Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಜೇಮ್ಸ್`ಗೆ ದಾರಿ ಮಾಡಿಕೊಟ್ಟ ರಾಜಮೌಳಿ.. ಮಾರ್ಚ್ 18 ಅಲ್ಲ ಮಾರ್ಚ್ 25ಕ್ಕೆ RRR ಸಿನಿಮಾ ರಿಲೀಸ್!
Posted date: 03 Thu, Feb 2022 09:37:34 PM
ಎಸ್ ಎಸ್ ರಾಜಮೌಳಿ ನಿರ್ದೇಶನದ ದೃಶ್ಯ ವೈಭೋಗದ RRR ಸಿನಿಮಾ ಬಿಡುಗಡೆಗೆ ಹೊಸ ಮುಹೂರ್ತ ನಿಗದಿಯಾಗಿದೆ. ಮಾರ್ಚ್ 18 ಹಾಗೂ ಎಪ್ರಿಲ್ 28 ಎರಡು ಪ್ರಮುಖ ದಿನಗಳನ್ನು ಲಾಕ್ ಮಾಡಿದ್ದ ರಾಜಮೌಳಿ ಈ ಎರಡು ದಿನಗಳನ್ನು ಬಿಟ್ಟು ಈಗ ಹೊಸ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ. ಅದಕ್ಕೆ ಕಾರಣ ಜೇಮ್ಸ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾಗಳಲ್ಲಿ ಒಂದಾಗಿರುವ ಜೇಮ್ಸ್ ಸಿನಿಮಾ ಮಾರ್ಚ್ 17 ಅಪ್ಪು ಬರ್ತ್ ಡೇ ಪ್ರಯುಕ್ತ ರಿಲೀಸ್ ಮಾಡಲು ಚಿತ್ರತಂಡ ಈಗಾಗ್ಲೇ ಸಜ್ಜಾಗಿದೆ. ಹೀಗಾಗಿ ರಾಜಮೌಳಿ ಅಪ್ಪುಗಾಗಿ ತಮ್ಮ ದಾರಿ ಬದಲಿಸಿದ್ದಾರೆ.

ದೇಶದಲ್ಲಿ ಕೊರೋನಾ ಪ್ರಕರಣಗಳು ಕೊಂಚ ಕೊಂಚವೇ ಕಡಿಮೆಯಾಗುತ್ತಿವೆ. ಹಾಗೇಯೇ  ಕೆಲ ರಾಜ್ಯಗಳಲ್ಲಿ 100 ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ,. ಹೀಗಾಗಿ ರಾಜಮೌಳಿ ಗಟ್ಟಿ ಮನಸು ಮಾಡಿ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಜ್ಯೂನಿಯರ್ ಎನ್‌ಟಿಆರ್, ರಾಮ್ ಚರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಿರುವ RRR ಸಿನಿಮಾದ ಈಗಾಗ್ಲೇ ಕುತೂಹಲದ ಚಿಟ್ಟೆಯಾಗಿದೆ.

RRR ಚಿತ್ರದಲ್ಲಿ ನಟ ರಾಮಚರಣ್ ತೇಜ್ ಅವರು ಅಲ್ಲುರಿ ಸೀತಾ ರಾಮರಾಜು ಪಾತ್ರದಲ್ಲಿ, ಜ್ಯೂನಿಯರ್‌ ಎನ್‌ಟಿಆರ್‌ ಅವರು ಕೊಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. RRR ಸಂಪೂರ್ಣ ಕಾಲ್ಪನಿಕ ಸಿನಿಮಾವಾಗಿದ್ದು, ಬರೋಬ್ಬರಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ಡಿವಿವಿ ದಾನಯ್ಯ ನಿರ್ಮಾಣ ಮಾಡಿದ್ದು, ಎಂ ಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಕರ್ನಾಟಕದಲ್ಲಿ RRR ಸಿನಿಮಾವನ್ನು ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ವಿತರಣೆ ಮಾಡಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಜೇಮ್ಸ್`ಗೆ ದಾರಿ ಮಾಡಿಕೊಟ್ಟ ರಾಜಮೌಳಿ.. ಮಾರ್ಚ್ 18 ಅಲ್ಲ ಮಾರ್ಚ್ 25ಕ್ಕೆ RRR ಸಿನಿಮಾ ರಿಲೀಸ್! - Chitratara.com
Copyright 2009 chitratara.com Reproduction is forbidden unless authorized. All rights reserved.