Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೇ ನಲ್ಲಿ ಓಂಪ್ರಕಾಶ್ ರಾವ್ ನಿರ್ದೇಶನದ ``ಚಂದ್ರಲೇಖ ರಿಟರ್ನ್ಸ್``
Posted date: 17 Sun, Apr 2022 05:38:10 PM
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ನಿರ್ದೇಶನದ `` ಚಂದ್ರಲೇಖ ರಿಟರ್ನ್ಸ್``ಚಿತ್ರ ಮೇ 25 ರಂದು ಆರಂಭವಾಗಲಿದೆ. ಇದು ಓಂಪ್ರಕಾಶ್ ರಾವ್ ಅವರ ನಿರ್ದೇಶನದ 48ನೇ ಚಿತ್ರ. 

``ಲವ್ ಮಾಕ್ಟೇಲ್`` ಚಿತ್ರದ ಮೂಲಕ ಜನಪ್ರಿಯರಾಗಿರುವ ಅಭಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನೂತನ ಪ್ರತಿಭೆ ಭೂಮಿಕ ಎಲ್ ಮಧುಸೂದನ್ ಈ ಚಿತ್ರದ ನಾಯಕಿ. ಅನನ್ಯ ಪಂಡಿತ್, ರಂಗಾಯಣ ರಘು, ಅಚ್ಯುತಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಅವಿನಾಶ್, ಸುಚೀಂದ್ರ ಪ್ರಸಾದ್, ಚಿತ್ರ ಶೆಣೈ, ಸಂಗೀತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಹಾರಾರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಓಂಪ್ರಕಾಶ್ ರಾವ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಎಂ.ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. 

ಓಂಪ್ರೊಡಕ್ಷನ್ ಲಾಂಛನದಲ್ಲಿ ಓಂಪ್ರಕಾಶ್ ರಾವ್ ಅವರೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೇ ನಲ್ಲಿ ಓಂಪ್ರಕಾಶ್ ರಾವ್ ನಿರ್ದೇಶನದ ``ಚಂದ್ರಲೇಖ ರಿಟರ್ನ್ಸ್`` - Chitratara.com
Copyright 2009 chitratara.com Reproduction is forbidden unless authorized. All rights reserved.