Chief Editor
Manohar. R (Manu)
Photo Journalist
chitrataramanu@gmail.com
+91 9845549026
2047ರಲ್ಲಿ ನಡೆಯುವ ಜಗತ್ತಿನ ಚಿತ್ರಣವನ್ನು ತೋರುವ ಕಿರುಚಿತ್ರ
Posted date: 02 Wed, Feb 2022 12:52:58 PM
ಚಲನಚಿತ್ರ ಮಾಡುವಾಗ VFX ಎಂಬ ವಿಚಾರ ಬಂದಾಗ ಅದು ಕಷ್ಟ ಅಥವಾ ದುಬಾರಿ ಎಂದು ಅದನ್ನು ನಾವು ಬಳಸದೇ ಇರುವುದು ಹೆಚ್ಚು ಆದರೆ ನಮ್ಮ ತಂಡ ಅದನ್ನೇ  ಸವಾಲಾಗಿ ಸ್ವೀಕರಿಸಿ VFX ಬಳಸಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ಕೊವೀಡ್ ಲಾಕ್ ಡೌನ್ ಸಂದರ್ಭದಲ್ಲಿ ಕೇವಲ ಒಂದು ದಿನದಲ್ಲಿ ಚಿತ್ರೀಕರಣ ಮುಗಿಸಿ ಯಾವುದೇ ಸ್ಟೂಡಿಯೋ ಸಹಾಯವಿಲ್ಲದೆ ಕೇವಲ ಒಂದು ಕಂಪ್ಯೂಟರ್ ಬಳಸಿಕೊಂಡು ಸಂಕಲನ ಮಾಡುವುದರ ಜೊತೆಗೆ ಈಗಿನ ತಂತ್ರಜ್ಞಾನದಲ್ಲಿ ಸಿಗುವ Open Source VFX ತಂತ್ರಜ್ಞಾನ ಬಳಸಿಕೊಂಡು ಚಿತ್ರವನ್ನು ಯಾವುದೇ ಬಂಡವಾಳ ಹಾಕದೇ ಒಂದು ಉತ್ತಮವಾದ ಚಿತ್ರವನ್ನು ನಿರ್ಮಾಣ ಮಾಡಿ ನಿಮ್ಮ ಮುಂದೆ ಬಂದಿದ್ದೇವೆ.

ತಂತ್ರಜ್ಞಾನವೂ ಬಳಸುವುದರ ಮೇಲೆ ಅದು ಮಾನವನಿಗೆ ಮಾರಕವೂ ಆಗಬಹುದು ಪೂರಕವೂ ಆಗಬಹುದು. ಭವಿಷ್ಯದಲ್ಲಿ ತಂತ್ರಜ್ಞಾನ ಬಳಸಿಕೊಂಡು ಮಾನವ ಹೇಗೆ ರೋಬೋಟ್ ಅನ್ನು ತನ್ನ ಗುಲಾಮನಾಗಿ ಮಾಡಿಕೊಳ್ಳುತ್ತಾನೆ ಮತ್ತು ಅದನ್ನು ಹೇಗೆ ದುರ್ಬಳಕೆ ಮಾಡುತ್ತಾ ಮನುಷ್ಯನ ಮನಸ್ಥಿತಿಯ ಅನಾವರಣ ಈ ಚಿತ್ರದಲ್ಲಿ Cyberpunk fashion ಬಳಸಿಕೊಂಡು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಕನ್ನಡದಲ್ಲಿ ಇದೊಂದು ವಿಶಿಷ್ಟ, ವಿಭಿನ್ನ ಪ್ರಯತ್ನ ಅಂತ ಹೇಳಬಹುದು.ಒಂದು ಅತ್ಯುತ್ತಮ ತಂಡವೊಂದು ಇದ್ದರೆ ಎಂತಹ ಕನಸನ್ನು ನನಸು ಮಾಡಲು ಸಾಧ್ಯ ಎಂಬುದುರ ಮುನ್ನುಡಿಯಂತೆ ಇದೆ ಈ ಪ್ರಯತ್ನ. 

ತಂತ್ರಜ್ಞಾನ ಮುಂದುವರಿದು 2047 ವರ್ಷದಲ್ಲಿ ಹೇಗೆ ಇರಬಹುದು ಎಂಬ ಕಲ್ಪನೆಯ ಕನಸಿಗೆ ನೀರೆರೆದು ನನಸು ಮಾಡುವಲ್ಲಿ ಈ ಚಿತ್ರದ  ಕಥೆ, ಚಿತ್ರಕಥೆ, ನಿರ್ದೇಶನ,ಸಂಕಲನದ ಜೊತೆಗೆ VFX ಅನ್ನು ನರಸಿಂಹ ಮೂರ್ತಿ.ಜಿ ಇವರು ಯಶಸ್ವಿಯಾಗಿದ್ದಾರೆ.


ಇವರಿಗೆ ಜೊತೆಯಾಗಿ VFX ಹಾಗೂ ನಿರ್ದೇಶನದಲ್ಲಿ ಯೋಗೀಶ್ವರ್ ಸಹಾಯ ಮಾಡಿದ್ದಾರೆ.

ಈ ಚಿತ್ರವನ್ನು ವಿಷ್ಣುರೂಪಿಣಿ ಫಿಲ್ಮ್ಸ್  ಅವರು ನಿರ್ಮಾಣ ಮಾಡಿದ್ದಾರೆ.

ನಿರ್ದೇಶನ ತಂಡದಲ್ಲಿ ವಿರಾಗ್ ದುಲಿಯಾ,ದೀಪಕ್ ಕಡೆರಮನೆ, ನವೀನ್ ಚಂದ್ರ ಹಾಗೂ ಪ್ರಸನ್ನಕುಮಾರ್ ಸಹಾಯಕರಾಗಿ.

ಈ ಚಿತ್ರಕ್ಕೆ ವೆಂಕಟೇಶ್. ಕೆ ಹಾಗೂ ಆದಿತ್ಯ ವಿ ನಾಯಕ್ ಅವರ ಸಂಗೀತವಿದೆ. ಛಾಯಾಗ್ರಹಣವನ್ನು ವರುಣ್.ಡಿ.ಕೆ ಮಾಡಿದ್ದಾರೆ

ತಾರಾಗಣದಲ್ಲಿ ಸೂರ್ಯ ಮನೋಹರನ್, ರಮ್ಯಕೃಷ್ಣ ಮತ್ತು ಮದನ್ ರಾಜ್ ನಟಿಸಿದ್ದಾರೆ.

ಈ ಚಿತ್ರವನ್ನು ಕನ್ನಡ ಚಿತ್ರರಂಗದ ಅನೇಕ ಗಣ್ಯರು ನೋಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - 2047ರಲ್ಲಿ ನಡೆಯುವ ಜಗತ್ತಿನ ಚಿತ್ರಣವನ್ನು ತೋರುವ ಕಿರುಚಿತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.