Chief Editor
Manohar. R (Manu)
Photo Journalist
chitrataramanu@gmail.com
+91 9845549026
ದಿಗಂತ್ ನಟನೆಯ `ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ`ದ ಮುಹೂರ್ತ…ಇಂದಿನಿಂದ ಶುರು ಚಿತ್ರೀಕರಣ
Posted date: 09 Fri, Sep 2022 02:10:48 PM
ಗಾಳಿಪಟ-2 ಭರ್ಜರಿ ಯಶಸ್ಸಿನ ಬಳಿಕ ದೂದ್ ಪೇಡ್ ದಿಗಂತ್ ’ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ’ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶ್ವ ಎಡಚರ ದಿನದಂದು ಪೋಸ್ಟರ್ ಹಾಗೂ ಟೈಟಲ್ ರಿವೀಲ್ ಮಾಡಿದ್ದ ಚಿತ್ರತಂಡ ಇವತ್ತು ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ ಮುಹೂರ್ತ ನೆರವೇರಿಸಿದೆ. 

ಸಸ್ಪೆನ್ಸ್ ಥ್ರಿಲ್ಲರ್ ಡ್ರಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ಸಮರ್ಥ್ ಬಿ ಕಡ್ಕೋಲ್ ಆಕ್ಷನ್ ಕಟ್ ಹೇಳಿದ್ದು, ಗುರುದತ್ತ ಗಾಣಿಗ ಮತ್ತು ಸಮರ್ಥ್ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ದಿಗಂತ್ ಗೆ ಜೋಡಿಯಾಗಿ ಯುವನಟಿ ಧನು ಹರ್ಷ ನಟಿಸಲಿದ್ದಾರೆ. ಇಂದಿನಿಂದ ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಅಭಿಮನ್ಯು ಸದಾನಂದ್ ಛಾಯಾಗ್ರಾಹಣ, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ.

ಪ್ರಪಂಚದಲ್ಲಿ ಹಲವು ವಿಷಯಗಳನ್ನು ಬಲಗೈ ಬಳಕೆಗೆ ಅನುಕೂಲವಾಗಿ ಮಾಡಲಾಗಿರುತ್ತದೆ. ಆದರೆ ಎಡಗೈ ಬಳಕೆದಾರರ ಸಂಖ್ಯೆ ಬಹಳ ಕಡಿಮೆ ಇದ್ದು, ಇದರಿಂದ ಅವರಿಗೆ ಒಂದಷ್ಟು ತೊಂದರೆಗಳು ಆಗುತ್ತಿವೆ. ಅದರ ಬಗೆಗಿನ ಕಥೆ ಇದಾಗಿದ್ದು, ಶೀರ್ಘದಲ್ಲಿ ಚಿತ್ರತಂಡ ಉಳಿದ ಕಲಾವಿದರ ಬಗ್ಗೆ ಮಾಹಿತಿ ನೀಡಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದಿಗಂತ್ ನಟನೆಯ `ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ`ದ ಮುಹೂರ್ತ…ಇಂದಿನಿಂದ ಶುರು ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.