`ಯಜಮಾನೋತ್ಸವ`ಕ್ಕೆ ಭರ್ಜರಿ ತಯಾರಿ…ಚಿತ್ರರಂಗಕ್ಕೆ ವಿಷ್ಣು ದಾದಾ ಪಾದಾರ್ಪಣೆ ಮಾಡಿ 50 ವರ್ಷ
Posted date: 12 Mon, Sep 2022 09:29:56 AM

ಸಾಹಸಿ ಸಿಂಹ ಡಾ.ವಿಷ್ಣುವರ್ಧನ್ 72ನೇ ಜಯಂತೋತ್ಸವಕ್ಕೆ ದಾದಾ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಇದೇ ಸೆಪ್ಟಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬ ಹಿನ್ನೆಲೆ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿವೆ. ಅದೇ ರೀತಿ ಬರುವ ಡಿಸೆಂಬರ್ 29ಕ್ಕೆ ವಿಷ್ಣು ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ. ಈ ಹಿನ್ನೆಲೆಯಲ್ಲಿ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ವಿಷ್ಣು ಪುಣ್ಯಭೂಮಿಯಲ್ಲಿ ದಾದಾನ ಪ್ರಮುಖ ಸಿನಿಮಾಗಳು ಐವತ್ತು ಕಟೌಟ್ ನಿಲ್ಲಿಸಿ ದಾಖಲೆ ಬರೆಯಲು ಸಜ್ಜಾಗಿದೆ. ಈ ಬಗ್ಗೆ ವಿಷ್ಣು ಸೇನಾ ಸಮಿತಿ ಸದಸ್ಯರು ಮಾಹಿತಿ ಹಂಚಿಕೊಂಡರು.
ವಿಷ್ಣುಸೇನಾ ಸಮಿತಿ ಆನಂದ್ ಮಾತನಾಡಿ, ಇದೇ ಡಿಸೆಂಬರ್ 29ಕ್ಕೆ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳು ಕಂಪ್ಲೀಟ್ ಆಗುತ್ತದೆ. ಈ ವಿಶೇಷ ಇಟ್ಟುಕೊಂಡು ವಿಷ್ಣು ಪುಣ್ಯಭೂಮಿಯಲ್ಲಿ ವಿಷ್ಣುವರ್ಧನ್ ಸೇನಾನಿ ಮತ್ತು ಹಲವು ಸಂಘ ಸಂಸ್ಥೆಗಳು ಅಧ್ಯಕ್ಷರು ಸೇರಿ ಒಂದೇ ಜಾಗದಲ್ಲಿ ಐವತ್ತು ಕಟೌಟ್ ಹಾಕುತ್ತವೆ. ವಿಷ್ಣುವರ್ಧನ್ ಅವರ ಯಶಸ್ಸಿ ಚಿತ್ರಗಳ ಕಟೌಟ್ ನಿಲ್ಲಿಸಿ ದಾಖಲೆ ಬರೆಯಲು ಮುಂದಾಗಿದ್ದೇವೆ. ಒಂದು ಕಟೌಟ್ 40 ಅಡಿ ಇರಲಿದೆ. ಇಲ್ಲಿವರೆಗೆ ಭಾರತೀಯ ಚಿತ್ರರಂಗದಲ್ಲಿ ಏಕಸ್ಥಳದಲ್ಲಿ ಯಾವುದೇ ಸ್ಟಾರ್ ಗೆ ಈ ರೀತಿ ಕಟೌಟ್ ನಿಲ್ಲಿಸಿಲ್ಲ ಎಂದು ಮಾಹಿತಿ ಹಂಚಿಕೊಂಡರು.
Kannada Movie/Cinema News - `ಯಜಮಾನೋತ್ಸವ`ಕ್ಕೆ ಭರ್ಜರಿ ತಯಾರಿ…ಚಿತ್ರರಂಗಕ್ಕೆ ವಿಷ್ಣು ದಾದಾ ಪಾದಾರ್ಪಣೆ ಮಾಡಿ 50 ವರ್ಷ - Chitratara.com
Copyright 2009 chitratara.com Reproduction is forbidden unless authorized. All rights reserved.