Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸ್ಮೈಲ್ ಶ್ರೀನು ಅಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ
Posted date: 12 Mon, Sep 2022 09:33:21 AM
ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಪಕ್ಷದ ಕಛೇರಿಯಲ್ಲಿ ನಡೆದ ಸರಳ  ಕಾರ್ಯಕ್ರಮದಲ್ಲಿ ನಿವೃತ್ತ ಪೋಲೀಸ್ ಅಧಿಕಾರಿ ಹಾಗೂ ಎಎಪಿ  ರಾಜ್ಯ ಉಪಾಧ್ಯಕ್ಷ ಭಾಸ್ಕರರಾವ್ ಅವರು ಪಕ್ಷದ ಧ್ವಜವನ್ನು ನಾರಿ ಶ್ರೀನಿವಾಸ್ ಅವರಿಗೆ  ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
 
ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಜಗದೀಶ್ ಅವರ ಸಮ್ಮುಖದಲ್ಲಿ ನಡೆದ ಈ ಕಾಯ್ರಕ್ರಮದಲ್ಲಿ ಮಾತನಾಡಿದ ಶ್ರೀನಿವಾಸ್‌ ನಾನು  ಹ಼ಣ ಹೆಸರು ಮಾಡಲು, ನಾಯಕನಾಗಲು ಬಂದಿಲ್ಲ, ನಮ್ಮ ಜನ ತಮ್ಮ ದುಖಗಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ  ನುಂಗಿಕೊಳ್ಳುತ್ತಿದ್ದಾರೆ. ಜನರಿಗೆ ಉತ್ತಮ ಆರೋಗ್ಯ ಶಿಕ್ಷಣ ಇದ್ದರೆ ಎಲ್ಲವನ್ನೂ ಗೆಲ್ಲಬಹುದು. ಕಟ್ಟಕಡೆಯ ವ್ಯಕ್ತಿಗೂ ಸಹ ಮೂಲಭೂತ ಸೌಕರ್ಯಗಳು ದೊರೆಯಬೇಕು ಎನ್ನುವುದೇ ನನ್ನ ಉದ್ದೇಶ. ಸಂಘ ಸಂಸ್ಥೆಗಳ ಮೂಲಕ ಜನರಿಗೆ ಸಹಾಯ ಮಾಡಬಹುದು. ಒಬ್ಬನೇ ಮಾಡಲು ಸಾಧ್ಯವಿಲ್ಲ. ನಾನು ಜನರ ಸೇವೆ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದರು. 
 
ನಂತರ ಭಾಸ್ಕರ ರಾವ್ ಮಾತನಾಡಿ ಕೇಜ್ರಿವಾಲರ ಪ್ರಾಮಾಣಿಕತೆಗೆ ಬೆಲೆ ಕೊಟ್ಟು ಹೆಚ್ಚಿನ ಸಂಖ್ಯೆಯ  ಯುವಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಒಂದು ಪಕ್ಷ ಹತ್ತು ವರ್ಷಗಳಲ್ಲಿ ೨  ರಾಜ್ಯಗಳಲ್ಲಿ‌ ಅಧಿಕಾರಕ್ಕೆ ಬರುವುದು ಸಾಮಾನ್ಯದ ಮಾತಲ್ಲ. ನಾವು ಮಾಡುವ ಕೆಲಸ ಜನರಿಗೆ ಇಷ್ಟವಾಗಿದೆ. ನಮಗೆ ಅನುಭವಿ ರಾಜಕಾರಣಿಗಳು ಬೇಕಿಲ್ಲ, ಇಂಥ ಯುವಕರೇ ಬೇಕಾಗಿದೆ ಎಂದು ಹೇಳಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ‌ಭಾಸ್ಕರರಾವ್, ಪೃಥ್ವಿರೆಡ್ಡಿ, ಜಗದೀಶ್ ಉಪಸ್ಥಿತರಿದ್ದರು
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸ್ಮೈಲ್ ಶ್ರೀನು ಅಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ - Chitratara.com
Copyright 2009 chitratara.com Reproduction is forbidden unless authorized. All rights reserved.