ಬಾಲಕೃಷ್ಣ ಕೆ.ಆರ್ ನಿರ್ಮಾಣದ, ರಾಜು ಕುಣಿಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ``ನಿರ್ಭಯ 2`` ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಸದ್ಯದಲ್ಲೇ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ.
ಡಾ|ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಸಂತೋಷ್ ನಾಯಕ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದು, ಆಕಾಶಪರ್ವ ಸಂಗೀತ ನೀಡಿದ್ದಾರೆ. ರಂಗ್ ಮಂಜು ಸಂಭಾಷಣೆ ಬರೆದಿದ್ದಾರೆ. ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ ``ನಿರ್ಭಯ 2`` ಚಿತ್ರಕ್ಕಿದೆ.
``ಪಾರು`` ಖ್ಯಾತಿಯ ಮೋಕ್ಷಿತ ಪೈ, ಅರ್ಜುನ್ ಕೃಷ್ಣ, ಹರೀಶ್ ಹೆಚ್ ಆರ್, ಕುಸುಮ, ರಾಧಾ ರಾಮಚಂದ್ರ, ಅಶೋಕ್, ಗಣೇಶ್ ರಾವ್, ಹನುಮಂತೇ ಗೌಡ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.