Chief Editor
Manohar. R (Manu)
Photo Journalist
chitrataramanu@gmail.com
+91 9845549026
``ರಾಣ`` ಚಿತ್ರದಲ್ಲಿ ಸಂಯುಕ್ತ ಹೆಗ್ಡೆ .
Posted date: 19 Fri, Nov 2021 02:34:44 PM
ಶ್ರೇಯಸ್ಸ್ ಕೆ ಮಂಜು ಅಭಿನಯದ  ``ರಾಣ`` ಚಿತ್ರದ  ಹಾಡೊಂದಕ್ಕೆ ನಟಿ ``ಕಿರಿಕ್ ಪಾರ್ಟಿ`` ಸಿನಿಮಾ ಖ್ಯಾತಿಯ ಸಂಯುಕ್ತ ಹೆಗ್ಡೆ ಹೆಜ್ಜೆ ಹಾಕಲಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಶಿವು(ಕೆ ಜಿ ಎಫ್) ನಿರ್ಮಿಸಿರುವ ಭವ್ಯವಾದ ಸೆಟ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ. ‌
ಶಿವು ಭೇರ್ಗಿ ಈ ಹಾಡನ್ನು ಬರೆದಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. 
ನಂದಕಿಶೋರ್ ಈ ಚಿತ್ರವನ್ನು  ನಿರ್ದೇಶಿಸುತ್ತಿದ್ದಾರೆ. 
 
ಶ್ರೇಯಸ್ಸ್ ಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. 
ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ.  ಶೇಖರ್ ಚಂದ್ರು ಛಾಯಾಗ್ರಹಣ  ಕೆ.ಎಂ.ಪ್ರಕಾಶ್ ಸಂಕಲನ, ವಿಶ್ವ , ಶಿವು ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ "ರಾಣ" ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ರಾಣ`` ಚಿತ್ರದಲ್ಲಿ ಸಂಯುಕ್ತ ಹೆಗ್ಡೆ . - Chitratara.com
Copyright 2009 chitratara.com Reproduction is forbidden unless authorized. All rights reserved.