Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅದ್ದೂರಿಯಾಗಿ ಮೂಡಿ ಬರುತ್ತಿದೆ ಶುಗರ್ ಫ್ಯಾಕ್ಟರಿ ಟೈಟಲ್ ಸಾಂಗ್‌
Posted date: 30 Thu, Sep 2021 04:41:10 PM
 
 ಚಂದನ್ ಶೆಟ್ಟಿ ಗಾಯನಕ್ಕೆ ಮೂವರು ನಾಯಕಿಯರೊಂದಿಗೆ ಹೆಜ್ಜೆ ಹಾಕಿದ ಡಾರ್ಲಿಂಗ್ ಕೃಷ್ಣ. 

 ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಆರ್ ನಿರ್ಮಿಸುತ್ತಿರುವ,ದೀಪಕ್ ಅರಸ್ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ  "ಶುಗರ್ ಫ್ಯಾಕ್ಟರಿ" ಚಿತ್ರದ ಟೈಟಲ್ ಸಾಂಗ್ ನ ಚಿತ್ರೀಕರಣ ಬೆಂಗಳೂರಿನ ಹೆಸರಾಂತ ಪಬ್ ನಲ್ಲಿ ನಡೆಯುತ್ತಿದೆ.

ಈ‌ ಹಾಡನ್ನು ಚಂದನ್ ಶೆಟ್ಟಿ ‌ಅವರೆ ಬರೆದು ಹಾಡಿದ್ದಾರೆ. 
ನಾಯಕ ಡಾರ್ಲಿಂಗ್ ಕೃಷ್ಣ ಚಿತ್ರದ ಮೂವರು ನಾಯಕಿಯರಾದ   ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪ ಶೆಟ್ಟಿ ಅವರೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 
 ಧನಂಜಯ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.
 "ಶುಗರ್ ಫ್ಯಾಕ್ಟರಿ" ಯ ಬಹುತೇಕ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ಮಾತ್ರ‌ ಬಾಕಿಯಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. 
ಹಾಡುಗಳ ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಕೆಲವೇ ದಿನಗಳಲ್ಲಿ "ಶುಗರ್ ಫ್ಯಾಕ್ಟರಿ" ತೆರೆಗೆ ಬರಲು ಸಿದ್ದವಾಗಲಿದೆ.

 ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಫಿರ್ ರಫಿ ಸಂಗೀತ ನಿರ್ದೇಶನ ಹಾಗೂ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅದ್ದೂರಿಯಾಗಿ ಮೂಡಿ ಬರುತ್ತಿದೆ ಶುಗರ್ ಫ್ಯಾಕ್ಟರಿ ಟೈಟಲ್ ಸಾಂಗ್‌ - Chitratara.com
Copyright 2009 chitratara.com Reproduction is forbidden unless authorized. All rights reserved.