Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕೊಲೊಂಬೊದಲ್ಲಿ ಭಾರತ ಗಣರಾಜ್ಯೋತ್ಸವದಲ್ಲಿ
Posted date: 17/February/2010

ಬಹಳ ದಿನಗಳನಂತರ ನಿಮ್ಮನ್ನು ಮತ್ತೆ ಸಂಪರ್ಕಿಸುವ ಭಾಗ್ಯ ನನ್ನದಾಗಿದೆ.

ಇತ್ತೀಚೆಗೆ ಕೊಲೊಂಬೊದಲ್ಲಿ ಅಚರಿಸುವ ಭಾರತ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಅಲ್ಲಿನ Iಟಿಜiಚಿಟಿ ಊigh ಅommissioಟಿ ನ ಆಹ್ವಾನದಮೇರೆಗೆ, ನಾನು, ನನ್ನ ಧರ್ಮಪತ್ನಿ ಶ್ರೀಮತಿ.ಅನುರಾಧಾ, ಮತ್ತು ನಮ್ಮ ಸಂಗೀತ ವಿದ್ವಾಂಸರ ತಂಡದೊಂದಿಗೆ ದಿನಾಂಕ ೨೩-೧-೧೦ ರಿಂದ ೧೦-೨-೧೦ ರ ವರೆಗೆ ಕೊಲೊಂಬೊ, ಜಾಫ಼್ನಾ, ಬಟ್ಟಿಕಲೋವ, ಕಾಂಡಿ, ನೂವರೇಲಿಯ ಮುಂತಾದ ನಗರಗಳಲ್ಲಿ ಯಶಸ್ವಿ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿ ಹಿಂದಿರುಗಿದೆವು. ೨ ಗಂ. ಕಾಲ ಅವಧಿಯ ನಮ್ಮ ನೃತ್ಯಪ್ರದರ್ಶನಗಳು ಅತ್ಯಂತ ಯಶಸ್ವಿಯಾಗಿ ನಡೆದು ಅಲ್ಲಿನ ಕಲಾಪ್ರೇಮಿಗಳ ಮುಕ್ತಪ್ರಶಂಸೆಗೆ ಪಾತ್ರವಾಯಿತು ಎಂದು ತಿಳಿಸಲು ಸಂತೋಷವಾಗುತ್ತಿದೆ.

ಶ್ರಿಲಂಕಾ ಮತ್ತು ಭಾರತದೇಶದ ಬಾಂಧವ್ಯ ೨೦೦೦ ವರ್ಷಗಳಷ್ತು ಹಿಂದಿನದಾಗಿದ್ದು ಭರತೀಯ ಸಂಸ್ಕೃತಿ, ಸಂಪ್ರದಾಯಗಳು ಅಲ್ಲಿಯ ಜನರಜೀವನದಲ್ಲಿ ಬೆರೆತುಹೋಗಿದೆ. ಭಾರತದೆಶ ಮತ್ತು ಭಾರತೀಯರೆಂದರೆ ಬಹಳ ಪ್ರೀತಿಸುವ ಗೌರವಿಸುವ ಅವರು ನಮ್ಮನ್ನು ಬಹಳ ಆದರದಿಂದ ಸ್ವಾಗತಿಸಿದರು. ವೈಯಕ್ತಿಕವಾಗಿ ನಮಗೆ, ನಮ್ಮ ಆತ್ಮೀಯ ಬಂಧುಗಳ ಊರಿಗೆ ಹೋಗಿಬಂದ ಅನುಭವವಾಯಿತು.

ಕಳೆದ ಹಲವು ವರ್ಷಗಳಿಂದ ತೀವ್ರ ಸಂಘರ್ಷದಲ್ಲಿದ್ದ ಶ್ರೀಲಂಕಾದಲ್ಲಿ ಪ್ರಥಮಬಾರಿಗೆ Iಟಿಜiಚಿಟಿ ಊigh ಅommissioಟಿ ಮತ್ತು Iಅಅಖ ಈರೀತಿಯ ಪ್ರವಾಸವನ್ನು ಆಯೋಜಿಸಿದ್ದು ಒಂದು ವಿಶೇಷವಾಗಿತ್ತು. ಭಾರತೀಯ ಸಂಸ್ಕೃತಿಯನ್ನು ಅಭಿಮಾನಿಸುವ ಮತ್ತು ಅಧ್ಯಯನ ಮಾಡುವ ಅಲ್ಲಿನ ಪ್ರೇಕ್ಷಕರು ನಮ್ಮ ನೃತ್ಯಪ್ರವಾಸವನ್ನು ಬಹಳ ಕಾತುರತೆಯಿಂದ ನಿರೀಕ್ಷಿಸುತ್ತಿದ್ದರು. ಜಾಫ಼್ನಾದಲ್ಲಂತೂ ಬಹಳ ಭಾವಪೂರ್ಣ ಸ್ವಾಗತ ನಮಗೆ ಲಭಿಸಿತ್ತು. ಅಲ್ಲಿಯ ಜನ ದೇಶದ ಮುಖ್ಯವಾಹಿನಿಯಿಂದ ಬಹಳ ಕಾಲ ದೂರವಾಗಿಬಿಟ್ಟಿದ್ದರು. ಇಲ್ಲಿಗೆ ಸರ್ಕಾರದ ಗಣ್ಯರೇ ಬರುವುದು ಅಪುರೂಪ, ಅಂಥಾದ್ದರಲ್ಲ್ಲಿ ಭಾರತದೇಶದಿಂದ ನೀವು ಬಂದಿರುವುದು ನಮಗೆ ಹೇಳಲಾರದಷ್ಟು ಆನಂದವನ್ನು ತಂದಿದೆ ಎಂದು ಅಲ್ಲಿನ ಆisಣಡಿiಛಿಣ Seಛಿಡಿeಣಚಿiಚಿಣ ಉovಣ.ಂgeಟಿಣ ಶ್ರೀ.ಗಣೇಶ್ ಅವರು ಭಾವುಕರಾಗಿ ನುಡಿದದ್ದು ನಮಗೆ ಮೈನವಿರೇಳಿದ ಅನುಭವ.

ದಿನಾಂಕ: ೨೬-೧-೧೦ ರಂದು ಬೆಳಗ್ಗೆ ಭಾರತ ಗಣರಾಜ್ಯೋತ್ಸವವನ್ನು ಅಲ್ಲಿನ ಹೈಕಮಿಷನರ್ ಶ್ರೀ.ಅಶೋಕ್ ಕಾಂತ್ ಅವರ ನಿವಾಸವಾದ Iಟಿಜiಚಿ ಊouse ನಲ್ಲಿಬಹಳ ವಿಜೃಂಭಣೆಯಿಚಿದ ಆಚರಿಸಲಾಯಿತು. ವಿಶೇಷ ಆಹ್ವಾನಿತರಾಗಿ ಅಲ್ಲಿಗೆ ಹೋದ ನಮಗೆ ಅದು ಅತ್ಯಂತ ಹೃದಯಸ್ಪರ್ಶಿ ಅನುಭವ. ಬಹಳ ಹೆಮ್ಮೆಯಿಂದ ಉತ್ಸವದಲ್ಲಿ ಭಾಗವಹಿಸಿದೆವು. ಅಂದು ಸಂಜೆ ಶ್ರೀಲಂಕಾದ ಸಚಿವರು, ಅನೇಕಮಂದಿ ಗಣ್ಯರ ಉಪಸ್ಥಿತಿಯಲ್ಲಿ ನಾವು ನೃತ್ಯಕಾರ್ಯಕ್ರಮವನ್ನು ನೀಡಿದ್ದು ಬಹಳ ವಿಶೇಷವಾದ ಆನಂದವನ್ನು ನೀಡಿತ್ತು. ಹೈಕಮಿಷನರ್ ಶ್ರೀಮತಿ. ಮತ್ತು ಶ್ರೀ.ಅಶೋಕ್ ಕಾಂತ ಅವರ ಸೌಜನ್ಯ, ಆತಿಥ್ಯ ಮರೆಯಲಾಗದ ಅನುಭವ.

ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಶ್ರೀ.ವಿ.ರಾಧಾಕೃಷ್ಣನ್, ಉನ್ನತ ಶಿಕ್ಷಣ ಮಂತ್ರಿ ಶ್ರೀ.ವಿಶ್ವ ವರ್ಣಪಾಲ, ಜಾಫ಼್ನಾ ಎಂ.ಪಿ. ಶ್ರೀ.ನಕ್ಳಸ್ ದೇವಾನಂದ್, ಜಾಫ಼್ನಾ ಮೇಯರ್ ಶ್ರೀಮತಿ.ಯೋಗೇಶ್ವರಿ, ಅಸಿಸ್ಟೆಂಟ್ ಹೈ ಕಮಿಷನರ್ ಶ್ರೀ.ಆರ್.ಕೆ ಮಿಶ್ರಾ, ವಿಪುಲಾನಂದ ವಿಶ್ವವಿದ್ಯಾಲಯದ ಕುಲಪತಿಗಳು ಮುಂತಾದ ಅನೇಕಮಂದಿ ಗಣ್ಯರು ನಮ್ಮ ನೃತ್ಯಕಾರ್ಯಕ್ರಮವನ್ನು ವೀಕ್ಷಿಸಿ ಪ್ರಶಂಸಿಸಿದರು.

ಅಲ್ಲಿನ ಕಲಾರಸಿಕರು ನಮ್ಮ ಕಲಾಪರಿಣತಿ, ಸೃಜನಶೀಲತೆಯನ್ನು ಬಹಳ ಮೆಚ್ಚಿಕೊಂಡರು ಮತ್ತು ಸದ್ಯದಲ್ಲೇ ಅಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ವಿಶೇಷತರಬೇತಿ ಶಿಬಿರವನ್ನು ನಡೆಸಲು ಆಹ್ವಾನಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೊಲೊಂಬೊದಲ್ಲಿ ಭಾರತ ಗಣರಾಜ್ಯೋತ್ಸವದಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.