Chief Editor
Manohar. R (Manu)
Photo Journalist
chitrataramanu@gmail.com
+91 9845549026
ನವೆಂಬರ್ 15ರಂದು ಬರಲಿದೆ ``ಯಾರಿಗೆ ಬೇಕು ಈ ಲೋಕ`` ಚಿತ್ರದ ಫಸ್ಟ್ ಲುಕ್
Posted date: 14 Sun, Nov 2021 07:59:20 PM
ಆರ್ಯವರ್ಧನ್ ನಾಯಕರಾಗಿ ಅಭಿನಯಿಸುತ್ತಿರುವ ``ಯಾರಿಗೆ ಬೇಕು ಈ ಲೋಕ`` ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನವೆಂಬರ್ 15 ರಂದು ಬಿಡುಗಡೆಯಾಗಲಿದೆ.‌‌ ಇತ್ತೀಚೆಗೆ ನಮ್ಮ‌ನ್ನು ಬಿಟ್ಟು ಅಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಈ‌ ಪೋಸ್ಟರ್ ಸಮರ್ಪಿಸುವುದಾಗಿ ಚಿತ್ರತಂಡ ತಿಳಿಸಿದೆ. ಆರ್ಯವರ್ಧನ್ ಅವರಿಗೆ ನಾಯಕಿಯರಾಗಿ‌ ಪ್ರಿಯಾಂಕ ರಿವಾರಿ, ಪಾವನಿ ಹಾಗೂ ವರ್ಷ ನಟಿಸುತ್ತಿದ್ದಾರೆ. 

ಹಿರಿಯ ನಟ ವಿನೋದ್ ಕುಮಾರ್, ರಚ ರವಿ, ರಾಮು(ಜ್ಯೂನಿಯರ್ ರಾಜಕುಮಾರ್), ಶೋಭನ್ ಅಕ್ಷರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಎಂ.ರಮೇಶ್‌ ಹಾಗೂ ಗೋಪಿ ಜಂಟಿಯಾಗಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಬಿ.ಶ್ರೀನಿವಾಸ ರಾವ್ ಹಾಗೂ ರೋಶಿನಿ ನೌಡಿಯಲ್ ನಿರ್ಮಿಸುತ್ತಿದ್ದಾರೆ. 

ಮಹಿತ್ ನಾರಾಯಣ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಶ್ರೀ ವಸಂತ್ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಎ.ಕೆ.ಆನಂದ್ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ``ಯಾರಿಗೆ ಬೇಕು ಈ ಲೋಕ`` ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನವೆಂಬರ್ 15ರಂದು ಬರಲಿದೆ ``ಯಾರಿಗೆ ಬೇಕು ಈ ಲೋಕ`` ಚಿತ್ರದ ಫಸ್ಟ್ ಲುಕ್ - Chitratara.com
Copyright 2009 chitratara.com Reproduction is forbidden unless authorized. All rights reserved.