ಈಗಾಗಲೇ ಚಿತ್ರೀಕರಣ ಮುಗಿಸಿ ಮಾತಿನ ಮನೆಯಲ್ಲಿರುವ `ಸೀತಮ್ಮನ ಮಗ` ಚಿತ್ರಕ್ಕೆ ಮತ್ತೊಂದು ಗೀತೆ ಸೇರ್ಪಡೆಯಾಗಿದೆ.
ನಿರ್ದೇಶಕ ಯತಿರಾಜ್ ಬರೆದಿರುವ ಗಂಧದಗುಡಿಯಲ್ಲಿ ಗಿಡಗಳ ನೆಡೋಣ..ಹಸಿರಲ್ಲೆ ಎಲ್ಲರು ಉಸಿರನು ಕಾಣೋಣ ಎಂಬ ಸಂದೇಶಭರಿತ ಗೀತೆಯನ್ನು ಇತ್ತೀಚೆಗೆ ರೇಣು ಸ್ಟುಡಿಯೋದಲ್ಲಿ ಧ್ವನಿಮುದ್ರಿಸಿಕೊಳ್ಳಲಾಯಿತು.
ವಿನು ಮನಸು ಅವರ ಸಂಗೀತ ಸಂಯೋಜನೆಯಲ್ಲಿ ಹಾಡಿದ ಮಾನಸಹೊಳ್ಳ ಈವತ್ತಿನ ಜನರೇಷನ್ ಮರೆತಿರುವುದನ್ನು ನೆನಪಿಸುವ ಹಾಡು ಇದಾಗಿದೆ. ಪರಿಸರ, ಸ್ವಚ್ಚತೆ, ಆರೋಗ್ಯ ಮತ್ತು ವಿದ್ಯೆಯ ಮಹತ್ವವನ್ನು ಸಾರುವ ಉತ್ತಮ ಗೀತೆ ಹಾಡಲು ದೊರೆತ್ತಿದ್ದು ನನಗೆ ಖುಷಿ ನೀಡಿದೆ ಎಂದು ಹೇಳಿದರು. ಕಥೆ, ಚಿತ್ರಕಥೆ, ಸಂಭಷಣೆ ಮತ್ತು ನಿರ್ದೇಶನ : ಯತಿರಾಜ್
ನಿರ್ಮಾಪಕ : ಕೆ ಮಂಜುನಾಥ್ ನಾಯಕ್
ಛಾಯಾಗ್ರಹಣ : ಜೀವನ್ ರಾಜ್
ಸಂಗೀತ : ವಿನು ಮನಸು
ಸಂಕಲನ : ಯತೀಶ್ ಕುಮಾರ್.
ಕಲಾ ನಿರ್ದೇಶನ : ಮೋಹನ್ ಬಿ ಕೆರೆ
ಸಹ ನಿರ್ದೇಶನ : ಶಶಿಕುಮಾರ್ ಇಜ್ಜಲಘಟ್ಟ
ಯತಿರಾಜ್, ಚರಣ್ ಕಾಸಲ, ಚೈತ್ರಾ, ಸೋನು ಸಾಗರ, ಬಸವರಾಜ್, ಬುಲೆಟ್ ರಾಜು, ಜೀವನ್ ರಾಜ್, ಮಂಜುನಾಥ್ ನಾಯಕ್ ಮುಂತಾದವರು ತಾರಾಬಳಗದಲ್ಲಿದ್ದಾರೆ.