Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶಿವಾಜಿ ಸುರತ್ಕಲ್ ಭಾಗ -2 ಅಕ್ಟೋಬರ್ ನಲ್ಲಿ ಶೂಟಿಂಗ್ ಶುರು
Posted date: 11 Sat, Sep 2021 07:04:56 PM
2020 ರಲ್ಲಿ ಬಿಡುಗಡೆಯಾಗಿದ್ದ ಶಿವಾಜಿ ಸುರತ್ಕಲ್  ಪ್ರೇಕ್ಷಕರ ಮನಗೆದ್ದಿತ್ತು.  ಸ್ವತಃ  ವಿತರಕರಿಂದಲೇ  ಬ್ಲಾಕ್ -ಬಸ್ಟರ್  ಎನಿಸಿಕೊಂಡಿತ್ತು.  ರಮೇಶ್ ಅರವಿಂದ್ ಅಭಿನಯದಲ್ಲಿ, ನಿರ್ದೇಶಕರಾದ  ಆಕಾಶ್ ಶ್ರೀವತ್ಸ ರವರ ಸಾರಥ್ಯದಲ್ಲಿ  ಮತ್ತು ನಿರ್ಮಾಪಕರಾದ  ರೇಖಾ ಕೆ. ಎನ್.  ಹಾಗು  ಅನುಪ್ ರವರ ನೇತೃತ್ವದಲ್ಲಿ ಮತ್ತದೇ ಶೀರ್ಷಿಕೆಯಲ್ಲಿ ಭಾಗ -2 ಮಾಡಹೊರಟಿರುವುದು  ನಿಮಗೆ ಈಗಾಗಲೇ ಗೊತ್ತಿದೆ. ಸಂಪೂರ್ಣವಾಗಿ ಕಥೆ - ಚಿತ್ರಕಥೆ  ಮುಗಿಸಿಕೊಂಡಿರುವ ಚಿತ್ರತಂಡ ಅಕ್ಟೋಬರ್  ನಲ್ಲಿ ಶೂಟಿಂಗ್ ಶುರುಮಾಡುವ ಯೋಚನೆಯಲ್ಲಿದೆ. 

ಶಿವಾಜಿಯಾಗಿ ರಮೇಶ್ ಅರವಿಂದ್ ರವರು ಬಣ್ಣ ಹಚ್ಚಲಿದ್ದು,  ರಾಧಿಕಾ ನಾರಾಯಣ್,  ರಘು ರಾಮನಕೊಪ್ಪ  ಮತ್ತು ವಿದ್ಯಾಮೂರ್ತಿ  ಭಾಗ-2 ರಲ್ಲೂ ಮುಂದುವರಿಯಲಿದ್ದಾರೆ.  ಉಳಿದ ತಾರಾಗಣದಲ್ಲಿ ಹೊಸಮುಖಗಳು ಪರಿಚಯಗೊಳ್ಳಲಿದ್ದಾರೆ. 

ಶಿವಾಜಿ ಸುರತ್ಕಲ್ ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು, ಆದರೆ ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು,  ಪತ್ತೇದಾರಿ ಕತೆಯಾಗಿರುವುದರಿಂದ  ಕೊಲೆಗಾರನ ಹುಡುಕಾಟದ ಮಾರ್ಗದಲ್ಲಿ ಚಲಿಸುತ್ತಿರುತ್ತದೆ. 

ಚಿತ್ರಮಂದಿರ  ಭೇಟಿಯ ಸಂದರ್ಭ ಎದುರಾಗಿದ್ದ ಅನೇಕ ಪ್ರಶ್ಮೆಗಳಿಗೆ,  ವಿಶೇಷವಾಗಿ ಶಿವಾಜಿ ಸುರತ್ಕಲ್ ಎಂಬ ಶೀರ್ಷಿಕೆಗೆ  ಈ ಚಿತ್ರದಲ್ಲಿ ನಿರ್ದೇಶಕರು ಉತ್ತರವಿಟ್ಟಿದ್ದಾರೆ. ಗುರುಪ್ರಸಾದ್ M. G.  ಛಾಯಾಗ್ರಾಹಕರಾಗಿ ಮುಂದುವರಿಯಲಿದ್ದು,  ಉಳಿದಂತೆ  ತಾಂತ್ರಿಕ ತಂಡವನ್ನು ಸಧ್ಯದಲ್ಲೇ  ಬಹಿರಂಗಗೊಳಿಸಲಿದೆ ಚಿತ್ರತಂಡ.  ಭಾಗ-1 ರ ಯಶಸ್ಸು ಮತ್ತು ತಮಿಳು,  ಮಲಯಾಳಂ,  ತೆಲುಗಿಗೆ  ರೀಮೇಕ್ ರೈಟ್ಸ್  ಮಾರಾಟವಾಗಿದ್ದರಿಂದ  ಚಿತ್ರತಂಡ  ಮತ್ತಷ್ಟು ಹುರುಪಿನಿಂದ  ಅದ್ದೂರಿಯಾಗಿ ಚಿತ್ರ ನಿರ್ಮಿಸುವ ತಯಾರಿಯಲ್ಲಿದೆ. ಪ್ರೇಕ್ಷಕರು ಹಾಗು ಪತ್ರಕರ್ತರ ಸಹಕಾರ ಮತ್ತು ಪ್ರೋತ್ಸಾಹ  ಶಿವಾಜಿ ಸುರತ್ಕಲ್  ಭಾಗ-1 ಕ್ಕೆ ನೀಡಿದಂತೆ ಈ ಚಿತ್ರಕ್ಕೂ ನೀಡಬೇಕೆನ್ನುವುದು ಚಿತ್ರತಂಡದ ವಿನಮ್ರ ಕೋರಿಕೆಯಾಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶಿವಾಜಿ ಸುರತ್ಕಲ್ ಭಾಗ -2 ಅಕ್ಟೋಬರ್ ನಲ್ಲಿ ಶೂಟಿಂಗ್ ಶುರು - Chitratara.com
Copyright 2009 chitratara.com Reproduction is forbidden unless authorized. All rights reserved.