Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆಗೋದೆಲ್ಲಾ ಒಳ್ಳೇದಕ್ಕೆ ಮುಹೂರ್ತ
Posted date: 06 Tue, Sep 2022 11:25:36 AM
ಗಿನ್ನಿಸ್ ದಾಖಲೆಯ ದರ್ಪಣ ಮತ್ತು ಬಿಡುಗಡೆಯಾಗಬೇಕಾದ ಪರಿಶುದ್ದಂ ಚಿತ್ರಗಳನ್ನು ನಿರ್ದೇಶನ ಮಾಡಿರುವ ಆರೋನ್ ಕಾರ್ತಿಕ್ ವೆಂಕಟೇಶ್ ಈಗ ಆಗೋದೆಲ್ಲಾ ಒಳ್ಳೇದಕ್ಕೆ ಸಿನಿಮಾಕ್ಕೆ ರಚನೆ, ಚಿತ್ರಕಥೆ, ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶುಕ್ರವಾರದಂದು ನಡೆದ ಮುಹೂರ್ತ ಸಮಾರಂಭಕ್ಕೆ ಬಿಗ್ ಬಾಸ್ ವಿನ್ನರ್, ವಾಗ್ಮಿ ಪ್ರಥಮ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ರಿಯಲ್ ಎಸ್ಟೇಟ್ ಉದ್ಯಮಿ ಸೀಗೆಹಳ್ಳಿಯ ಎ.ಎಸ್.ಲೋಹಿತ್ ಅವರು ಬಿನಿಶಾ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ.
 
ಬದುಕಲ್ಲಿ ಆಕಸ್ಮಿಕವಾದ ಘಟನೆಗಳು ನಡೀತಾ ಇರುತ್ತದೆ. ಇದನ್ನು ಶೀರ್ಷಿಕೆ ಅಂತ ತೆಗದುಕೊಳ್ಳುವುದು ಸೂಕ್ತ. ಆಕಸ್ಮಿಕ ಘಟನೆಗಳೇ ಸಂದೇಶ ಕೊಡುತ್ತದೆ. ಏನೇ ಆದರೂ ಆ ಸಮಯದಲ್ಲಿ ಕೆಟ್ಟದ್ದು ಅಂತ ಭಾವಿಸಬಹುದು. ಕೊನೆಗೆ ನೋಡಿದರೆ, ಆಗೋದೆಲ್ಲಾ ಒಳ್ಳೇದಕ್ಕೆ ಅನಿಸುತ್ತದೆ. ಇದು ಆಗದಿದ್ದರೆ ಸರ್ವನಾಶ, ಹಿಂಸೆ ಆಗುತ್ತಿತ್ತು. ಅಂತಿಮವಾಗಿ ಒಳ್ಳೆಯದಕ್ಕೆ ಆಯ್ತಲ್ಲಾ ಎಂದು ನೆಮ್ಮದಿ ಸಿಗುತ್ತದೆ. ಕಾಣದ ಕೈಗಳು ಒಳ್ಳೆಯದನ್ನೇ ನಡೆಸುತ್ತಾ ಬಂದಿರುತ್ತದೆ. ಏನೋ ಆದರೂ ಒಳ್ಳೆಯದಕ್ಕೆ ತೆಗೆದುಕೊಂಡರೆ ಜೀವನ ಸುಂದರ. ವಿರುದ್ದವಾಗಿ ಹೋದರೆ ಸಾಹಸ ಅಲ್ಲದೆ ಕಷ್ಟ ಆಗಬಹುದು. ಪ್ರೀತಿ-ಭಯೋತ್ಪಾದನೆ-ಸರ್ಕಾರ ಮೂರರ ಸುತ್ತ ಚಿತ್ರವು ಆಕ್ಷನ್ ಥ್ರಿಲ್ಲರ್ ರೂಪದಲ್ಲಿ ಸಾಗುತ್ತದೆ. 
 
ತಾರಗಣದಲ್ಲಿ ಎಂ.ಡಿ.ಕೌಶಿಕ್, ಯತಿರಾಜ್, ಸಂದೀಪ್‌ಮಲಾನಿ, ದುಬೈರಫೀಕ್, ಮಠಕೊಪ್ಲ, ಪವಾನಿರಾಜು, ಭಾರ್ಗವ್, ಅರ್ಚನಾ, ಕಿರಣ್, ಆಮನ್, ತೇಜಸ್ವಿನಿ, ಜೀವ, ಸೈಯದ್‌ಜೋಹಾನ್, ಮಾಸ್ಟರ್ ಸುಮಿತ್, ಸುಹೈಲ್ ಮುಂತಾದವರು ನಟಿಸುತ್ತಿದ್ದಾರೆ. ಬೆಂಗಳೂರು, ಕಾರವಾರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಛಾಯಾಗ್ರಹಣ ಸಂಗಮೇಶ್, ಸಂಕಲನ ಆಯೂರ್‌ಸ್ವಾಮಿ, ಸಾಹಸ ಜಾನಿಮಾಸ್ಟರ್ ಅವರದಾಗಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಗೋದೆಲ್ಲಾ ಒಳ್ಳೇದಕ್ಕೆ ಮುಹೂರ್ತ - Chitratara.com
Copyright 2009 chitratara.com Reproduction is forbidden unless authorized. All rights reserved.