ಭುವನ್ ಸಿನಿಮಾಸ್ ಲಾಂಛನದಡಿಯಲ್ಲಿ ಸುರೇಶ್ ನಿರ್ಮಿಸುತ್ತಿರುವ ಅಂದೊಂದಿತ್ತು ಕಾಲ ಚಿತ್ರದ ಚಿತ್ರೀಕರಣವು ಬಹುತೇಕ ಸಂಪೂರ್ಣಗೊಂಡಿದೆ. ಈಗ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಸೇರ್ಪಡೆಯಾಗಿದ್ದು, ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇವರು ಅಭಿನಯಿಸುವ ಸನ್ನಿವೇಶಗಳನ್ನು ಏಪ್ರಿಲ್ ಮೊದಲ ವಾರದಲ್ಲಿ ನಗರದಲ್ಲಿ ಚಿತ್ರಿಸಿ ಕೊಳ್ಳಲಾಗುವುದು ಎಂದು ನಿರ್ಮಾಪಕ ಸುರೇಶ್ ತಿಳಿಸಿದ್ದಾರೆ.
ಈ ಹಿಂದೆ ರಾಜ್ ಕುಟುಂಬದಲ್ಲಿ ಡಾ|| ಶಿವರಾಜ್‌ಕುಮಾರ್ ಜೊತೆ ಕೊದಂಡರಾಮ ಚಿತ್ರದಲ್ಲಿ ಕಾಣಿಸಿಕೊಂಡ ರವಿಚಂದ್ರನ್ ಈಗ ವಿನಯ್ ರಾಜ್‌ಕುಮಾರ್ ಜೊತೆ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.
ಚಿತ್ರಕ್ಕೆ ಅರಸು ಅಂತಾರೆ, ಸಂತೋಷ್ ಮುಂದಿನಮನೆ ಸಂಭಾಷಣೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ವಿ. ರಾಘವೇಂದ್ರ ಸಂಗೀತ, ಎ.ಆರ್. ಕೃಷ್ಣ ಸಂಕಲನ, ಆರ್.ಜೆ. ರಘು ನೃತ್ಯ, ಅನಿಲ್ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರವನ್ನು ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕರ ಜೊತೆ ಕೆಲಸ ಮಾಡಿದ ಕೀರ್ತಿ ಈ ಚಿತ್ರ ನಿರ್ದೇಶಿಸುವುದರ ಮೂಲಕ ಚಿತ್ರರಂಗ ಪ್ರವೇಶಿಸಲಿದ್ದಾರೆ.
ತಾರಾಗಣದಲ್ಲಿ ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ, ನಿಶಾಮಿಲನ, ಅರುಣ ಬಾಲರಾಜ್ ಮೋಹನ್ ಜುನೇಜಾ, ಕಡ್ಡಿಪುಡಿ ಚಂದ್ರು, ಮಜಾ ಭಾರತ್ ಜಗ್ಗಪ್ಪ, ಧರ್ಮೆಂದ್ರ ಅರಸ್, ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ಗೋವಿಂದೇಗೌಡ ಮುಂತಾದವರಿದ್ದಾರೆ.