ರಂಗಭೂಮಿ ಕಲಾವಿದರ ಕಲಾ ಚತುರತೆ ಬಗ್ಗೆ ನಾವೇನು ಬಿಡಿಸಿ ಹೇಳಬೇಕಿಲ್ಲ. ಸಂಚಾರಿ ಥಿಯೇಟರ್ ನಲ್ಲಿ ಪಳಗಿ ತಮ್ಮದೇ ಒಂದು ರಂಗ ತಂಡ ಕಟ್ಟಿಕೊಂಡು ದಿ ಬೆಸ್ಟ್ ಆ್ಯಕ್ಟರ್ ಎಂಬ ಮಣ್ಣಿನ ಸೊಗಡಿನ ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದವರು ನಾಗರಾಜ್ ಸೋಮಯಾಜಿ. ಕುಂದಾಪುರ ಮೂಲದವರಾದ ಸೋಮಯಾಜಿ ಕನ್ನಡ ಚಿತ್ರರಂಗದಲ್ಲಿ ಏನಾದ್ರೂ ಸಾಧಿಸಬೇಕೆಂಬ ಕನಸು ಅವರಲ್ಲಿ ಆಳವಾಗಿ ಬೇರೂರಿದೆ. ದಿ ಬೆಸ್ಟ್ ಆ್ಯಕ್ಟರ್ ಸಿನಿಮಾ ಮೂಲಕ ಗಮನಸೆಳೆದಿರುವ ಸೋಮಯಾಜಿ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಲು ರೆಡಿಯಾಗಿದ್ದಾರೆ.
ಅಕಟಕಟ ಚಿತ್ರಕ್ಕೆ ನಾಗರಾಜ್ ಸೋಮಯಾಜಿ ಆಕ್ಷನ್ ಕಟ್!
ಅಕಟಕಟ ಎಂಬ ವಿಶೇಷ ಶೀರ್ಷಿಕೆ ಮೂಲಕ ನಾಗರಾಜ್ ಸೋಮಯಾಜಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾಕ್ಕೆ ಸೋಮಯಾಜಿ ಬಂಡವಾಳ ಹೂಡುತ್ತಿಲ್ಲ. ಬದಲಾಗಿ ತಾವೇ ಡೈರೆಕ್ಟರ್ ಕ್ಯಾಪ್ ತೊಟ್ಟು ಅಕಟಕಟ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಪೂರ್ಣ ಪ್ರಮಾಣದಲ್ಲಿ ನಿರ್ದೇಶನದ ಅಖಾಡಕ್ಕಳಿದಿರುವ ನಾಗರಾಜ್ ಸೋಮಯಾಜಿ ಅಕಟಕಟ ಸಿನಿಮಾಗಾಗಿ ಸದ್ಯ ಪೂರ್ವ ತಯಾರಿಯಲ್ಲಿದ್ದು, ಒಂದು ಅದ್ಭುತ ತಂಡದ ಜೊತೆಗೆ ಸೋಮಯಾಜಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಅಕಟಕಟ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನಿಂಗ್ ಸಿನಿಮಾವಾಗಿರಲಿದ್ದು, ಪ್ರತಿ ಪ್ರೇಕ್ಷಕರಿಗೂ ಇಷ್ಟವಾಗಲಿದೆ.