Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೀತಾಯಣ ಪ್ರೀತಿ ಕ್ರೈಮ್ ಕಥನ - 3/5 ***
Posted date: 28 Sat, May 2022 04:22:03 PM
ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಮೊದಲ ಬಾರಿ ಅಭಿನಯಿಸಿರುವ ಸೀತಾಯಣ ಚಿತ್ರವು ಮೊದಲರ್ಧ ಪ್ರೀತಿ, ಪ್ರೇಮ, ವಿವಾಹ ನಂತರ ಥ್ರಿಲ್ಲರ್ ಅಂಶಗಳನ್ನು   ಹೇಳಲಾಗಿದೆ. ಕಥೆಯಲ್ಲಿ ರಾಹುಲ್ ಜೀವನದಲ್ಲಿ ಮುಂದು ಬರಬೇಕೆಂದು ಉದ್ಯಮ ಶುರು ಮಾಡಲು ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿರುತ್ತಾನೆ. ಸೀತಾ ಆಡ್ ಶೂಟ್ ಮಾಡುವ ನಿರ್ದೇಶಕಿ. ಒಂದು ಘಟನೆಯಿಂದ ಇಬ್ಬರು ಭೇಟಿಯಾಗಿ ಲವ್‌ಗೆ ತಿರುಗುತ್ತದೆ. ಆಕೆಯ ಅಪ್ಪ ಬ್ಯಾಂಕ್ ಮ್ಯಾನೇಜರ್. ಹೇಗಿದ್ದರೂ ಈತನ ವಿವರ ತಿಳಿದಿರುವ ಕಾರಣ ಶುರುವಿನಲ್ಲಿ ವಿರೋದ ವ್ಯಕ್ತ ಪಡಿಸಿದರೂ, ಗುಣಕ್ಕೆ ಮಾರುಹೋಗಿ ಮಗಳನ್ನು ಕೊಡಲು ನಿರ್ಣಯಿಸುತ್ತಾನೆ. ಎರಡೂ ಮನೆ ಕಡೆಯಿಂದ ಸಮ್ಮತಿ ಸಿಕ್ಕು, ಎಂದಿನಂತೆ ಮದುವೆ ನಡೆಯುತ್ತದೆ.  ಹನಿಮೂನ್‌ಗೆಂದು  ಬ್ಯಾಂಕಾಕ್‌ಗೆ ತೆರೆಳುತ್ತಾರೆ. ವಾಪಸ್ಸು ಬಂದು, ಬೈಕ್‌ನಲ್ಲಿ ಇವನು ಬರುವಾಗ ಸಣ್ಣದೊಂದು ಅಪಘಾತವಾಗಿ ಸಂಬಂದಪಟ್ಟ ನರಕ್ಕೆ ಪೆಟ್ಟು ಬಿದ್ದಿರುವುದರಿಂದ ಗಂಡಸುತನ ಕಳೆದುಕೊಂಡಿರುವುದಾಗಿ ವೈದ್ಯರು ತಿಳಿಸುತ್ತಾರೆ. ಇದೇ ಸಂದರ್ಭದಲ್ಲಿ ಪತ್ನಿ ಗರ್ಭಿಣಿ ಎಂದು ಸುದ್ದಿ ಬರುತ್ತದೆ. ಇದರಿಂದ ವಿಚಲಿತನಾಗುತ್ತಾನೆ. ಅಷ್ಟಕ್ಕೂ ಬ್ಯಾಂಕಾಕ್‌ದಲ್ಲಿ ನಡೆದುದಾದರೂ ಏನು? ಎಂದು ಕಂಡು ಹಿಡಿಯಲು ಅಲ್ಲಿಗೆ ಹೋದಾಗ ಕೆಲವೊಂದು ಅಂಶಗಳು ಗಮನಕ್ಕೆ ಬರುತ್ತದೆ. ಅದನ್ನು ಹೇಗೆ ನಿಭಾಯಿಸುತ್ತಾನೆ. ಅಲ್ಲಿ ನಡೆದ ಅಪರಾದವನ್ನು ಯಾವ ರೀತಿ ಕಂಡು ಹಿಡಿಯುತ್ತಾನೆ? ಇದನ್ನು ತಿಳಿಯಲು ಚಿತ್ರ ನೋಡಬೇಕು. 

ಅಕ್ಷಿತ್‌ಶಶಿಕುಮಾರ್ ನಟನೆಗಿಂತ ಆಕ್ಷನ್‌ದಲ್ಲಿ ಮಿಂಚಿದ್ದಾರೆ. ನಾಯಕಿ ಅನಹಿತಾಭೂಷಣ್ ಅಭಿನಯ ಇನ್ನು ಪಳಗಬೇಕಾಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್, ಮೇಘನಾಗೌಡ ಹೊರತುಪಡಿಸಿದರೆ ಟಾಲಿವುಡ್ ಕಲಾವಿದರುಗಳಾದ ಅಜಯ್‌ಘೋಷ್, ಮಧುಸೂದನ್ ಮುಂತಾದವರಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಭಾಕರ್‌ಆರಿಪ್ಕಾ ನಿರ್ದೇಶನದಲ್ಲಿ ಚಿತ್ರವು ಚೆನ್ನಾಗಿ ಮೂಡಿಬಂದಿದೆ. ಪದ್ಮನಾಭಭಾರದ್ವಾಜ್ ಸಂಗೀತದಲ್ಲಿ ಪುನೀತ್‌ರಾಜ್‌ಕುಮಾರ್ ಹಾಡಿರುವ ದಣಿದು ದಣಿದು ಗೀತೆ ಕೇಳಲು ಇಂಪಾಗಿದೆ. ದುರ್ಗಪ್ರಸಾದ್‌ಕೊಲ್ಲಿ ಛಾಯಾಗ್ರಹಣದಲ್ಲಿ ಸುಂದರ ತಾಣಗಳು ಕಣ್ಣಿಗೆ ತಂಪು ಕೊಡುತ್ತದೆ. ರಿಯಲ್‌ಸತೀಶ್ ಸಾಹಸ, ಪ್ರವೀಣ್‌ಪುಡಿ ಸಂಕಲನ ಚಿತ್ರಕ್ಕೆ ಪೂರಕವಾಗಿದೆ. ಉದ್ಯಮಿ ಲಲಿತಾರಾಜಲಕ್ಷೀ ನಿರ್ಮಾಣವಿದೆ.  
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೀತಾಯಣ ಪ್ರೀತಿ ಕ್ರೈಮ್ ಕಥನ - 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.