Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಹಾವಿರ್ಯಾರ ಚಿತ್ರದ ಟೀಸರ್ ರಿಲೀಸ್
Posted date: 04 Mon, Apr 2022 09:23:45 AM
ಮಾಲಿವುಡ್ ನಟ ನಿವಿನ್ ಪೌಲಿ ನಾಯಕನಾಗಿ ನಟಿಸಿರುವ, ಶಾನ್ವಿ ಶ್ರೀವಾತ್ಸವ ನಾಯಕಿಯಾಗಿ ನಟಿಸಿರುವ  ಬಹುನಿರೀಕ್ಷಿತ ಮಲಯಾಳಂನ ‘ಮಹಾವಿರ್ಯಾರ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 
 
ನಿವಿನ್ ಪೌಲಿ ಜತೆಗೆ ಆಸಿಫ್ ಅಲಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಸಂಪೂರ್ಣ ಫ್ಯಾಂಟಸಿ ಕಥೆಯ ಹಿನ್ನೆಲೆಯಲ್ಲಿ ಸಾಗಲಿದೆ. ಟೈಮ್​ ಟ್ರಾವೆಲಿಂಗ್ ಸೇರಿ ಕಾನೂನು, ಕಟ್ಟಳೆ ಬಗ್ಗೆಯೂ ಚಿತ್ರ ಮಾತನಾಡಲಿದೆ. ವಿಶೇಷ ಏನೆಂದರೆ ನಿವಿನ್ ಅವರ ಹೋಮ್ ಬ್ಯಾನರ್ ನಿವಿನ್ ಜೂನಿಯರ್ ಪಿಕ್ಚರ್ಸ್ ಸಂಸ್ಥೆ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಪಿ.ಎಸ್​ ಶ್ಯಾಮ್​ನಾಸ್​ಅವರ ಇಂಡಿಯನ್ ಮೂವಿ ಮೇಕರ್ಸ್ ಸಂಸ್ಥೆಯೂ ಜಂಟಿಯಾಗಿ ಬಂಡವಾಳ ಹೂಡುತ್ತಿದೆ.
 
ವಿಶೇಷ ಏನೆಂದರೆ ಈ ಹಿಂದೆ ನಿವಿನ್ ಜತೆಗೆ ‘1983‘ ಮತ್ತು ‘ಆ್ಯಕ್ಷನ್ ಹೀರೋ ಬಿಜು’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಅಬ್ರಿದ್ ಶೈನ್, ‘ಮಹಾವಿರ್ಯಾರ’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದು, ಮೂರನೇ ಬಾರಿ ಒಂದಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ನಿಮಿನ್ ಮತ್ತು ಆಸಿಫ್ ಅಲಿ ಒಟ್ಟಿಗೆ ನಟಿಸದೇ 10 ವರ್ಷವಾಯ್ತು. ಇದೀಗ ದಶಕದ ಬಳಿಕ ಈ ಜೋಡಿ ಒಂದಾಗಿದೆ. 
 
ಚಿತ್ರದಲ್ಲಿ ಲಾಲ್, ಲಾಲು ಅಲೆಕ್ಸ್, ಸಿದ್ದೀಕಿ, ಶಾನ್ವಿ ಶ್ರೀವಾತ್ಸವ, ವಿಜಯ್ ಮೆನನ್, ಮೇಜರ್ ರವಿ, ಮಲ್ಲಿಕಾ ಸುಕುಮಾರನ್, ಕೃಷ್ಣಪ್ರಸಾದ್, ಸೂರಜ್ ಎಸ್ ಕುರುಪ್, ಸುಧೀರ್ ಕರಾಮನ, ಪದ್ಮರಾಜನ್ ರತೀಶ್, ಸುಧೀರ್ ಪರವೂರ್ ಸೇರಿ ಹಲವರು ನಟಿಸಿದ್ದಾರೆ. ಕರೊನಾ ಹಾವಳಿ ನಡುವೆಯೂ ದೊಡ್ಡ ಬಜೆಟ್​ನ ಈ ಸಿನಿಮಾದ ಶೂಟಿಂಗ್​ ರಾಜಸ್ಥಾನ, ಕೇರಳ ಸೇರಿ ಹಲವೆಡೆ ನಡೆದಿದ್ದು, ಚಂದ್ರು ಸೆಲ್ವರಾಜ್ ಛಾಯಾಗ್ರಹಣ ಮಾಡಿದ್ದಾರೆ. ಇಶಾನ್ ಛಾಬ್ರಾ ಸಂಗೀತ, ಮನೋಜ್ ಸಂಕಲನ, ಅನೀಸ್ ನಡೋಡಿ ಕಲಾ ನಿರ್ದೇಶನ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಹಾವಿರ್ಯಾರ ಚಿತ್ರದ ಟೀಸರ್ ರಿಲೀಸ್ - Chitratara.com
Copyright 2009 chitratara.com Reproduction is forbidden unless authorized. All rights reserved.