Chief Editor
Manohar. R (Manu)
Photo Journalist
chitrataramanu@gmail.com
+91 9845549026
ದೇವರಾಜ್ ಆರ್ ನಿರ್ಮಾಣದ 19.20.21 ಸಿನೆಮಾ ಗಣೇಶ ದೇವಸ್ಥಾನದಲ್ಲಿ ಮುಹೂರ್ತ
Posted date: 08 Tue, Feb 2022 03:05:19 PM

ಈ ಕೊರೋನೋತ್ತರ ಕಾಲಘಟ್ಟದಲ್ಲಿ, ಎಲ್ಲಾ ಉದ್ಯಮಗಳಂತೆ ಸಿನೆಮಾ ಉದ್ಯಮವೂ ಸಾಕಷ್ಟು ತೊಂದರೆ, ಸಂಕಷ್ಟಗಳನ್ನು ಎದುರಿಸುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಕನ್ನಡ ಚಿತ್ರರಂಗದಲ್ಲಿ ಉತ್ತಮವಾದ, ಸಧಬಿರುಚಿಯ ಸಿನೆಮಾಗಳನ್ನು ನಿರ್ಮಾಣ ಮಾಡಿ ಪ್ರೇಕ್ಷಕರ ಮುಂದಿಡಬೇಕು ಎಂಬ ಸದಾಶಯದೊಂದಿಗೆ ಈ ಹಿಂದಿನ ನಮ್ಮ ಆಕ್ಟ್-1978 ಸಿನೆಮಾ ನಿರ್ಮಾಣ ಮಾಡಿದ ನಿರ್ಮಾಪಕರಾದ ದೇವರಾಜ್ ಆರ್. ರವರು, ತಮ್ಮ ‘ಡಿ ಕ್ರಿಯೇಷನ್ಸ್’ ಬ್ಯಾನರಿನಡಿಯಲ್ಲಿ ಅದೇ ತಂಡದೊಂದಿಗೆ ಮತ್ತೊಂದು ಸಿನೆಮಾ ನಿರ್ಮಾಣ ಮಾಡಲು ಮುಂದಾಗಿದ್ದು, ಆ ಸಿನೆಮಾಗೆ 19.20.21 ಎಂಬ ಶೀರ್ಷಿಕೆಯನ್ನಿರಿಸಿದ್ದು, ಇಂದು 07-02-2022 ರಂದು, ಜಯನಗರ 4th Blockನ ಗಣೇಶ ದೇವಸ್ಥಾನದಲ್ಲಿ ತಂಡದ ಸದಸ್ಯರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಸಿನೆಮಾ ಮುಹೂರ್ತವನ್ನು ಮಾಡುವುದರ ಮೂಲಕ ಸಿನೆಮಾ ಚಟುವಟಿಕೆಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ. ಈ ಸಿನೆಮಾದ ಪ್ರಮುಖ ಪಾತ್ರದಲ್ಲಿ ಶೃಂಗಾ, ಕೃಷ್ಣಾ ಹೆಬ್ಬಾಳೆ, ಬಾಲಾಜಿ ಮನೋಹರ್, ಸಂಪತ್ ಕುಮಾರ್, ವೆಂಕಟೇಶ್ ಪ್ರಸಾದ್ ಹಾಗೂ ಸಿನೆಮಾ ಮತ್ತು ರಂಗಭೂಮಿಯ ಹಲವು ನಟರು ನಟಿಸುತ್ತಿದ್ದಾರೆ. ಈ ಸಿನೆಮಾದ ಚಿತ್ರೀಕರಣವನ್ನು ಧಾರವಾಡ, ಯಲ್ಲಾಪುರ, ಕರಾವಳಿಯ ಪ್ರಮುಖ ಸ್ಥಳಗಳಲ್ಲಿ ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲು ಯೋಜಿಸಿದ್ದು, ಚಿತ್ರೀಕರಣ ಪೂರ್ವದ ತಯಾರಿ ಪೂರ್ಣಗೊಳಿಸಿ ಶೀಘ್ರದಲ್ಲೇ ಚಿತ್ರೀಕರಣವನ್ನು ಆರಂಭಿಸಲಿದ್ದೇವೆ. ಈ ಹಿಂದಿನ ನನ್ನ ಎಲ್ಲಾ ಸಿನೆಮಾಗಳಿಗೆ ನೀವು ನೀಡಿದ ಪ್ರೋತ್ಸಾಹ, ಬೆಂಬಲ ಹಾಗೂ ಪ್ರೀತಿ ಈ ಸಿನೆಮಾದಲ್ಲೂ ಇರಲಿ ಎಂದು ಆಶಿಸುವ,

Kannada Cinema's Latest Wallpapers
Kannada Cinema's Latest Videos
Kannada Movie/Cinema News - ದೇವರಾಜ್ ಆರ್ ನಿರ್ಮಾಣದ 19.20.21 ಸಿನೆಮಾ ಗಣೇಶ ದೇವಸ್ಥಾನದಲ್ಲಿ ಮುಹೂರ್ತ - Chitratara.com
Copyright 2009 chitratara.com Reproduction is forbidden unless authorized. All rights reserved.