Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕುಳ್ಳನ ಹೆಂಡತಿ ಟ್ರೈಲರ್ ಬಿಡುಗಡೆ
Posted date: 14 Wed, Sep 2022 08:04:08 AM
ಸ್ಟಾರ್ ವೆಂಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ವಿಭಿನ್ನ ಪ್ರೇಮಕಥಾನಕ  ಕುಳ್ಳನ ಹೆಂಡತಿ‌ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.  ವಿಶಾಖ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಆಶ್ರಿತ್ ವಿಶ್ವನಾಥ್ ಹಾಗೂ ರಾಸಿಕಾ ಬೀರೇಂದ್ರ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗುದೆ. 
 
ಕುಳ್ಳನ ಹೆಂಡತಿ ಎಂದಕೂಡಲೇ  ಗಂಡ ಕುಳ್ಳ ಇರಬಹುದು ಎನಿಸುತ್ತದೆ,  ಆದರೆ ಈ ನಿರ್ದೇಶಕರು ‌ ವಯಸಿನ ಅಂತರದ ಮೇಲೆ ಕಥೆ ಮಾಡಿದ್ದಾರೆ. ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ನ್ನು ಈ ಚಿತ್ರ ಹೇಳುತ್ತದೆ.
 
ನಂತರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ನಿರ್ದೇಶಕ ವಿಶಾಖ್ ಮಾತನಾಡಿ  ಕಥೆ, ಚಿತ್ರಕಥೆ ನನ್ನದೇ. ಚಿತ್ರದಲ್ಲಿ  ೫ ಹಾಡುಗಳಿವೆ‌.  26ರ ಹರೆಯದ ಹುಡುಗನಿಗೆ 33ರ ವಯಸಿನ ನರ್ಸ್ ಮೇಲೆ  ಲವ್  ಆದರೆ ಹೇಗಿರುತ್ತೆ ಎಂಬುದನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದೇನೆ. ಒಂದು ಸುಂದರ ಲವ್ ಸ್ಟೋರಿ ಚಿತ್ರದಲ್ಲಿದ್ದು, 45 ದಿನಗಳ‌ ಕಾಲ. ಎರಡು ಹಂತಗಳಲ್ಲಿ, 5-6 ಲೊಕೇಶನ್ ಗಳಲ್ಲಿ  ಸಿನಿಮಾದ ಶೂಟಿಂಗ್ ನಡೆಸಿದ್ದೇವೆ. 15-20 ಜನ ಮೇನ್ ಆರ್ಟಿಸ್ಟ್ ಈ ಚಿತ್ರದಲ್ಲಿ ನಟಿಸಿದ್ದಾರೆ. ‌ಜಾಸ್ತಿ ಎಮೋಷನ್ಸ್  ಈ ಚಿತ್ರದಲ್ಲಿದ್ದು,  ನನ್ನ ಹೆಂಡತಿಯೂ ಸಹ ನನಗಿಂತ ದೊಡ್ಡವರು. ಅದೂ ಕೂಡ  ಈ ಚಿತ್ರಕಥೆಗೆ ಸ್ಪೂರ್ತಿಯಾಗಿದೆ.  ಡಾಕ್ಟರ್ ಹಾಗೂ  ರೋಗಿಯ  ನಡುವಿನ ಕಥೆ. ಹೈಟ್ ಹಾಗೂ ವಯಸ್ಸಿನ ಅಂತರದ ಸಿನಿಮಾ ಇದಾಗಿದೆ.. ಒಂದಷ್ಟು ವಿಚಾರಗಳನ್ನು  ಯೂ ಟ್ಯೂಬ್ ನಿಂದ ತಿಳಿದುಕೊಂಡು ಸಿನಿಮಾ ಮಾಡಿದ್ದೇನೆ ನಮ್ಮ‌ ಚಿತ್ರವು 2020ರಲ್ಲೇ ಶುರುವಾಗಿತ್ತು. ಇದೇ ಅಕ್ಟೋಬರ್ ನಲ್ಲಿ ರಿಲೀಸ್ ಮಾಡುವ ಯೋಚನೆಯಿದೆ. ನಿರ್ಮಾಪಕರಿಗೆ ಹುಷಾರಿಲ್ಲದ ಕಾರಣ  ಬಂದಿಲ್ಲ ಎಂದರು.
 
ಸಂಗೀತ ನಿರ್ದೇಶಕ. ಪರಮ್ ನಿರ್ವಿಕಾರ್ ಮಾತನಾಡುತ್ತ ಶಾರ್ಟ್ ಫಿಲಂಗಳಿಗೆ,  ಅಲ್ಬಮ್ ಸಾಂಗ್ ಗಳಿಗೆ ಕೆಲಸ ಮಾಡಿದ್ದು ಮೊದಲಬಾರಿಗೆ ಸಿನಿಮಾಸಂಗೀತ ಮಾಡಿದ್ದೇನೆ. ನೈಜತೆಗೆ ಹತ್ತಿರವಾದಂತ ಸಿನಿಮಾ ಇದಾಗಿದೆ ಎಂದರು.
ನಾಯಕ ಅಶ್ರಿತ್ ವಿಶ್ವನಾಥ್ ಮಾತನಾಡಿ  ನಾಟಕಗಳಲ್ಲಿ ಅಭಿನಯಿಸಿದ್ದೆ. ನಂತರ ಸೀರಿಯಲ್ ಜೊತೆಗೆ  ಸಿನಿಮಾಗಳಲ್ಲಿ ಸಣ್ಣ ಪುಟ್ಟ  ಪಾತ್ರ ಮಾಡಿದ್ದೆ. ನಾಯಕನಾಗಿ ಮೊದಲ ಸಿನಿಮಾ ಎಂದು ಹೇಳಿದರು.
 
ನಾಯಕಿ ರಾಸಿಕಾ ಬೀರೇಂದ್ರ ಮಾತನಾಡಿ  ನಾನು ಮೂಲತಃ ಕುದುರೆ ಮುಖದವಳು.  ನಟನೆ ಮಾಡಬೇಕೆಂದು ಚಿಕ್ಕ ವಯಸ್ಸಿನಿಂದ ಆಸೆ ಇತ್ತು.ಇದರಲ್ಲಿ  ಜೋತಿರ್ಮಹಿ ಎಂಬ ಪಾತ್ರ ಮಾಡಿದ್ದೇನೆ ಎಂದರು. 
 
ಉಳಿದಂತೆ ದೀಪಿಕಾ, ಅರಸೀಕೆರೆ ರಾಜು, ಕೆಂಚಣ್ಣ, ಜಯಾ ಅಲ್ಲದೆ ಬಾಲ ಕಲಾವಿದೆ ದ್ರಿಯಾ ತಮ್ಮ‌ ಪಾತ್ರಗಳ‌ ಬಗ್ಗೆ ಹೇಳಿಕೊಂಡರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕುಳ್ಳನ ಹೆಂಡತಿ ಟ್ರೈಲರ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.