Chief Editor
Manohar. R (Manu)
Photo Journalist
chitrataramanu@gmail.com
+91 9845549026
ಭರ್ಜರಿ ಮೊತ್ತಕ್ಕೆ ಸೇಲ್ ಆಯಿತು ``ಭರ್ಜರಿ ಗಂಡು``ಹಿಂದಿ ರೈಟ್ಸ್
Posted date: 02 Sat, Apr 2022 05:53:24 PM
ಕಲೆ, ಸಂಸ್ಕ್ರತಿಯ ತವರಾಗಿರುವ ಮೈಸೂರು ಕನ್ನಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಶ್ ಸೇರಿದಂತೆ ಸಾಕಷ್ಟು ಅದ್ಭುತ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಸ್ಯಾಂಡಲ್ ವುಡ್ nalli ಹೆಸರು ಮಾಡುತ್ತಿರುವ ಕಿರಣ್ ರಾಜ್ ಕೂಡ ಮೈಸೂರಿನವರೇ ಎಂಬುದು ಗಮನಾರ್ಹ.

ಕಿರಣ್ ರಾಜ್ ಗೆ  ಅಪಾರ ಅಭಿಮಾನಿ ಸಮೂಹವಿದೆ. ತಮ್ಮ ನಟನೆಯಿಂದಲೇ  ಕರ್ನಾಟಕದ ತುಂಬಾ ಮನೆ ಮಾತಾಗಿರುವವರು ಕಿರಣ್ ರಾಜ್. 

ಕೆಲವು ಚಿತ್ರಗಳಲ್ಲಿ ನಟಿಸಿದ್ದಾರಾದರೂ, ಪೂರ್ಣಪ್ರಮಾಣದ ನಾಯಕನಾಗಿ ನಟಿಸಿರುವ ``ಬಡ್ಡೀಸ್``, ``ಭರ್ಜರಿ ಗಂಡು`` ಸೇರಿದಂತೆ ಹಲವು ಚಿತ್ರಗಳು ತೆರೆಗೆ ಬರಲು ಸಿದ್ದಾವಾಗುತ್ತಿದೆ. 
``ಭರ್ಜರಿ ಗಂಡು `` ಚಿತ್ರದ ಟೀಸರ್ ಬಿಡುಗಡೆ ಯಾಗಿ ವೀಕ್ಷಕರ ಮೆಚ್ಚುಗೆ ಪಡೆದಿದೆ ಈ ಚಿತ್ರದ ಹಿಂದಿ  ರೈಟ್ಸ್‌ ಬಿಡುಗಡೆಗೆ ಮುಂಚೆಯೇ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ.ಗುರುತೇಜ್ ಶೆಟ್ಟಿ ನಿರ್ದೇಶನದ  ``ಬಡ್ಡಿಸ್ ``ಚಿತ್ರದ ಫಸ್ಟ್ ಲುಕ್ ಕಳೆದ ವಾರ ಬಿಡುಗಡೆಯಾಗಿದ್ದು ವಿಭಿನ್ನ ಪೋಸ್ಟರ್ ನಿಂದಲೇ ಸಿನಿ ಪ್ರೀಯರ ಮನ ಗೆದ್ದಿದೆ 
ಟೀಸರ್ ಪೊಸ್ಟರ್ ನೋಡಿ ಖುಷಿಪಟ್ಟಿರುವ ಅಭಿಮಾನಿಗಳು ಈಗಾಗಲೇ ರಾಜ್ಯಾದ್ಯಂತ  ಅಭಿಮಾನಿಗಳ ಸಂಘ ಕೂಡ ತೆರೆದಿದ್ದಾರೆ. ಕಿರಣ್ ರಾಜ್ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ನಟಿಸಲು ಸಹಿ ಹಾಕಿದ್ದಾರೆ. 

ನಟನಾಗಿ ನಟನೆಗಷ್ಟೇ ಸೀಮಿತವಾಗದ ಕಿರಣ್ ರಾಜ್ ಸಮಾಜಮುಖಿ ಕೂಡ. ಕೋವಿಡ್ ಸಮಯದಲ್ಲಿ ಇವರು ಮಾಡಿದ ಸಮಾಜ ಕಾರ್ಯಗಳು ಅಷ್ಟಿಷ್ಟಲ್ಲ. 
ಸಮಾಜದಿಂದ ದೂರವೇ ಉಳಿದಿರುವ ತೃತೀಯ ಲಿಂಗಿಗಳಿಗೂ  ಕಿರಣ್ ರಾಜ್ ನೆರವಾಗಿದ್ದಾರೆ. ಇವರ ಸಹಾಯ ನೆನೆದು ಅವರು ಆನಂದಭಾಷ್ಪವನ್ನೇ ಸುರಿಸಿದ್ದಾರೆ. 

ಉತ್ತಮ ನಟನೆಯೊಂದಿಗೆ,  ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡು ಜನಾನುರಾಗಿಯಾಗಿರುವ ಕಿರಣ್ ರಾಜ್ ಅವರ ಸಿನಿಮಾ ಭವಿಷ್ಯ ಉಜ್ವಲವಾಗಿರಲಿ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಭರ್ಜರಿ ಮೊತ್ತಕ್ಕೆ ಸೇಲ್ ಆಯಿತು ``ಭರ್ಜರಿ ಗಂಡು``ಹಿಂದಿ ರೈಟ್ಸ್ - Chitratara.com
Copyright 2009 chitratara.com Reproduction is forbidden unless authorized. All rights reserved.