ಡಿ ಎಕ್ಸ್ ಮಾಕ್ಸ್ ಮತ್ತು ಸಿರಿ ಮ್ಯೂಸಿಕ್ ವತಿಯಿಂದ `ಜೇಮ್ಸ್`ಚಿತ್ರದ ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ನಿರ್ದೇಶಕ ಚೇತನ್ ಕುಮಾರ್, ಹಿರಿಯ ನಿರ್ದೇಶಕ
ನಾಗತ್ತಿಹಳ್ಳಿ ಚಂದ್ರಶೇಖರ್, ಕಲಾವಿದರುಗಳಾದ ಸ್ಪರ್ಶ ರೇಖ, ವನಿತಾವಾಸು, ದಿಶಾ ಪೂವಯ್ಯ, ಭಾವನಾ, ಲಾಸ್ಯನಾಗರಾಜ್, ಹರ್ಷಿಕ ಪೂಣಚ್ಛ, ಶಾನ್ವಿ ಶ್ರೀವಾತ್ಸವ್, ಸಂತೋಷ್, ದಿವ್ಯ ಉರಡಗ, ಮೇಘನಾ ರಾಮ್, ಭುವನ್ ಪೊನ್ನಪ್ಪ, ಸಾಹಿತಿ ಡಾ|| ವಿ.ನಾಗೇಂದ್ರಪ್ರಸಾದ್, ನಟ ಪ್ರಥಮ್, ನಿರ್ದೇಶಕ ಶಶಾಂಕ್‌ರಾಜ್, ಐಎಎಸ್ ಅಧಿಕಾರಿ ದಯಾನಂದ್ ಮುಂತಾದ ಗಣ್ಯರು, ಅನೇಕ ನಟನಟಿಯರು ಹಾಗೂ ಚಿತ್ರರಂಗದ ಗಣ್ಯರು "ಜೇಮ್ಸ್" ಚಿತ್ರವನ್ನು ವೀಕ್ಷಣೆ ಮಾಡಿದರು.
ಮಾಲ್ ನ ಎಲ್ಲಾ ಆಡಿಗಳು ಚಿತ್ರರಂಗ ಹಾಗೂ ವಿವಿಧ ಕ್ಷೇತ್ರದ ಗಣ್ಯರಿಂದ ತುಂಬಿ ಹೋಗಿದ್ದವು.
ಪ್ರದರ್ಶನದ ನಂತರ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಅಭಿನಯವನ್ನು ಕೊಂಡಾಡಿದ್ದ ಗಣ್ಯರು, ಅವರೊಂದಿಗಿನ ಸ್ನೇಹವನ್ನು ಮೆಲುಕು ಹಾಕಿ ಭಾವುಕರಾದರು.