Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಬಾನದಾರಿಯಲ್ಲಿ`` ಪಯಣಿಸಲು ಸಿದ್ದರಾದ ಗೋಲ್ಡನ್ ಸ್ಟಾರ್ ಗಣೇಶ್
Posted date: 03 Sun, Apr 2022 07:35:06 PM
``ಮಳೆಯಲಿ ಜೊತೆಯಲಿ`` ಜೊತೆಯಾದ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಜೋಡಿ ಈಗ ``ಬಾನದಾರಿಯಲ್ಲಿ`` ಸಾಗಲಿದೆ.

ಇವರಿಬ್ಬರ ಕಾಂಬಿನೇಶನಲ್ಲಿ ಬರುತ್ತಿರುವ ಈ ಚಿತ್ರಕ್ಕೆ ``ಬಾನದಾರಿಯಲ್ಲಿ`` ಎಂದು ಹೆಸರಿಡಲಾಗಿದೆ. ಮೇನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. 

ಯುಗಾದಿ ಹಬ್ಬದ ಶುಭದಿನದಂದು ಪೋಸ್ಟರ್ ಬಿಡುಗಡೆಯಾಗಿದೆ. 

ಪ್ರೀತಂಗುಬ್ಬಿ ನಿರ್ದೇಶನದಲ್ಲಿ ಗಣೇಶ್ ಈ ಹಿಂದೆ ``ಮಳೆಯಲಿ ಜೊತೆಯಲಿ`` , ``ದಿಲ್ ರಂಗೀಲಾ`` ಹಾಗೂ ``99``  ಚಿತ್ರಗಳಲ್ಲಿ ನಟಿಸಿದ್ದರು. ಇದು ನಾಲ್ಕನೇ ಚಿತ್ರ.

``ಬಾನದಾರಿಯಲ್ಲಿ`` ಗೆ ನೋಡು ಎಂಥಾ ಚೆಂದ ಎಂಬ ಅಡಿಬರಹವಿದೆ. 

ವಿ.ಹರಿಕೃಷ್ಣ ಸಂಗೀತ ನಿರ್ದೇಶನ, ಪ್ರೀತ ಜಯರಾಂ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

 ಪುನೀತ್ ರಾಜಕುಮಾರ್ ಅವರು ಹಾಡಿದ್ದ ``ಬಾನದಾರಿಯಲ್ಲಿ`` ಹಾಡು ಇಂದಿಗೂ, ಎಂದೆಂದಿಗೂ ಜನಪ್ರಿಯ.. ಆ ಹಾಡಿನ ಮೊದಲ ಪದವೇ‌ ಈ ಚಿತ್ರದ ಶೀರ್ಷಿಕೆಯಾಗಿದ್ದು, ಆ ಹಾಡಿನಷ್ಟೇ ಈ ಚಿತ್ರ ಕೂಡ ಯಶಸ್ಸು ಕಾಣಲಿ..
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಬಾನದಾರಿಯಲ್ಲಿ`` ಪಯಣಿಸಲು ಸಿದ್ದರಾದ ಗೋಲ್ಡನ್ ಸ್ಟಾರ್ ಗಣೇಶ್ - Chitratara.com
Copyright 2009 chitratara.com Reproduction is forbidden unless authorized. All rights reserved.