Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಅಂತಿಮ ಸತ್ಯ`` 4 ಕಥೆಗಳ ಸಂಗಮ ಮತ್ತೆ ಕನ್ನಡಕ್ಕೆ ಬಂದ ಜೂಲಿ ಲಕ್ಷ್ಮಿ
Posted date: 03 Thu, Feb 2022 09:15:10 PM
ಚಂದನದಗೊಂಬೆ, ಗಾಳಿಮಾತು, ಬೆಂಕಿಯ ಬಲೆಯಂಥ ಅಮೋಘ ಚಿತ್ರಗಳ ಮೂಲಕ ಕನ್ನಡ ಚಿತ್ರ ರಸಿಕರ ಹೃದಯಾಂತರಾಳದಲ್ಲಿ ನೆಲೆಸಿರುವ ನಟಿ ಲಕ್ಷ್ಮಿ. 
ಬಹಳ ವರ್ಷಗಳ ನಂತರ ಜೂಲಿ ಲಕ್ಷ್ಮಿ ಅವರು ಕನ್ನಡದಲ್ಲಿ ಬಣ್ಣ ಹಚ್ಚುತ್ತಿರುವ ಚಿತ್ರ ಅಂತಿಮ ಸತ್ಯ. ಶಿವಸತ್ಯ ಅವರ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬನಶಂಕರಿಯ ‌ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ದೇವರ‌ ಮೇಲೆ ಚಿತ್ರದ ಪ್ರಥಮ  ದೃಶ್ಯವನ್ನು ಚಿತ್ರೀಕರಿಸಲಾಯಿತು. ಶಾಸಕ ರವಿ ಸುಬ್ರಮಣ್ಯ ಅವರು  ಕ್ಯಾಮೆರಾ ಸ್ವಿಚಾನ್ ಮಾಡಿದರೆ, ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರು  ಕ್ಲಾಪ್ ಮಾಡಿದರು. 
ನಾಲ್ಕು ವಿಭಿನ್ನ ಕಥೆಗಳನ್ನು ಒಳಗೊಂಡಿರುವ ಈ ಚಿತ್ರದ ಒಂದು ಕಥೆಯಲ್ಲಿ ಶರತ್ ಬಾಬು ಹಾಗೂ ಲಕ್ಷ್ಮಿ ಅವರ ಪಾತ್ರಗಳು ಬರಲಿದ್ದು, ಚಿತ್ರದ ಕೊನೆಯಲ್ಲಿ ಈ ಎಲ್ಲಾ ಕಥೆಗಳು ಒಟ್ಟಿಗೆ ಸೇರುತ್ತವೆ. ನಿರ್ದೇಶಕರು ತಮ್ಮ ಜೀವನದಲ್ಲಿ ನೋಡಿದ,  ಅನುಭವಿಸಿದ ಘಟನೆಗಳನ್ನೇ ಇಟ್ಟುಕೊಂಡು ಚಿತ್ರದ ಕೆಲವು ಸನ್ನಿವೇಶಗಳನ್ನು ಹೆಣೆದಿದ್ದಾರೆ. ಇದೇ ತಿಂಗಳ ೧೦ ರಿಂದ ಈ ಚಿತ್ರದ ಚಿತ್ರೀಕರಣ ಆರಂಭಿಸಲಾಗುವುದು. ಬನಶಂಕರಿ ಮೂವೀಸ್ ಲಾಂಛನದಲ್ಲಿ ಹೆಚ್.ಜೆ.ದೇವರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಾರ್ತೀಕ್ ಶರ್ಮ ಅವರ ಸಂಗೀತ, ಸಾಗರ್ ಆತಡಕರ್ ಅವರ ಛಾಯಾಗ್ರಹಣ ಅಂತಿಮ ತೀರ್ಪು ಚಿತ್ರಕ್ಕಿದೆ. ಚಿತ್ರಕ್ಕಿದೆ. ಸುನಿಲ್ ಪುರಾಣಿಕ್, ಪ್ರಮೋದ್ ಶೆಟ್ಟಿ, ಅರ್ಚನಾ ಜೋಯಿಸ್,ಲಕ್ಷ್ಮಿ ಗೋಪಾಲಸ್ವಾಮಿ, ಸಂದೀಪ್ ನೀನಾಸಂ ಹುಚ್ಚ ವೆಂಕಟ್ ಮುಂತಾದವರ ತಾರಾಗಣ ಚಿತ್ರದಲ್ಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಅಂತಿಮ ಸತ್ಯ`` 4 ಕಥೆಗಳ ಸಂಗಮ ಮತ್ತೆ ಕನ್ನಡಕ್ಕೆ ಬಂದ ಜೂಲಿ ಲಕ್ಷ್ಮಿ - Chitratara.com
Copyright 2009 chitratara.com Reproduction is forbidden unless authorized. All rights reserved.