ವೀಕ್ಷಕರನ್ನು ಮತ್ತೆ ಮತ್ತೆ ಮನರಂಜನೆಯ ಹೊಸ ಲೋಕಗಳಿಗೆ ಕರೆದೊಯ್ಯಲು ನಿಶ್ಚಯಿಸಿರುವ ವೂಟ್ ಸೆಲೆಕ್ಟ್, ಇದೀಗ ಅವರನ್ನು ಹನಿಮೂನ್‌ಗೆ ಕರೆಯುತ್ತಿದೆ! ಹೌದು, ಹನಿಮೂನ್ ಎಂಬ ಹೊಸ ವೆಬ್ ಸೀರೀಸ್ ಅನ್ನು ಅದು ನಿಮಗಾಗಿ ತರುತ್ತಿದೆ.
ಆರು ಕಂತುಗಳ ಹನಿಮೂನ್ ವೆಬ್ ಸೀರೀಸ್ ಅನ್ನು ಖ್ಯಾತ ನಟ ಶಿವರಾಜ್ ಕುಮಾರ್ ಅರ್ಪಿಸುತ್ತಿದ್ದಾರೆ. ಇದೇ ಮೇ ೨೦ರಂದು ಬಿಡುಗಡೆಯಾಗಲಿರುವ ಈ ಹಾಸ್ಯಪ್ರಧಾನ ಪ್ರೇಮಕತೆಯನ್ನು ನೀವು ವೂಟ್ ಸೆಲೆಕ್ಟ್‌ನಲ್ಲಿ ನೋಡಿ ಆನಂದಿಸಬಹುದು.
ಈಗಾಗಲೇ ಹಲವು ಸಿನಿಮಾಗಳ ನಟನೆಯಿಂದ ನಿಮ್ಮ ಮನ ಗೆದ್ದಿರುವ ನಾಗಭೂ?ಣ್, ಹನಿಮೂನ್ ಸರಣಿಯ ಮುಖ್ಯಪಾತ್ರದಲ್ಲಿದ್ದಾರೆ. ಈ ಸೀರೀಸಿನ ಬರವಣಿಗೆಯೂ ಅವರದ್ದೆ. ಅವರಿಗೆ ಜೋಡಿಯಾಗಿ ಸಂಜನಾ ಆನಂದ್ ಇದ್ದಾರೆ. ಹೊಸದಾಗಿ ಮದುವೆಯಾದ ಹುಡುಗನಿಗೆ ದಾರಿ ತೋರಿಸುವ ಸೂತ್ರಧಾರಿಯಾಗಿ ಮತ್ತೊಬ್ಬ ಚಿತ್ರ ನಿರ್ದೇಶಕ ಲೂಸಿಯಾ ಪವನ್ ಕೂಡ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಅಪೂರ್ವಾ ಭಾರದ್ವಾಜ್, ಆನಂದ್ ನೀನಾಸಂ ಮತ್ತು ಅರ್ಚನಾ ಕೊಟ್ಟಿಗೆ ಕೂಡ ಹನಿಮೂನ್‌ನಲ್ಲಿದ್ದಾರೆ.
ಈ ವೆಬ್ ಸೀರೀಸ್ ತಮ್ಮ ಮನಸ್ಸಿಗೆ ಹತ್ತಿರವಾದದ್ದು ಎಂದು ಹೇಳಿದ ನಟ ಶಿವರಾಜ್ ಕುಮಾರ್, ನಮ್ಮ ಸುತ್ತ ಸಾಕ? ಹೊಸ ರೀತಿಯ ಕತೆಗಳಿವೆ, ಅಂಥ ಕತೆಗಳನ್ನು ಬೆಂಬಲಿಸುತ್ತಿರುವ ವೂಟ್ ಬಗ್ಗೆ ನನಗೆ ಖುಷಿ ಅನಿಸುತ್ತೆ. ಈ ಪ್ರಾಜೆಕ್ಟಿನಲ್ಲಿ ನನ್ನ ಮಗಳೂ ಕೆಲಸ ಮಾಡಿರೋದ್ರಿಂದ ಹನಿಮೂನ್ ನನ್ನ ಮನಸಿಗೆ ಇನ್ನ? ಹತ್ತಿರವಾಗಿದೆ ಎಂದರು.
ಹನಿಮೂನ್ ಸಿರೀಸಿನ ನಾಯಕನಟ ನಾಗಭೂ?ಣ್ ಮಾತನಾಡಿ, ಇದು ಎಲ್ಲ ಅರೇಂಜ್ಡ್ ಮ್ಯಾರೇಜುಗಳ ಕತೆ. ಹೊಸದಾಗಿ ಮದುವೆಯಾದ ಗಂಡ ಹೆಂಡತಿಯರಂತೂ ಇದರಲ್ಲಿ ತಮ್ಮನ್ನ ತಾವೇ ಕಾಣುತ್ತಾರೆ ಎಂದರು.
ಹನಿಮೂನ್ ಅನ್ನುವುದು ಬರೀ ಮಜಾ ಅಲ್ಲ; ಗಂಡು ಹೆಣ್ಣು ತಮ್ಮ ಹೊಸ ಬದುಕನ್ನ ಜೋಡಿಸಿಕೊಳ್ಳುವುದು ಹನಿಮೂನಲ್ಲೇ. ಒಂದ? ಕುತೂಹಲ, ಒಂದ? ಫಜೀತಿ, ಒಂದ? ಗುಟ್ಟುಗಳು, ಒಂದ? ಒದ್ದಾಟಗಳು ಹೊಸ ಜೋಡಿಯೊಂದನ್ನು ಹೇಗೆ ಹತ್ತಿರಕ್ಕೆ ತಂದು ಮುಂದಿನ ಬದುಕಿಗೆ ತಯಾರು ಮಾಡುತ್ತವೆ ಅನ್ನುವುದು ಇಲ್ಲಿನ ಕತೆ.
ಈ ಹೊಸ ವೆಬ್ ಸೀರೀಸ್ ಮದುವೆಯಾಗಿಲ್ಲದವರಿಗೆ ದಾರಿದೀಪದಂತಿದ್ದರೆ, ವಿವಾಹಿತರಿಗೆ ತಮ್ಮ ತಮ್ಮ ಹನಿಮೂನ್ ದಿನಗಳನ್ನು ನೆನಪಿಸುವುದಂತೂ ಗ್ಯಾರೆಂಟಿ. ಎರಡನೇ ಹನಿಮೂನ್ ಒಳ್ಳೆಯ ಐಡಿಯಾನೇ ಅಲ್ವೆ? ಹಾಗಾದರೆ ಮೇ.೨೦ರಂದು ಈ ಹನಿಮೂನಿಗೆ ತಯಾರಾಗಿ. ನೆನಪಿನ ಲಗೇಜ್ ಹಿಡಿದು ವೂಟ್ ಸೆಲೆಕ್ಟ್‌ಗೆ ಬನ್ನಿ.