ಜೈಸಿಂಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್,ಕೆ, ಭವಾನಿ ಹೇಮಂತ್ ನಿರ್ಮಾಣದ ತ್ರಿವೇದಂ ಚಿತ್ರಕ್ಕೆ ಮೂರು ಕಥೆಗಳುಳ್ಳ ಈ ಚಿತ್ರದಲ್ಲಿ ದ್ವತೀಯ ಹಂತದ ಚಿತ್ರೀಕರಣ ಶಿರ್ಕೆ ಅಪಾರ್ಟ್‌ಮೆಂಟ್ಸ್ ಮಾಗಡಿ ರಸ್ತೆಯ ರಾಕಿ ರೆಸಿಡನ್ಸಿ ಮುಂತಾದ ಕಡೆಗಳಲ್ಲಿ ಸಾರ್ಥಕವಾಯ್ತು ಬುಡ್ಲ ಬಡಜೀವ ಜೋಪಾನ್ವಾಗಿ ಕಾಯ್ಕೊ ಈ ಹೂವ ಬೆಳ್‌ಕರ‍್ದೋಯ್ತುಕಣ್ಲ ನಿನ್ ಬಾಳು ಬೆಳ್‌ದಿಂಗ್‌ಳಂಗೆ ಬಂದ್ಲು ನಿಂಗೀವ್ಳು ಇನ್ನೇನಪ್ಪ ಬೇಕು ನಿಂಗೀಗ ಇವ್ಳೆ ಸುಗ್ಗಿ ಸಂಕ್ರಾಂತಿ ಈ ಗೀತೆಯಲ್ಲಿ ಶಶಿ ಶಂಕರ್, ಭಾವನ ಶ್ರೀನಿವಾಸ್ ಅಭಿನಯದಲ್ಲಿ ಹೈಟೆ ಮಂಜು ನೃತ್ಯ ನಿರ್ದೇಶನದಲ್ಲಿ ನಡೆಯಿತು, ಅಲ್ಲದೆ ಮಾಸ್ ಮಾದ ನೇತೃತ್ವದಲ್ಲಿ ಶಶಿಶಂಕರ್, ಯಾದವರಾಜು, ರಕ್ಷಿತ್ ಆರ್ಯ, ಚಏತನ್, ಮಿಲ್ಕಿ ಮಾಸ್ ಮಾದ, ಇವರುಗಳ ಹೊಡೆದಾಟದ ದೃಶ್ಯವನ್ನು ರಾಜರಾಜೇಶ್ವರಿ ಗುಡ್ಡದ ಬಳಿ ನಡೆದು ೨ನೇ ಹಂತದ ಚಿತ್ರೀಕರಣ ಪೂರ್ಣಗೊಂಡಿತು. ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಅರುಣ್ ಜೈ ರಾಮ್, ಪ್ರೊಡಕ್ಷನ್ ಡಿಸೈನರ್-ವಿಜಯ್ ರಾಮ್, ಮಂಜುನಾಥ್ ನೆಲಮಂಗಲ, ಛಾಯಾಗ್ರಹಣ-ಕಿರಣ್ ಹಂಪಾಪು, ಸಂಗೀತ-ರಘು ಧನ್ವಂತ್ರಿ, ಸಹನಿರ್ದೇಶನ-ರೋಹಿತ್ ಸಾಕಿಮುದ್ದು, ರಾಜ್ ಬನ್ನೂರು, ಸಹಾಯಕ ನಿರ್ದೇಶನ-ರಕ್ಷಿತ್ ಆರ್ಯ, ವಿಶ್ವರಾಜ್, ಸಾಹಸ- ಮಾಸ್ ಮಾದು, ಕಲೆ- ಮಹೇಶ್ ಸಾತನೂರು, ನೃತ್ಯ- ಹೈಟ್ ಮಂಜು,. ಸಾಹಿತ್ಯ- ವಿ ನಾಗೇಂದ್ರ ಪ್ರಸಾದ್, ಅರಸು ಅಂತಾರೆ, ನಿರ್ವಹಣೆ-ವೆಂಕಟೇಶ್. ತಾರಾಗಣದಲ್ಲಿ, ಪ್ರತಾಪ್ ನಾರಾಯಣ್, ಅಚ್ಯುತ್ ಕುಮಾರ್, ಶಶಿಶಂಕರ್, ಭಾವನಾ ಶ್ರೀನಿವಾಸ್, ಧರ್ಮಣ್ಣ, ಗೋಪಾಲಕೃಷ್ಣ ಶ್ರೀನಿವಾಸ್, ಸ್ಪಂದನ, ದಿನೇಶ್ ಮಂಗಳೂರು, ಪೆಟ್ರೋಲ್ ಪ್ರಸನ್ನ. ನೀನಾಸಂ ಅಶ್ವಥ್, ಇಷ್ಟ ಸಂತೊಷ್, ಮಾನ್ಯ, ಮಳವಳ್ಳಿ ಸಾಯಿಕೃಷ್ಣ, ಶೈಲೇಶ್ ಕೆಂಗೇರಿ, ಭಾರತಿ, ವಿಜಯರಾಂ, ಮಂಜುನಾಥ್, ಜಗದೀಶ್ ಕೊಪ್ಪ ಮುಂತಾದವರಿದ್ದಾರೆ.