Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಾಮರ್ಥ್ಯ ಮೊದಲ ಪ್ರತಿ ಸಿದ್ಧ
Posted date: 22 Tue, Mar 2022 03:31:30 PM
ಕಾರ್ತಿಕ್ ಮೂವೀಸ್ ಲಾಂಛನದಲ್ಲಿ ರಾಜರಬಂಡಿ ಕಾರ್ತಿಕ್ ನಿರ್ಮಿಸುತ್ತಿರುವ ಸಾಮರ್ಥ್ಯ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರದ ನಿರ್ದೇಶನ ಹೆಚ್.ವಾಸು. ಇದು ಇವರ ೨೪ನೇ ಚಿತ್ರ ಈ ಹಿಂದೆ ಲಾಲಿಹಾಡು, ಇಂದ್ರ, ಕೋಬ್ರ, ವಿರಾಟ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು. ಚಿತ್ರಕ್ಕೆ ಛಾಯಾಗ್ರಹಣ-ಎ.ವಿ. ಕೃಷ್ಣಕುಮಾರ್(ಕೆ.ಕೆ), ಸಂಗೀತ-ಅರುಣ್ ಆಂಡ್ರ್ಯು, ಸಾಹಿತ್ಯ-ಕೆ. ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ವಿಶ್ವಾ.ಜಿ, ಸಾಹಸ-ಅರ್ಜುನ್, ಡ್ಯಾನಿ, ಕೌರವ ವೆಂಕಟೇಶ್, ವಿನೋದ್, ಸಂಕಲನ-ವೆಂಕಟೇಶ್-ಯುಡಿವಿ, ನೃತ್ಯ-ರಾಮು, ಸಹನಿರ್ದೇಶನ-ಎನ್ ಬಸವರಾಜು ಚೋರನಹಳ್ಳಿ, ನಿರ್ವಹಣೆ- ರಂಗಸ್ವಾಮಿ,  ತಾರಾಗಣದಲ್ಲಿ - ಬಾಲಾಜಿ ಶರ್ಮ, ಗಗನ ಮಧು, ಶೋಭರಾಜ್, ಅವಿನಾಶ್, ದಶರತ್ ಅಭಿ, ರವೀಂದ್ರನಾಥ್, ಪೆಟ್ರೋಲ್ ಪ್ರಸನ್ನ, ಮಡೆನೂರು ಮನು, ಸ್ವಾತಿ, ಶಶಿಕುಮಾರ್, ಮುಂತಾದವರಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು, ಸಕಲೇಶಪುರ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಲವ್ & ಕ್ರೈಂ ಕಥಾ ವಸ್ತುವುಳ್ಳ ಈ ಕಥೆಯನ್ನು ಈಗಿನ ಕಾಲದ ಸಮಾಜಕ್ಕೆ ಹೊಂದಿಕೊಳ್ಳುವಂತಹ ಹಲವು ತಿರುವುಗಳು ಈ ಲವ್ ಸ್ಟೋರಿಯಲ್ಲಿದೆ.  
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಾಮರ್ಥ್ಯ ಮೊದಲ ಪ್ರತಿ ಸಿದ್ಧ - Chitratara.com
Copyright 2009 chitratara.com Reproduction is forbidden unless authorized. All rights reserved.