Chief Editor
Manohar. R (Manu)
Photo Journalist
chitrataramanu@gmail.com
+91 9845549026
ಟಕೀಲಾ ಡಬ್ಬಿಂಗ್ ಮುಕ್ತಾಯ
Posted date: 22 Tue, Mar 2022 03:36:38 PM
ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ (ವಿದ್ಯಾರ್ಥಿ, ಮುನಿಯ, ಜನ್‌ಧನ್ ನಿರ್ದೇಶಕ) ನಿರ್ಮಿಸುತ್ತಿರುವ ಟಕೀಲಾಕ್ಕೆ ಪ್ರಸಾದ್ ಲ್ಯಾಬ್‌ನ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು.  ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ನಿರ್ದೇಶನ, ಕೆ.ಪ್ರವೀಣ್ ನಾಯಕ್-ಇವರು ಹಿಂದೆ ಜಡ್ ಹೂಂ ಅಂತೀಯಾ ಉಹೂಂ ಅಂತೀಯಾ ಮೀಸೆ ಚಿಗುರಿದಾಗ ಚಿತ್ರಗಳನ್ನು ನಿರ್ದೇಶಿಸಿದ್ದರು. ಛಾಯಾಗ್ರಹಣ ಪಿ.ಕೆ.ಹೆಚ್. ದಾಸ್, ಸಂಗೀತ-ಟಾಪ್‌ಸ್ಟಾರ್ ರೆಣು, ಸಂಕಲನ-ಗಿರೀಶ್, ಕಲೆ-ಪ್ರಶಾಂತ್, ಸಹನಿರ್ಮಾಪಕರು-ಆರ್.ತ್ಯಾಗರಾಜ್, ಗಿರೀಶ್ ಕಂಪ್ಲಾಪುರ್, ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ನಿಖಿತಾ ಸ್ವಾಮಿ, ನಾಗೇಂದ್ರ ಅರಸ್, ಕೋಟೆ ಪ್ರಭಾಕರ್ ಸುಮನ್, ಜಯರಾಜ್, ಸುಷ್ಮಿತಾ, ಪ್ರವೀಣ್ ನಾಯಕ್, ಮುಂತಾದವರಿದ್ದಾರೆ. ಈ ಚಿತ್ರದ ಚಿತ್ರೀಕರಣ, ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರದಲ್ಲಿ ನಡೆದಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಟಕೀಲಾ ಡಬ್ಬಿಂಗ್ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.