ಆರೋನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದ ’ಪರಿಶುದ್ಧಂ’ ಚಿತ್ರದಲ್ಲಿ ಬಾಲಿವುಡ್ ಖ್ಯಾತ ಹಿರಿಯ ನಟ ದಿವಂಗತ ಅಮರೀಶ್ ಪುರಿ ಈ ಚಿತ್ರದಲ್ಲಿ ಸಿಜಿ (ಕಂಪ್ಯೂಟರ್ ಗ್ರಾಫಿಕ್ಸ್) ಮೂಲಕ ನೈಜ್ಯವಾಗಿ ಪ್ರೇಕ್ಷಕರ ಮುಂದೆ ಮತ್ತೆ ಬರುತ್ತಿದ್ದಾರೆ ಅಮರಿಶ್ ಪುರಿಯ 3D ಅನಿಮೇಟೆಡ್ ವಾಸ್ತವಿಕ ಮಾದರಿಯನ್ನು ರೂಪಿಸಿದ್ದಾರೆ .
ಚಿತ್ರಕ್ಕೆ ಕಥೆ, ಸಾಹಿತ್ಯ, ಸಂಗೀತ ಜತೆಗೆ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ನಿರ್ಮಾಣದಲ್ಲಿ ಪಾಲುದಾರನಾಗಿರುವ ಕಾರ್ತಿಕ್ ವೆಂಕಟೇಶ್ ಈ ಚಿತ್ರದ ಮೂಲಕ ಮದುವೆ ಅನ್ನುವ ಪದ್ದತಿ ಪರಿಶುದ್ದವಾದದು, ಗಂಡಹೆಂಡತಿ ಸಂಬಂಧದಲ್ಲಿ ಮೂರನೇ ವ್ಯಕ್ತಿ ಪ್ರವೇಶ ಆಗಬಾರದೆಂಬ ಸಂದೇಶವನ್ನು ಸಸ್ಪೆನ್ಸ್ , ಥ್ರಿಲ್ಲರ್ ಮೂಲಕ ಕುತೂಹಲಕಾರಿಯಾಗಿ ತೆರೆಯ ಮೇಲೆ ತೋರಿಸಲಿದ್ದಾರೆ.
ಪರಿಶುಧಮ್ ಚಿತ್ರದ ಫ್ಲಾಶ್‌ಬಿಕೆ SCENE ನಲ್ಲಿರುವ ವಿರೋಧಿ ಸೈಕೋ ಶ್ಯಾಮಾ ಅವರ ಸಂಬಂಧಿಯಾಗಿ AMRISH PURI -- VFX moolaka kaaniskolthare ತೋರಿಸಲಿದ್ದಾರೆ.
ನಟಿ ಸ್ಪರ್ಶಾ ರೇಖಾ ಪಾತ್ರವನ್ನು ನಿರ್ವಹಿಸಿದ್ದು, ಉಳಿದಂತೆ ಗಾಳಿಪಟ ನೀತು, ದಿಶಾ ಪೂವಯ್ಯ, ಕೀರ್ತಿ ಕೃಷ್ಣ, ಭಾರ್ಗವ್, ರಮೇಶ್ ಪಂಡಿತ್, ಎಂ.ಡಿ. ಕೌಶಿಕ್, ವಿಕ್ಟರಿ ವಾಸು, ಯತಿರಾಜ್, ಕುರಿ ಬಾಂಡ್ ರಂಗ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕುಮಾರ್ ರಾಥೋಡ್ ಹಾಗೂ ರೋಹನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬಹಳಷ್ಟು ವಿಶೇಷತೆಗಳಿದ್ದು, ಗ್ರಾಫಿಕ್ಸ್ ಕೆಲಸವು ಅದ್ದೂರಿಯಾಗಿ ಮೂಡಿಬರುತಿದು, ಆದಷ್ಟು ಬೇಗ ಬೆಳ್ಳಿ ಪರದೆಯ ಮೇಲೆ ಬರುತ್ತಿದ್ದೇವೆ ಎಂದು ನಿರ್ದೇಶಕ ಅರೋನ್ ಕಾರ್ತಿಕ್ ವೆಂಕಟೇಶ್ ಮಾಹಿತಿಯನ್ನು ಹಂಚಿಕೊಂಡರು.