Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅರಮನೆ ಮೈದಾನದಲ್ಲಿ ನಡೆದ ಮಹಾಯಜ್ಞಕ್ಕೆ ಶುಭ ಕೋರಿದ ಮಾನ್ಯ ಮುಖ್ಯಮಂತ್ರಿಗಳು
Posted date: 30 Wed, Mar 2022 08:56:34 AM
ಯಜ್ಞ ಮೂರ್ತಿ ದಾದಾಶ್ರೀ ಅವರ ನೇತೃತ್ವದಲ್ಲಿ ದಿಯಾ (ಇಂಟರ್ ನ್ಯಾಷನಲ್ ಯಜ್ಞಂ ಅಸ್ತು)ಸಂಸ್ಥೆಯು ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ  ಮಹಾಯಜ್ಞ ಕಾರ್ಯಕ್ರಮ ಬೆಂಗಳೂರು  ಅರಮನೆ ಮೈದಾನದಲ್ಲಿ ಇತ್ತೀಚೆಗೆ 
ನೆರವೇರಿತು. 
ಈ ಸಮಾರಂಭಕ್ಕೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಶುಭ ಕೋರಿದ್ದಾರೆ.

ಪೂರ್ಣಹುತಿ ಸಮಯಕ್ಕೆ ಕೆ.ಪಿ.ಸಿ.ಸಿ‌ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಹೈಕೋರ್ಟಿನ ನ್ಯಾಯಮೂರ್ತಿ ಕೃಷ್ಣಮೂರ್ತಿ ಅವರು ನೆರವೇರಿಸಿದ್ದರು. ಬಾಲಿವುಡ್ ನಿರ್ದೇಶಕ ಮಧುರ ಬಂಡಾರಕರ್, ನಿರ್ಮಾಪಕ ಚಿನ್ನೇಗೌಡ್ರು, ನರಸಿಂಹ ಭಟ್ ಅವಧೂತರು ಅಲ್ಲದೆ ಉಡುಪಿ, ಕುಕ್ಕೆ ಸೇರಿದಂತೆ ಎಲ್ಲಾ ಮಠಾಧೀಶರುಗಳು ಈ ಮಹಾಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಮಯದಲ್ಲಿ  ಅಂಗವಿಕಲರಿಗೆ ವೀಲ್ ಚೇರ್ ವಿತರಣೆ, ಐವತ್ತಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ 
 ಇನ್ನಿತರ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ನಮ್ಮೊಂದಿಗೆ ರೋಟರಿ ಸಂಸ್ಥೆ ಸಹ ಕೈಜೋಡಿಸಿದೆ. ಮುಂದೆ ಈ ಮಹಾ ಯಜ್ಞವನ್ನು ಬೇರೆ ರಾಜ್ಯಗಳಲ್ಲೂ ಆಯೋಜಿಸುವ ಯೋಜನೆಯಿದೆ  ಎರಡು ಸಾವಿರಕ್ಕೂ ಅಧಿಕ ಜನ ಈ ಮಹಾ ಯಜ್ಞದ‌ಲ್ಲಿ ಅನ್ನದಾನ‌ ಪ್ರಸಾದ  ಸ್ವೀಕಾರ ಮಾಡಿದ್ದಾರೆ ಎಂದ ದಿಯಾ ಫೌಂಡೇಶನ್ ಸಂಸ್ಥೆ ಮುಖ್ಯಸ್ಥ ಶಂಕರ್ ಶ್ರೀನಿವಾಸ್, ಮನೆಮನೆಯಲ್ಲಿ ಯಜ್ಞ ಎನ್ನುವ ದಾದಾಶ್ರೀ ಅವರ ಆಶಯವನ್ನು ಯಶಸ್ವಿಗೊಳಿಸುವುದಾಗಿ ತಿಳಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅರಮನೆ ಮೈದಾನದಲ್ಲಿ ನಡೆದ ಮಹಾಯಜ್ಞಕ್ಕೆ ಶುಭ ಕೋರಿದ ಮಾನ್ಯ ಮುಖ್ಯಮಂತ್ರಿಗಳು - Chitratara.com
Copyright 2009 chitratara.com Reproduction is forbidden unless authorized. All rights reserved.