Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಓ ಮೈ ಲವ್` ಹಾಡಿಗೆ ಕೋಟಿ ಹಿಟ್ಸ್
Posted date: 19 Tue, Apr 2022 04:49:58 PM
ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್, ಕೀರ್ತಿ ಕಲ್ಕೆರೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ  ‌`ಓ ಮೈ ಲವ್` ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ಸ್ಮೈಲ್ ಶ್ರೀನು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ  ಈ ಚಿತ್ರದ ಹಾಡನ್ನು ರಿಯಲ್ ಸ್ಟಾರ್‌ ಉಪೇಂದ್ರ ಇತ್ತೀಚೆಗೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಆ ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ಕೋಟ್ಯಂತರ ಹಿಟ್ಸ್ ದಾಖಲಿಸಿ ಜನಪ್ರಿಯವಾಗಿದೆ.
‌‌   ‌‌‌‌
ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿರುವ ಈ ಹಾಡಿಗೆ ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. `ಏನಾಯ್ತೋ ಕಾಣೆ...` ಎಂಬ ಸಾಹಿತ್ಯವಿರುವ ಈ ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಯೂ ಟ್ಯೂಬ್ ಸೇರಿದಂತೆ ಫೇಸ್‌ಬುಕ್‌, ಇನ್ಸಟಾಗ್ರಾಮ್, ಮೋಜ್, ಟಕಾ ಟಕ್ ಹಾಗೂ ಶೇರ್ ಚಾಟ್ ಸೇರಿದಂತೆ ಅನೇಕ ಸೋಶಿಯಲ್ ಮೀಡಿಯಾ ಆ್ಯಪ್ಗಳಲ್ಲಿ ಓ ಮೈ ಲವ್ ಚಿತ್ರದ ಹಾಡು ಸಖತ್ ಸೌಂಡು ಮಾಡುತ್ತಿದೆ.
  ‌‌‌‌
ಎ2 ಮ್ಯೂಸಿಕ್ ಯೂ ಟ್ಯೂಬ್ ಚಾನಲ್  ಮೂಲಕ  ಬಿಡುಗಡೆಯಾಗಿರುವ ಈ ಹಾಡು  ರಿಲೀಸಾದ ಕೆಲವೇ ದಿನಗಳಲ್ಲಿ ಕೋಟ್ಯಂತರ ಹಿಟ್ಸ್ ದಾಖಲಿಸಿರುವುದು ವಿಶೇಷ. ಅಲ್ಲದೇ ಪ್ರಿ-ವೆಡ್ಡಿಂಗ್ ಶೂಟ್, ಮದುವೆ ಮೊದಲಾದ ಶುಭ ಸಮಾರಂಭಗಳಲ್ಲಿ ಈ ಹಾಡನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ಮತ್ತೊಂದು ವಿಶೇಷ. ಇನ್ನು ಈ ಹಾಡಿಗೆ ಕೊರಿಯೋಗ್ರಾಫರ್ ಮುರಳಿ ಅವರು ನೃತ್ಯ ಸಂಯೋಜನೆ ಮಾಡಿದ್ದು, ತುಂಬಾನೇ ಕಲರ್ಫುಲ್ ಆಗಿ ಮೂಡಿಬಂದಿದೆ. ತೆರೆಯ ಮೇಲೆ ಹಾಡು ಬಂದಾಗ ಪ್ರೇಕ್ಷಕರು ಖಂಡಿತಾ ಎಂಜಾಯ್ ಮಾಡಲಿದ್ದಾರೆ ಎಂಬುದು ನಿರ್ದೇಶಕರ ಅನಿಸಿಕೆ.  ನಿರ್ಮಾಪಕ ರಾಮಾಂಜಿನಿ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಜಿಸಿಬಿ  ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿದೆ. ನಿರ್ದೇಶಕ ಸ್ಮೈಲ್ ಶ್ರೀನು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
     
ಟಾಲಿವಿಡ್ ಖಳನಟ ದೇವ್ ಗಿಲ್, ಹಿರಿಯ ನಟ ಎಸ್.ನಾರಾಯಣ್, ಸಾಧುಕೋಕಿಲ, ಪವಿತ್ರಾ ಲೋಕೇಶ್, ಟೆನ್ನಿಸ್ ಕೃಷ್ಣ ಮೊದಲಾದವರು ಓ ಮೈ ಲವ್ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಓ ಮೈ ಲವ್ ಚಿತ್ರದ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಓ ಮೈ ಲವ್` ಹಾಡಿಗೆ ಕೋಟಿ ಹಿಟ್ಸ್ - Chitratara.com
Copyright 2009 chitratara.com Reproduction is forbidden unless authorized. All rights reserved.