ ತಂತ್ರಜ್ಞಾನ ಕಲಾವಿದರು ಕೆಲಸ ಕಾರ್ಯವಿಲ್ಲದೆ ಮನೆಯಲ್ಲಿ ಕಷ್ಟದ ಪರಿಸ್ಥಿತಿಯಲ್ಲಿ ಚಿತ್ರರಂಗದಲ್ಲಿ ಸಮಸ್ಯೆ ಎದುರಿಸುತ್ತಿರುವ ಹಲವಾರು ಸದಸ್ಯರುಗಳಿಗೆ ಹಾಗೂ ಪತ್ರಕರ್ತ PRO ಗಳು ಹಾಗೂ ಪತ್ರಕ ಛಾಯಾಗ್ರಾಹಕರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಇಂಡಿಯನ್ ಫಿಲಂ ಮೇಕರ್ ಅಸೋಸಿಯೇಷನ್ ಮತ್ತು ಇಂಗ್ಲಿಷ್ ಮಂಜ ಚಿತ್ರತಂಡ ಹಾಗೂ ಕೆಲವು ದಾನಿಗಳು ಸಹ ಕೈಜೋಡಿಸಿ ಈ ಮಹಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆವು ಈ ಸುಸಂದರ್ಭದಲ್ಲಿ ಇಂಗ್ಲಿಷ್ ಮಂಜ ಚಿತ್ರದ ನಿರ್ದೇಶಕರಾದ ಆರ್ಯ ಎಂ ಮಹೇಶ್, ಇಂಡಿಯನ್ ಫಿಲಂ ಮೇಕರ್ ಅಸೋಸಿಯೇಷನ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ದಿಲೀಪ್ ಕುಮಾರ್ ಹೆಚ್ಆರ್, ಇಂಗ್ಲಿಷ್ ಮಂಜ ಚಿತ್ರದ ನಿರ್ಮಾಪಕರಾದ ಡೇವಿಡ್ ಆರ್ , ಇಂಗ್ಲಿಷ್ ಮಂಜ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವ ಮುರಳಿ ವಿಲಿಯಮ್ಸ್ ( ಕರ್ನೂಲ್) ,ಹಾಗೂ ಶಿವರಾಜ್ ಮುತ್ತಣ್ಣನವರು (ಹುಬ್ಬಳ್ಳಿ) ,ವಿಜಯ್ ಕುಮಾರ್ (ಹುಬ್ಬಳ್ಳಿ), ಇಂಗ್ಲಿಷ್ ಮಂಜ ಚಿತ್ರದ ಸಹ ನಿರ್ದೇಶಕರಾದ ವಿಜಯ್ ಟಿ ಪಿ ,ನಟ ನಿರ್ದೇಶಕರಾದ ಮಂಜುನಾಥ ದೈವಜ್ಞ , ಸ್ಕೈಲೈನ್ ಸೀನು,ಸಹ ನಿರ್ದೇಶಕರಾದ ಜೈ ವರ್ಧನ್, ಕಲಾವಿದರಾದ ದೀಪು ಗೌಡ,ದೀಪಕ್ ಯೆಲಹಂಕ ,ಹಾಗೂ ಮೇಲ್ವಿಚಾರಕರಾದ ಅನಿಲ್ ಕುಮಾರ್ ಹಾಗೂ ಸಂಸ್ಥೆಯ ಸದಸ್ಯರುಗಳು ಭಾಗಿಯಾಗಿದ್ದರು .ಸ್ನೇಹಿತರೆ ಇದೆ ರೀತಿ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸಹಕಾರ ನಮ್ಮ ಇಂಗ್ಲಿಷ್ ಮಂಜ ಚಿತ್ರತಂಡ ಹಾಗೂ ಐಎಫ್ಎಂಎ ಸಂಸ್ಥೆಯ ಮೇಲಿರಲಿ ,ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಸದಸ್ಯರಿಗೂ ಧೈರ್ಯ ತುಂಬುವ ಕಾರ್ಯವನ್ನು ಮಾಡೋಣ ಎಲ್ಲರು ಒಟ್ಟಾಗಿ ಕೈ ಜೋಡಿಸೋಣ ಧನ್ಯವಾದಗಳು