Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕುಳ್ಳನ ಹೆಂಡತಿ ಈವಾರ ಬಿಡುಗಡೆ
Posted date: 16 Wed, Nov 2022 11:21:42 AM
ಸ್ಟಾರ್ ವೆಂಚರ್ಸ್ ಬ್ಯಾನರ್ ಮೂಲಕ ನಿರ್ಮಾಣವಾಗಿರುವ, ವಿಭಿನ್ನ ಪ್ರೇಮಕಥಾಹಂದರ ಹೊಂದಿರುವ ಚಿತ್ರ ಕುಳ್ಳನ ಹೆಂಡತಿ‌  ಈ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶಾಖ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಆಶ್ರಿತ್ ವಿಶ್ವನಾಥ್ ಹಾಗೂ ರಾಸಿಕಾ ಬೀರೇಂದ್ರ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.
 
ಕುಳ್ಳನ ಹೆಂಡತಿ, ವಯಸಿನ ಅಂತರದ ಮೇಲೆ ನಡೆಯುವ ಕಥೆಯಾಗಿದ್ದು, 26ರ ಹರೆಯದ ಹುಡುಗನಿಗೆ 33ರ ವಯಸಿನ ನರ್ಸ್ ಮೇಲೆ  ಲವ್  ಆದರೆ ಹೇಗಿರುತ್ತೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ. ಡಾಕ್ಟರ್ ಹಾಗೂ  ರೋಗಿಯ  ನಡುವೆ ನಡೆಯೋ ಕಥೆಯಿದು. ಸಮಾಜಕ್ಕೆ ಒಂದೊಳ್ಳೆಯ ಮೆಸೇಜ್ ಕೂಡ ಈ ಚಿತ್ರದಲ್ಲಿದೆ. ಚಿತ್ರದಲ್ಲಿ 5 ಹಾಡುಗಳಿದ್ದು,  ಪರಮ್ ನಿರ್ವಿಕಾರ್  ಮೊದಲಬಾರಿಗೆ ಸಂಗೀತ‌ನಿರ್ದೇಶನ  ಮಾಡಿದ್ದಾರೆ.  ಉಳಿದಂತೆ ದೀಪಿಕಾ, ಅರಸೀಕೆರೆ ರಾಜು, ಕೆಂಚಣ್ಣ, ಜಯಾ ಅಲ್ಲದೆ ಬಾಲ ಕಲಾವಿದೆ ದ್ರಿಯಾ ಅಭಿನಯಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕುಳ್ಳನ ಹೆಂಡತಿ ಈವಾರ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.