Chief Editor
Manohar. R (Manu)
Photo Journalist
chitrataramanu@gmail.com
+91 9845549026
ಟೆಂಪರ್ ಚಿತ್ರ ಬಿಡುಗಡೆಗೆ ಸಿದ್ದ ಇದೇ ತಿಂಗಳು ಟ್ರೈಲರ್
Posted date: 15 Tue, Nov 2022 08:41:30 AM
ಕಳೆದ ಹಲವಾರು ವರ್ಷಗಳಿಂದ ಸಾಹಿತಿ, ಸಂಗೀತ ಸಂಯೋಜಕನಾಗಿ ಗುರುತಿಸಿಕೊಂಡಿರುವ  ಮಂಜುಕವಿ ಟೆಂಪರ್ ಚಿತ್ರದ ಮೂಲಕ ನಿರ್ದೇಶನಕ್ಕಿಳಿದಿದ್ದರು. ಕನ್ನಡ ಹಾಗೂ ತೆಲುಗು  ಭಾಷೆಗಳಲ್ಲಿ ನಿರ್ಮಾಣವಾಗಿರುವ, ಮಾಸ್ ಲವ್‌ಸ್ಟೋರಿ ಒಳಗೊಂಡ ಟೆಂಪರ್  ಚಿತ್ರದ ಟ್ರೈಲರ್ ಇದೇ ತಿಂಗಳು ಬಿಡುಗಡೆಯಾಗಲಿದೆ, ಅಲ್ಲದೆ ಚಿತ್ರವೂ ಸಹ ಡಿಸೆಂಬರ್‌ನಲ್ಲಿ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಕುಟುಂಬ ಸಮೇತ ವೀಕ್ಷಿಸಬಹುದಾದಂಥ ಫ್ಯಾಮಿಲಿ ಸೆಂಟಿಮೆಂಟ್ ಚಿತ್ರ ಇದಾಗಿದ್ದು,  ಬೆಂಗಳೂರು, ಮಂಡ್ಯ, ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಚಿಕ್ಕಮಗಳೂರು ಹಾಗೂ ಮಡಿಕೇರಿ  ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.            

ಚಿಕ್ಕವನಿದ್ದಾಗಿಂದಲೂ ಯಾವುದೇ ವಿಷಯಕ್ಕಾದರೂ ತಕ್ಷಣ ಕೋಪಗೊಳ್ಳುವಂಥ ಗುಣವಿರುವ ನಾಯಕ, ಕಾರ್ ಗ್ಯಾರೇಜ್ ಇಟ್ಟುಕೊಂಡಿರುತ್ತಾನೆ, ಅದೇ ಊರಿನ ಗೌಡನ ಮಗಳು ಗೀತಾ ಮೇಲೆ ಆತನಿಗೆ ಲವ್ವಾಗುತ್ತದೆ, ಆ ಸಂದರ್ಭದಲ್ಲಿ ಆತ ಹೇಗೆ ತನ್ನ ಕುಟುಂಬ ಹಾಗೂ ತನ್ನ ಪ್ರೇಯಸಿ ಇಬ್ಬರನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಟೆಂಪರ್ ಚಿತ್ರದ ಕಥೆ.

ಶ್ರೀಬಾಲಾಜಿ ಎಂಟರ್ ಪ್ರೈಸಸ್ ಲಾಂಚನದಲ್ಲಿ ಮೋಹನ್ ಬಾಬು ಬಿ. ಹಾಗೂ ವಿ. ವಿನೋದ್‌ಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜುಕವಿ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ,ಈ ಚಿತ್ರದ ಮೂಲಕ ಆರ್ಯನ್ ಸೂರ್ಯ ಹಾಗೂ ಕಾಶಿಮಾ ಮೊದಲಬಾರಿಗೆ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದು, ಪತ್ರಕರ್ತ ಧನು ಯಲಗಚ್ ಹಾಗೂ ಮಜಾಟಾಕೀಸ್ ಪವನ್‌ಕುಮಾರ್ ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಬಾಲನಟನಾಗಿ ಮಾಸ್ಟರ್ ಪವನ್  ಮೋರೆ ಅಭಿನಯಿಸಿದ್ದಾರೆ ಉಳಿದಂತೆ ತಬಲಾನಾಣಿ, ಸುಧಾ ಬೆಳವಾಡಿ, ಟೆನ್ನಿಸ್ ಕೃಷ್ಣ, ಊರಗೌಡನಾಗಿ ಬಲ ರಾಜವಾಡಿ, ಯತಿರಾಜ್  ನಂದಿನಿ ವಿಠಲ, ಪ್ರಿಯ ತರುಣ್, ಸನತ್ ವಿನೋದ್ ಮೀಥಾಲಿ ಶಶಿ ಹಾಗೂ ಅನೇಕ ಹಿರಿಯ ಕಲಾವಿದರು ಈ ಚಿತ್ರದಲಿ ನಟಿಸಿದ್ದಾರೆ. ಅಲ್ಲದೆ ನಿರ್ದೇಶನ ತಂಡದಲ್ಲಿ  ಎಸ್ ಜೆ. ಸಂಜಯ್ ಜೀವನ್,   ಪ್ರವಿ, ಸಂಜಯ್ ಕಿರಣ್, ಎಂ.ಎಸ್. ಶ್ರೀಮಂತ್ ರಾಜ್, ಸುಯೋದ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಒಟ್ಟು ೫ ಹಾಡುಗಳಿದ್ದು, ಆರ್.ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಕೆ. ಶಿವಕುಮಾರ್ ಅವರ ಕ್ಯಾಮರಾ ವರ್ಕ್, ಬಿ.ಎಸ್. ಕೆಂಪರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಟೆಂಪರ್ ಚಿತ್ರ ಬಿಡುಗಡೆಗೆ ಸಿದ್ದ ಇದೇ ತಿಂಗಳು ಟ್ರೈಲರ್ - Chitratara.com
Copyright 2009 chitratara.com Reproduction is forbidden unless authorized. All rights reserved.