Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆಮ್ಲೆಟ್ ಚಿತ್ರವೂ ಜುಲೈ 9 ರಂದು ಕಲರ್ಸ್ ಸಿನಿಮಾ satellite channel ನಲ್ಲಿ
Posted date: 17 Thu, Jun 2021 07:50:51 PM
ಅಮೃತ ಫಿಲಂ ಸೆಂಟರ್ ಸಂಸ್ಥೆ ಅಡಿಯಲ್ಲಿ ನಿರ್ಮಾಣವಾಗಿರುವ , e - ಸಮುದಾಯ ದ ಸಹಕಾರದೊಂದಿಗೆ ಶ್ರೀಮತಿ ಸರಿತಾ ಓಂಪ್ರಕಾಶ್ ಮತ್ತು ಪ್ರಸನ್ನ  ಮಿಯಾಪುರಂ ನಿರ್ಮಾಣದ ಮತ್ತು ವೆಂಕಟ್ ಭರದ್ವಾಜ್ ನಿರ್ದೇಶನದ ಕನ್ನಡದ ಚಿತ್ರ ``ಆಮ್ಲೆಟ್`` . 
ಆಮ್ಲೆಟ್ ಚಿತ್ರವೂ ಜುಲೈ 9 ರಂದು ಕಲರ್ಸ್ ಸಿನಿಮಾ satellite channel ನಲ್ಲಿ ಪ್ರದರ್ಶನ ಗೊಳ್ಳಲಿದೆ (ವರ್ಲ್ಡ್ ಪ್ರೀಮಿಯರ್ ) , ಆಮ್ಲೆಟ್ ಕನ್ನಡದ ಮೊಟ್ಟ ಮೊದಲ ಹೊಸ ಚಿತ್ರ ಈ ರೀತಿ ಪ್ರದರ್ಶನ ಗೊಳುತ್ತಿರುವುದು ಎಂದು ಚಿತ್ರ ನಿರ್ಮಾಪಕರಾದ ಸರಿತಾ ಓಂಪ್ರಕಾಶ್ ತಿಳಿಸಿದ್ದಾರೆ 
ಮುಂದಿನ ದಿನಗಳಲ್ಲಿ ಆಡಿಯೋ , ಟೀಸರ್ ಮತ್ತು ಚಿತ್ರಕ್ಕೆ ಸಂಬಂಧಪಟ್ಟ ಕುತೂಹಲ ವಿಷಯಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಸರಿತಾ ಓಂಪ್ರಕಾಶ್ ತಿಳಿಸಿದ್ದಾರೆ. ಆಮ್ಲೆಟ್ ಚಿತ್ರವೂ ಕ್ಲಾಸ್ ಕಾಮಿಡಿ ಚಿತ್ರವಾಗಿದ್ದು ನೋಡುಗರಿಗೆ ಒಳ್ಳೆ ಮನೋರಂಜನೆ ನೀಡಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ-ಸಮುದಾಯ ಎಂಬ ಸಂಸ್ಥೆ ಈ ಚಿತ್ರಕ್ಕೆ ಸಹಕಾರ ನೀಡಿದೆ 
ತಾರಾಗಣದಲ್ಲಿ ಸಂಯುಕ್ತ ಹೊರನಾಡು, ಶಿನವ (ನವೀನ್ ), ಬಲರಾಜ ವಾಡಿ , ಶರ್ಮಿತ ಗೌಡ , ನಿರಂಜನ್ ದೇಶಪಾಂಡೆ , ಪಿ ಡಿ ಸತೀಶ್ ಚಂದ್ರ, ಮಧುರ , bigboss ಖ್ಯಾತಿಯ ಸುಜಾತ ಅಕ್ಷಯ್ , ಜ್ಯೂಸು ಕುಡಿತಿಯ ಖ್ಯಾತಿಯ ವಿರಾಜ್ ಕನ್ನಡಿಗ , ವಂಶಿಧರ್ ಭೋಗರಾಜ್ , ಲಾರೆನ್ಸ್ಮ ತ್ತು ಹಲವಾರು ರಂಗಭೂಮಿ ಕಲಾವಿದರು ಆಮ್ಲೆಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಶೋಭರಾಜ್ ರವರು ಒಬ್ಬ ರಿಟೈರ್ಡ್ ರೌಡಿ ಪಾತ್ರದಲ್ಲಿ ಹೊಸದಾಗಿ ಕಾಣಿಸಿಕೊಂಡಿದ್ದಾರೆ.  ನಿರ್ದೇಶಕರಾದ ವೆಂಕಟ್ ಭರದ್ವಾಜ ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
ತಾಂತ್ರಿಕ ವರ್ಗದಲ್ಲಿ , ವಿರಾಜ್ ಕನ್ನಡಿಗ ರವರ ಸಂಗೀತ, ಸ್ಯಾಮ್ ಸನ್ ಜೈಪಾಲ್ ರವರ ಹಿನ್ನೆಲೆ ಸಂಗೀತ , ಚಂದನ್ p ರವರ ಸಂಕಲನ ಮತ್ತು ಶಿಜಿ ಜಯದೇವ್ ರವರ ಛಾಯಾಗ್ರಹಣ ಈ ಚಿತ್ರಕ್ಕಿದೆ , ಸಂಭಾಷಣೆ ಗುರುರಾಜ್ ದೇಸಾಯಿ. ಕಥೆ ಚಿತ್ರಕಥೆ ನಿರ್ದೇಶನ ವೆಂಕಟ್ ಭಾರದ್ವಾಜ್ 

WORLD PREMIER ON 9th July 2021 evening on Colors Kannada Cinema Channel.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಮ್ಲೆಟ್ ಚಿತ್ರವೂ ಜುಲೈ 9 ರಂದು ಕಲರ್ಸ್ ಸಿನಿಮಾ satellite channel ನಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.