Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಿರಣ್ ರಾಜ್ ಅಭಿನಯದ ``ಕನ್ನಡತಿ`` ಧಾರಾವಾಹಿ ಸದ್ಯದಲ್ಲೇ ಹಿಂದಿಯಲ್ಲಿ ಆರಂಭ
Posted date: 20 Wed, Apr 2022 05:26:11 PM
ಒಂದು ಕಾಲದಲ್ಲಿ ಹಿರಿತೆರೆ ಹಾಗೂ ಕಿರುತೆರೆಗೆ ಸಾಕಷ್ಟು ವ್ಯತ್ಯಾಸವಿತ್ತು. ಈಗ ಹಾಗಲ್ಲ. ಕಿರುತೆರೆಯಲ್ಲಿ ಸಾಕಷ್ಟು ಅದ್ದೂರಿ ಹಾಗೂ ಅಪಾರವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಅಷ್ಟೇ ಜಮಪ್ರಿಯವೂ ಆಗುತ್ತಿದೆ. ಜನಮನ್ನಣೆ ಪಡೆದ ಧಾರಾವಾಹಿಗಳಲ್ಲಿ ಕಿರಣ್ ರಾಜ್ ಅಭಿನಯದ `` ಕನ್ನಡತಿ`` ಕೂಡ ಒಂದು. ಇಲ್ಲಿ ಅಪಾರ ಮೆಚ್ಚುಗೆ ಪಡೆದಿರುವ ಈ ಧಾರಾವಾಹಿ ಈಗ ಹಿಂದಿಗೆ ಡಬ್ ಆಗಲಿದೆ. "ಅಜ್ನಾಬಿ ಬನೇ ಹಮ್ ಸಫರ್" ಎಂಬ ಹೆಸರಿನಲ್ಲಿ Colors rishtey uk 
 ವಾಹಿನಿಯಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ.

ಲಾಕ್ ಡೌನ್ ಸಮಯದಲ್ಲಿ ಅಲ್ಲಿನ ಎಷ್ಟೋ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳು ಇಲ್ಲಿ ಡಬ್ ಆಗಿ ಪ್ರಸಾರವಾಗಲು ಆರಂಭವಾದವು. ಆಗ ನಿಜಕ್ಕೂ ಹೀಗೆ ಆದರೆ ಮುಂದೇನು? ಎಂದು ಕೆಲವರಿಗೆ ಅನಿಸಿದು ಸಹಜ. ಈಗ ಇಲ್ಲಿನ ಜನಪ್ರಿಯ ಧಾರಾವಾಹಿ ``ಕನ್ನಡತಿ`` ಆ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತಿರುವುದು ನಿಜಕ್ಕೂ ಹೆಮ್ಮೆ. ಮರಾಠಿಯಲ್ಲೂ ಕೂಡ ಈ ಧಾರಾವಾಹಿ ರಿಮೇಕ್ ಆಗಿದೆ.

ನಟ  ಕಿರಣ್ ರಾಜ್ ಗೆ ಅಪಾರ ಅಭಿಮಾನಿಗಳನ್ನು ತಂದು ಕೊಟ್ಟ ಧಾರಾವಾಹಿ ``ಕನ್ನಡತಿ``. ಅದರಲ್ಲೂ‌ ಯುವಪೀಳಿಗೆಯವರಿಗಂತೂ ಕಿರಣ್ ರಾಜ್ ಕಂಡರೆ ಅಪಾರ ಅಭಿಮಾನ. ಅಂತಹ ಮನಮೋಹಕ ನಟ ಕಿರಣ್ ರಾಜ್. ಇವರ ನಟನೆಯ ಧಾರಾವಾಹಿಯೊಂದು ಹಿಂದಿಗೆ ಡಬ್ ಆಗುತ್ತಿರುವುದು ಕಿರಣ್ ರಾಜ್ ಅವರಿಗೂ ಖುಷಿ ತಂದಿದೆಯಂತೆ.

ಹಾಗೆ ನೋಡಿದರೆ ಕಿರಣ್ ರಾಜ್ ಅವರಿಗೆ ಹಿಂದಿ ಕಿರುತೆರೆ ಹೊಸದೇನಲ್ಲ. ಈ ಹಿಂದೆ ಕೂಡ ಹಿಂದಿ ಕಲರ್ಸ್ ವಾಹಿನಿಯ ಸಾಕಷ್ಟು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಿರಣ್ ರಾಜ್ ಅಭಿನಯಿಸಿದ್ದಾರೆ. 

ಕಿರುತೆರೆಯಷ್ಟೇ ಹಿರಿತೆರೆಯಲ್ಲೂ ಬ್ಯುಸಿಯಾಗಿರುವ ಕಿರಣ್ ರಾಜ್ ಅಭಿನಯದ ಬಹು ನಿರೀಕ್ಷಿತ 
``ಬಡ್ಡೀಸ್`` ಚಿತ್ರದ ಟೀಸರ್ ಏಪ್ರಿಲ್ 25 ರಂದು ಬಿಡುಗಡೆಯಾಗಲಿದೆ. ಚಿತ್ರ ಜೂನ್ ನಲ್ಲಿ ತೆರೆಗೆ ಬರಲಿದೆ. 
``ಬಡ್ಡೀಸ್`` ಬಿಡುಗಡೆಗೆ ಕಿರಣ್ ರಾಜ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಿರಣ್ ರಾಜ್ ಅಭಿನಯದ ``ಕನ್ನಡತಿ`` ಧಾರಾವಾಹಿ ಸದ್ಯದಲ್ಲೇ ಹಿಂದಿಯಲ್ಲಿ ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.