Chief Editor
Manohar. R (Manu)
Photo Journalist
chitrataramanu@gmail.com
+91 9845549026
ಯತಿರಾಜ್ ನಿರ್ದೇಶನದ ಮೂರನೇ ಚಿತ್ರ ಮಾಯಾಮೃಗ
Posted date: 09 Wed, Mar 2022 10:47:34 AM
ಪೂರ್ಣಸತ್ಯ ಹಾಗೂ ಸೀತಮ್ಮನ ಮಗ ಚಿತ್ರಗಳ ನಂತರ ನಟ,ನಿರ್ದೇಶಕ ಯತಿರಾಜ್ ತಮ್ಮ ನಿರ್ದೇಶನದ ಮೂರನೇ ಚಿತ್ರ ಘೋಷಿಸಿದ್ದಾರೆ. 
ಚಿತ್ರದುರ್ಗದ ಜಯಲಕ್ಷ್ಮಿ ರಘು ಅವರ ನಿರ್ಮಾಣದ ನೂತನ ಚಿತ್ರಕ್ಕೆ `ಮಾಯಾಮೃಗ` ಎಂಬ ಶೀರ್ಷಿಕೆ ಇಟ್ಟಿದ್ದಾರೆ.
 
ಟಿ ಎನ್ ಸೀತಾರಾಂ ಅವರ ಜನಪ್ರಿಯ ಧಾರಾವಾಹಿ ಮಾಯಾಮೃಗ ದ ಹೆಸರೇ ನನ್ನ ಕಥೆಗೂ ಸೂಕ್ತ ಎನಿಸಿದ ಕಾರಣ ಅದನ್ನೇ ಅಂತಿಮಗೊಳಿಸಲಾಯಿತು ಎಂದು ವಿವರಣೆ ನೀಡುವ ಯತಿರಾಜ್, ಉಳಿದ ವಿವರಗಳನ್ನು ನೀಡಲು ಸ್ವಲ್ಪ ಸಮಯ ಬೇಕು ಎನ್ನುತ್ತಾರೆ.
 
ಸದ್ಯ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಅದಕ್ಕಾಗಿ ಇದೇ ತಿಂಗಳ 13 ರ ಭಾನುವಾರದಂದು ಚಿತ್ರದುರ್ಗದ ವಾಸವಿ ಶಾಲೆಯಲ್ಲಿ ಆಡಿಷನ್ ಕರೆಯಲಾಗಿದೆ. ನಿರ್ಮಾಪಕರು ದುರ್ಗದವರೇ ಆಗಿರುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ಅವರ ಆಶಯ ಎನ್ನುತ್ತಾರೆ ಯತಿರಾಜ್ .
 
ಅಪರೂಪದ ಕಥಾವಸ್ತು ಹೊಂದಿರುವ ಮಾಯಾಮೃಗದಲ್ಲಿ ಯತಿರಾಜ್ ಅವರೇ ನಾಯಕನಾಗಿ ಬಣ್ಣ ಹಚ್ಚುತ್ತಿದ್ದು, ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಪಟ್ಟಿ‌ ಶೀಘ್ರದಲ್ಲೇ ಹೊರ ಬೀಳಲಿದೆಯಂತೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಯತಿರಾಜ್ ನಿರ್ದೇಶನದ ಮೂರನೇ ಚಿತ್ರ ಮಾಯಾಮೃಗ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95