Chief Editor
Manohar. R (Manu)
Photo Journalist
chitrataramanu@gmail.com
+91 9845549026
`ತ್ರಿವಿಕ್ರಮ`ರಂಗೀನ್ ಕಾರ್ಯಕ್ರಮ ಚಂದನವನ ತಾರೆಗಳ ಸಮಾಗಮ
Posted date: 18 Sat, Jun 2022 08:20:06 AM
ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ದೊಡ್ಡ ಮಟ್ಟದಲ್ಲಿ ಲಾಂಚ್ ಆಗಲು ವೇದಿಕೆ ಸಿದ್ಧವಾಗಿದೆ. ವಿಕ್ಕಿ ನಟನೆಯ ಚೊಚ್ಚಲ ಸಿನಿಮಾ `ತ್ರಿವಿಕ್ರಮ`ಜೂನ್ 24ರಂದು ಬಿಡುಗಡೆಯಾಗಲಿದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಬೃಹತ್‌ ಸಮಾರಂಭ ಏರ್ಪಡಿಸಿದೆ ಚಿತ್ರತಂಡ. ಜೂನ್ 19ರಂದು ಜರುಗುವ ಈ ಕಾರ್ಯಕ್ರಮಕ್ಕೆ ಚಂದನವನದ ತಾರೆಯರ ಹಿಂಡು ಸಾಕ್ಷಿಯಾಗಲಿದೆ.

ವಿಕ್ಕಿಗೆ ಶುಭ ಹಾರೈಸಲು ತಾರಾಲೋಕ ಸೃಷ್ಟಿಯಾಗಲಿದ್ದು, ರಂಗೀನ್ ಕಾರ್ಯಕ್ರಮಕ್ಕೆ ಸ್ಯಾಂಡಲ್`ವುಡ್ ಸ್ಟಾರ್ಸ್ ಆಗಮಿಸಲಿದ್ದಾರೆ. ಕ್ರೇಜಿ಼ಸ್ಟಾರ್ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, `ಡಾಲಿ` ಧನಂಜಯ್, ನಿರ್ದೇಶಕ ಪ್ರೇಮ್, ರಕ್ಷಿತಾ ಪ್ರೇಮ್, ಶರಣ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ಅಜೇಯ್ ರಾವ್, ಡಾರ್ಲಿಂಗ್ ಕೃಷ್ಣ, ತಾರಾ, ಶೃತಿ, ವಸಿಷ್ಠ ಸಿಂಹ, ನಿಶ್ವಿಕಾ ನಾಯ್ಡು ಹಾಗೂ ಮನುರಂಜನ್ ಸೇರಿದಂತೆ ಇನ್ನೂ ಅನೇಕರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಜೂನ್ 19ರಂದು ನಾಯಂಡಹಳ್ಳಿ ಬಳಿಯಿರುವ ನಂದಿ ಲಿಂಕ್ಸ್ ಗ್ರೌಂಡ್`ನಲ್ಲಿ ಕಾರ್ಯಕ್ರಮ ಜರುಗಲಿದೆ. ಸಾರ್ವಜನಿಕರಿಗೂ ಉಚಿತ ಅವಕಾಶ ಕಲ್ಪಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡಿರುವ `ತ್ರಿವಿಕ್ರಮ` ಟೀಂ, ಟ್ರೇಲರ್ ಮೂಲಕ ಸೌಂಡು ಮಾಡಲು ಸಜ್ಜಾಗಿದೆ. 19ರಂದು ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ `ತ್ರಿವಿಕ್ರಮ` ಟ್ರೇಲರ್ ಬಿಡುಗಡೆ ಮಾಡಲಿದೆ ಚಿತ್ರತಂಡ.

ಸಹನಾ ಮೂರ್ತಿ `ತ್ರಿವಿಕ್ರಮ`ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ `ಪ್ಲೀಸ್ ಮಮ್ಮಿ`, `ಹನಿ ಬನಿ ಫೀಲ್ ಮೈ ಲವ್` ಹಾಗೂ `ಶಕುಂತಲಾ ಶೇಕ್ ಯುವರ್ ಬಾಡಿ ಪ್ಲೀಸ್...` ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್`ಗಟ್ಟಲೆ ಹಿಟ್ಸ್ ದಾಖಲಿಸಿರುವುದು `ತ್ರಿವಿಕ್ರಮ`ನ ಹೆಚ್ಚುಗಾರಿಕೆ.

ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ.  ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ತ್ರಿವಿಕ್ರಮ`ರಂಗೀನ್ ಕಾರ್ಯಕ್ರಮ ಚಂದನವನ ತಾರೆಗಳ ಸಮಾಗಮ - Chitratara.com
Copyright 2009 chitratara.com Reproduction is forbidden unless authorized. All rights reserved.