Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ`` ಚಿತ್ರತಂಡದಿಂದ ವಿಭಿನ್ನ ಪ್ರಚಾರ
Posted date: 11 Fri, Feb 2022 06:12:24 PM
ಚಿತ್ರ ನಿರ್ಮಾಣ ಮಾಡುವುದು ಎಷ್ಟು ಕಷ್ಟವೊ, ಅದಕ್ಕಿಂತಲೂ ಕಷ್ಟ ಚಿತ್ರವನ್ನು ಪ್ರೇಕ್ಷಕರಿಗೆ ತಲುಪುವಂತೆ ಮಾಡುವುದು.

ಬಿ.ಜಿ. ಮಂಜುನಾಥ್ ಅವರು ನಿರ್ಮಿಸಿರುವ "ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ" ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದೆ. 

ವಿನಾಯಕ ಕೋಡ್ಸರ ನಿರ್ದೇಶಿಸಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ದಿಗಂತ್, ಐಂದ್ರಿತ ರೆ, ರಜನಿ ರಾಘವನ್ ಇದ್ದಾರೆ. 
ರವೀಂದ್ರ ಜೋಶಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಬಿಡುಗಡೆಗೂ ಪೂರ್ವದಲ್ಲಿ ಚಿತ್ರತಂಡ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದೆ. ಉತ್ತರ ಕನ್ನಡ ಜಿಲ್ಲೆ ಯ ಶಿರಸಿ ಟಿ.ಎಸ್.ಎಸ್ ಅಡಿಕೆ ವ್ಯಾಪಾರಿ ಅಂಗಳ ಅಂದರೆ ಬಹು ಖ್ಯಾತಿ. ಇದರ ಸಹಯೋಗದೊಂದಿಗೆ  ಇದೇ ಇಪ್ಪತ್ತನೆಯ ತಾರೀಖು ಮಧ್ಯಾಹ್ನ ಮೂರರಿಂದ ಸಂಜೆ ಐದು ಮೂವತ್ತರವರೆಗೂ ಅಡಿಕೆ ಸುಲಿಯುವ ಸ್ಪರ್ಧೆ ಏರ್ಪಡಿಸಲಾಗಿದೆ. ಶಿರಸಿಯ ಟಿ.ಎಸ್.ಎಸ್ ಪ್ರಾಂಗಣದಲ್ಲಿ ಈ ಸ್ಪರ್ಧೆ ನಡೆಯಲಿದೆ. ಸುಮಾರು 200 ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ವಿಜೇತರಿಗೆ ಬಹುಮಾನ ಸಹ ಇದೆ. ದಿಗಂತ್, ಐಂದ್ರಿತ ರೆ , ರಂಜನಿ ರಾಘವನ್ ಹಾಗೂ ಚಿತ್ರತಂಡದ ಬಹುತೇಕ ಸದಸ್ಯರು ಅಂದು ಉಪಸ್ಥಿತರಿರುತ್ತಾರೆ.

ಚಿತ್ರದಲ್ಲಿ ದಿಗಂತ್ ಅಡಿಕೆ ಬೆಳೆಗಾರನಾಗಿದ್ದು, ಅಡಿಕೆ ಜೊತೆ ಪಾತ್ರದ ನಂಟಿದೆ. ಹೀಗಾಗಿ‌ ಮಲೆನಾಡಿನ ಜೀವನಾಡಿಯಾದ ಅಡಿಕೆ ಸುಲಿಯುವ ಸ್ಪರ್ಧೆ ಆಯೋಜಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ವಿನಾಯಕ ಕೋಡ್ಸರ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ`` ಚಿತ್ರತಂಡದಿಂದ ವಿಭಿನ್ನ ಪ್ರಚಾರ - Chitratara.com
Copyright 2009 chitratara.com Reproduction is forbidden unless authorized. All rights reserved.