Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕನ್ನಡ ಚಿತ್ರರಂಗಕ್ಕೆ ವರವಾಗಿ ಬರಲಿದೆ ಫ್ಯಾಷನ್ ಎಬಿಸಿಡಿ
Posted date: 30 Thu, Sep 2021 12:02:34 AM
ವಿದೇಶಗಳಲ್ಲಿ ಚಿತ್ರೀಕರಣ ನಡೆಸಬೇಕೆಂಬ ಮಹದಾಸೆ ಹೊತ್ತವರು ಗಾಂಧಿನಗರದಗುಂಟ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ. ಆದರೆ ಅದನ್ನು ಸಾಕಾರಗೊಳಿಸಿಕೊಳ್ಳುವ ಸುಯೋಗ ಲಭಿಸುವುದು ಕೆಲವೇ ಕೆಲವರಿಗೆ ಮಾತ್ರ. ಅದಕ್ಕೆ ಕಾರಣವಾಗುವುದು ಬಜೆಟ್ ಸಮಸ್ಯೆ. ವಿದೇಶಗಳಲ್ಲಿ ಮಾತ್ರವಲ್ಲ, ನಮ್ಮದೇ ನೆರೆಯ ರಾಜ್ಯಗಳಲ್ಲಿ ಚಿತ್ರೀಕರಣ ನಡೆಸಬೇಕೆಂದರೂ ಸಾಕಷ್ಟು ತೊಡಕುಗಳೆದುರಾಗುತ್ತವೆ. ಆಯಾ ಭಾಗದಲ್ಲಿನ ಕಾನೂನು ಕಟ್ಟಳೆಗಳನ್ನು ದಾಟಿಕೊಂಡು ಚಿತ್ರೀಕರಣ ನಡೆಸೋದೆಂದರೆ ಅದೊಂದು ಸಾಹಸ. ಈ ಎಲ್ಲ ಕಾರಣಗಳಿಂದಾಗಿ ವಿದೇಶ ಮತ್ತು ಇಷ್ಟ ಪಟ್ಟ ಲೊಕೇಷನ್ನುಗಳಲ್ಲಿನ ಚಿತ್ರೀಕರಣ ಕನಸಾಗಿಯೇ ಉಳಿದುಕೊಂಡಿದ್ದರೆ, ಇನ್ನು ಮುಂದೆ ಚಿಂತೆಗೀಡಾಗೋ ಅವಶ್ಯಕತೆಯಿಲ್ಲ. ಯಾಕೆಂದರೆ, ಅದೆಲ್ಲವನ್ನೂ ನಿವಾರಿಸುವ ಅಚ್ಚುಕಟ್ಟಾದ ರೂಪುರೇಷೆಗಳೊಂದಿಗೆ ಫ್ಯಾಷನ್ ಎಬಿಸಿಡಿ ಎಂಬ ಸಂಸ್ಥೆಯೊಂದು ಇದೀಗ ಎಂಟ್ರಿ ಕೊಟ್ಟಿದೆ.
ಹೊರ ದೇಶಗಳಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಸಬೇಕೆಂದರೂ ಕಷ್ಟವಿದೆ. ಬಜೆಟ್ಟು ಇದ್ದರೂ ಕೂಡಾ ಅಲ್ಲಿನ ಕಾನೂನು ಕ್ರಮಗಳನ್ನು ದಾಟಿಕೊಳ್ಳೋದು ಪ್ರಯಾಸಕರ ಸಂಗತಿ. ಈ ಸಂಸ್ಥೆ ಬರೀ ಕಾನೂನು ತೊಡಕು ಮಾತ್ರವಲ್ಲದೇ ಎಲ್ಲವನ್ನೂ ತಾನೇ ನಿಭಾಯಿಸಲಿದೆ. ಈ ಮೂಲಕ ಯಾವ ರಗಳೆಯೂ ಇಲ್ಲದೆ ಸರಾಗವಾಗಿ ಚಿತ್ರೀಕರಣ ಮುಗಿಸಿಕೊಂಡು ಬರುವ ನಿರಾಳತೆ ಕನ್ನಡ ಚಿತ್ರತಂಡಗಳಿಗೆ ಫ್ಯಾಷನ್ ಎಬಿಸಿಡಿ ಸಂಸ್ಥೆಯ ಕಡೆಯಿಂದ ಸಿಗಲಿದೆ. ಶೀಘ್ರದಲ್ಲಿಯೇ ನೊವೆಲ್ ವರ್ಕ್ಸ್ ತಂಡವನ್ನು ಬೆಂಗಳೂರಿಗೆ ಕರೆಸಿಕೊಂಡು ಒಂದು ಸುಂದರ ಕಾರ್ಯಕ್ರಮ ಆಯೋಜಿಸಿ ಕನ್ನಡ ನಿರ್ಮಾಪಕರನ್ನು ಮುಖಾಮುಖಿಯಾಗಿಸೋ ತಯಾರಿಯೂ ಶುರುವಾಗಿದೆ. 
ಫ್ಯಾಷನ್ ಎಬಿಸಿಡಿ ಎಂಬುದು ಮಂಗಳೂರು ಮೂಲದ ಸಂಸ್ಥೆ. ಚರಣ್ ಸುವರ್ಣ ಅದರ ಮಾಲೀಕರು. ಇದುವರೆಗೂ ಬಾಲಿವುಡ್ ಮಟ್ಟದಲ್ಲಿ, ಫ್ಯಾಷನ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುವರ್ಣ ಅವರೀಗ ಕನ್ನಡ ಚಿತ್ರರಂಗಕ್ಕೆ ವರವಾಗುವಂಥಾ ಪ್ರಾಜೆಕ್ಟ್ ಒಂದನ್ನು ಹೊತ್ತು ತಂದಿದ್ದಾರೆ. ಈ ಸಂಸ್ಥೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ನೊವೆಲ್ ವರ್ಕ್ಸ್ ಎಂಬ ಮತ್ತೊಂದು ಸಂಸ್ಥೆಯೊಂದಿಗೆ ಕೈ ಜೋಡಿಸಿದೆ. ಇದರೊಂದಿಗೆ ಕನ್ನಡ ಚಿತ್ರಗಳಿಗೆ ಹೊರರಾಜ್ಯ ಮತ್ತು ವಿದೇಶಗಳಲ್ಲಿ ಚಿತ್ರೀಕರಣಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನೂ ಮಾಡಿ ಕೊಟ್ಟು, ಸಬ್ಸಿಡಿಯನ್ನೂ ಕೊಡಿಸೋದು ಈ ಸಂಸ್ಥೆಯ ಮೂಲ ಉದ್ದೇಶ. ಫ್ಯಾಷನ್ ಎಬಿಸಿಡಿ ಸಂಸ್ಥೆ ಮತ್ತು ನೊವೆಲ್ ವರ್ಕ್ಸ್ ವಿಶ್ವದ ಐವತ್ತಕ್ಕೂ ಹೆಚ್ಚು ದೇಶಗಳ ಸರ್ಕಾರಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಆ ದೇಶಗಳಲ್ಲಿ ಚಿತ್ರೀಕರಣ ನಡೆಸಲು ಕಾನೂನು ಚೌಕಟ್ಟಿನಲ್ಲಿಯೇ ಎಲ್ಲ ವ್ಯವಸ್ಥೆಗಳನ್ನೂ ಮಾಡಿ ಕೊಡಲಿದೆ. ಜೊತೆಗೆ ಇಂಥಾ ಚಿತ್ರೀಕರಣಕ್ಕೆ ಆಯಾ ದೇಶಗಳಲ್ಲಿ ಒಂದಷ್ಟು ಸಬ್ಸಿಡಿ ವ್ಯವಸ್ಥೆ ಇದೆ. ಅದನ್ನೂ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕನ್ನಡ ಚಿತ್ರರಂಗಕ್ಕೆ ವರವಾಗಿ ಬರಲಿದೆ ಫ್ಯಾಷನ್ ಎಬಿಸಿಡಿ - Chitratara.com
Copyright 2009 chitratara.com Reproduction is forbidden unless authorized. All rights reserved.