Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡಾ.ವಿಷ್ಣುವರ್ಧನ್ ಅವರ ನೆನಪಿನಲ್ಲಿ 2022 ರ ಕ್ಯಾಲೆಂಡರ್
Posted date: 05 Wed, Jan 2022 08:21:03 AM
ಡಾ.ವಿಷ್ಣುವರ್ಧನ್ ಅವರ ನೆನಪಿನಲ್ಲಿ 2022 ರ ಕ್ಯಾಲೆಂಡರ್ ಅನ್ನು ಡಾ.ವಿಷ್ಣು ಸೇನಾ ಸಮಿತಿಯು ಹೊರತಂದಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕೋಟಿಗೊಬ್ಬ ಹೆಸರಿನಲ್ಲಿ ಕ್ಯಾಲೆಂಡರ್ ಅನ್ನು ಹೊರತರಲಾಗುತ್ತಿದೆ. ಸಾಹಸಸಿಂಹ ಎಂಬ ಬಿರುದು ವಿಷ್ಣು ಅವರ ಹೆಸರಷ್ಟೇ ಕರ್ನಾಟಕದಲ್ಲಿ ಪ್ರಸಿದ್ಧಿ ಹೊಂದಿದೆ. ಆ ಹಿನ್ನಲೆಯಲ್ಲಿಯೇ ಈ ಕ್ಯಾಲೆಂಡರ್ ಅನ್ನು ರೂಪಿಸಲಾಗಿದೆ. ಈ ಸಲ ಸಿಂಹರೂಪಿ ಪರಿಕಲ್ಪನೆ ಅಡಿಯಲ್ಲಿ  ಮೂರು ಸಿಂಹಗಳ ನಡುವೆ ಡಾ.ವಿಷ್ಣು ಅವರು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿಪುಟದಲ್ಲೂ ಡಾ.ವಿಷ್ಣು ಅವರ ವಿಶೇಷ ಚಿತ್ರಗಳನ್ನು ಬಳಸಲಾಗಿದೆ.   

ಕ್ಯಾಲೆಂಡರ್ ವಿನ್ಯಾಸ ಮತ್ತು ಮುದ್ರಣ ಸೇರಿ ರೂ. 80 ಖರ್ಚಾಗತ್ತದೆ. ಆದರೆ ಪ್ರತಿ ಅಭಿಮಾನಿ ಮನೆಯಲ್ಲಿಯೂ ಈ ಕ್ಯಾಲೆಂಡರ್ ಇರಬೇಕೆಂಬ ಕಾರಣಕ್ಕೆ ರೂ.50 ಕ್ಕೆ ಎಲ್ಲಾ ಕಡೆ ಮಾರಾಟಕ್ಕೆ ನೀಡಲಾಗುತ್ತಿದೆ. ಉಳಿದ 30 ರೂಪಾಯಿ ವೆಚ್ಚವನ್ನು ವೀರಕಪುತ್ರ ಶ್ರೀನಿವಾಸ ಮತ್ತು ಅವರ ಗೆಳೆಯರು ಭರಿಸುತ್ತಿದ್ದಾರೆ.

ಕ್ಯಾಲೆಂಡರ್ ಬೇಕಾದರೆ 99722 19267 ಗೆ ಸಂಪರ್ಕಿಸಬಹುದು. 

ಡಾ.ವಿಷ್ಣು ಸೇನಾ ಸಮಿತಿ.
ವೀರಕಪುತ್ರ ಶ್ರೀನಿವಾಸ
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡಾ.ವಿಷ್ಣುವರ್ಧನ್ ಅವರ ನೆನಪಿನಲ್ಲಿ 2022 ರ ಕ್ಯಾಲೆಂಡರ್ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95