Chief Editor
Manohar. R (Manu)
Photo Journalist
chitrataramanu@gmail.com
+91 9845549026
ಭಾವೀ ಶಿಕ್ಷಕಕ ಪ್ರೇಮ ಪ್ರಕರಣ.. 3/5***
Posted date: 01 Sun, Jan 2023 07:08:11 PM
ಲವ್‌ಸ್ಟೋರಿ 1998
ನಿರ್ದೇಶನ : ನಾಗರಾಜ್ ತಲಕಾಡು
ನಿರ್ಮಾಪಕರು : ಜಗದೀಶ್, ರಾಜಶ್ರೀ, ಕುಮಾರಸ್ವಾಮಿ, ಮೋಹನ್ ಕುಮಾರ್ 
ಸಂಗೀತ : ರಾಘವ ಸುಭಾಷ್, ಶಾಮ್
ಛಾಯಾಗ್ರಹಕ : ನಿರೀಕ್ಷಿತ್
ಸಾಹಸ : ಡಿಫರೆಂಟ್ ಡ್ಯಾನಿ 
ತಾರಾಗಣ : ಮಿಥುನ್ , ಕೃತಿಕಾ, ಪ್ರಕಾಶ್ ಶೆಣೈ, ಹರೀಶ್, ಯೋಗೇಶ್ , ಕ್ರಿಶ್, ಹಿತಾರ್ಥ, ರಾಯಣ್ಣ ಇತರರು...

 ಪ್ರೀತಿ  ಎಂಬ ಪದಕ್ಕೆ ಎಲ್ಲಾ ಕಾಲಘಟ್ಟದಲ್ಲೂ ಎಲ್ಲಾ ಭಾಗದ ಜನರಲ್ಲೂ ಒಂದೇ ಅರ್ಥವಿದೆ. ಅದಕ್ಕೆ ಬೇಧ ಭಾವ ಎಂಬುದಿಲ್ಲ. ಇಂಥ  ಒಂದು  ಕಂಟೆಂಟ್ ಇಟ್ಟುಕೊಂಡು  ಕೆಲ ನೈಜ ಘಟನೆಯನ್ನು ಆಧರಿಸಿ ಮಾಡಿದ ಕಥೆಯೇ 1948 ಲವ್ ಸ್ಟೋರಿ. 
 ಬಿಎಡ್ ವಿದ್ಯಾರ್ಥಿಗಳ ಲೈಫ್ ಸ್ಟೈಲ್, ಲವ್ ಹಾಗೂ ಸಂಬಂಧಗಳ ನಡುವಿನ  ಏರಿಳಿತಗಳನ್ನ ನಿರ್ದೇಶಕ ನಾಗರಾಜ್ ತಲಕಾಡು ಅವರು ಲವ್ ಸ್ಟೋರಿ 1998 ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.  ಕಾಲೇಜ್ ಕ್ಯಾಂಪಸ್ ನಲ್ಲಿ ಬಿಎಡ್ ಟ್ರೈನಿಯಾಗಿ ಸೇರಿಕೊಳ್ಳುವ ಧವನ್ (ಮಿಥುನ್) ತನ್ನ ಮಾತುಗಾರಿಕೆಯ ಮೂಲಕ ಗಮನ  ಸೆಳೆಯುತ್ತಿರುತ್ತಾನೆ.  ಮುಗ್ಥ ಚೆಲುವೆ ಪಾರಿಜಾತ (ಕೃತಿಕಾ) ಜೊತೆ  ಒಡನಾಟ.  ಕಾಲೇಜು ಚಟುವಟಿಕೆಗಳಲ್ಲಿ ಭಾಗಿಯಾಗುವ  ಬಿಎಡ್ ತಂಡಗಳು ತಮ್ಮ ತರಬೇತಿ ಅವಧಿಯ ನಡುವೆ ಶಾಲಾ ಮಕ್ಕಳಿಗೆ ಪಾಠ ಮಾಡಲು ಟೀಮ್ ಮಾಡಿಕೊಂಡು ತಮ್ಮ ಸಾಮರ್ಥ್ಯ ತೋರಿಸುತ್ತಾರೆ. ತಾವು ಶಿಕ್ಷಕರಾಗಿದ್ದು , ನಮ್ಮಲ್ಲಿ ಸ್ನೇಹ ಗೆಳೆತನ ಮುಖ್ಯ ಎನ್ನುವ  ಧವನ್ ತನ್ನ ಪ್ರೀತಿಯ ನಿವೇದನೆಯನ್ನು ಪಾರಿಜಾತಳಿಗೆ ಕವಿತೆಯ ಮೂಲಕ ವ್ಯಕ್ತಪಡಿಸುತ್ತಾನೆ.
 
ಇದಕ್ಕೆ  ಸ್ಪಂದಿಸದ ಪಾರಿಜಾತ ಈತನ ಪ್ರೀತಿಯನ್ನ ನಿರಾಕರಿಸಿ, ಸ್ನೇಹಿತೆಯಂತೆ ಇರಲು ಒಪ್ಪುತ್ತಾಳೆ. ಇದರಿಂದ ತಳಮಳಗೊಳ್ಳುವ  ಧವನ್ ತನ್ನ ಗೆಳೆಯನೊಬ್ಬನ ಪ್ರೇಮ ಪ್ರಕರಣ ಇಂಥದ್ದೇ ಸಮಸ್ಯೆ ಕಂಡು ನೊಂದಿರುತ್ತಾನೆ. ಪ್ರೀತಿಯ ವಿಷಯಬಿಟ್ಟು ಓದಿನ ಕಡೆ ಗಮನ ಕೊಡಬೇಕೋ. ಪ್ರೀತಿಯನ್ನ ಪಡೆಯಬೇಕೋ ಎಂಬ ಪ್ರಶ್ನೆಯ ನಡುವೆ ಒಂದು ಸಮಸ್ಯೆ ಬಗೆಹರಿಯುತ್ತಿದೆ ಎನ್ನುವಷ್ಟರಲ್ಲಿಯೇ ಮತ್ತೊಂದು ದುರಂತ  ನಡೆದುಹೋಗುತ್ತದೆ.  ಕೊನೆಗೆ ನಾಯಕನಿಗೆ ಆತನ ಪ್ರೀತಿ ಸಿಗುತ್ತಾ... ನಾಯಕಿ ಪ್ರೀತಿ ನಿರಾಕರಿಸಲು ಕಾರಣ..ಕ್ಲೈಮಾಕ್ಸ್ ನಲ್ಲಿ ಸಿಗುವ ಉತ್ತರ...
ಈ ಎಲ್ಲದಲ್ಲೂ ಉತ್ತರ ಬೇಕೆಂದರೆ  ಒಮ್ಮೆ ಲವ್ ಸ್ಟೋರಿ 1998 ನೋಡಬೇಕು.
 
ಪ್ರಥಮ ಪ್ರಯತ್ನದಲ್ಲೇ ನಿರ್ದೇಶಕ ನಾಗರಾಜ್ ತಲಕಾಡು ಒಂದು ಉತ್ತಮ ಕಂಟೆಂಟ್ ಇಟ್ಟುಕೊಂಡು  ಕಾವ್ಯಮಯ  ಪ್ರೇಮಕಥೆಯನ್ನು  ತೆರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ. ಕಥೆ ವಿಶೇಷವಾಗಿದ್ದು,  ಸಂಭಾಷಣೆಗಳು ವೀಕ್ಷಕರ ಮನಸಿಗೆ  ನಾಟುವಂತಿವೆ.  ಮೈಸೂರಿನ ಒಂದೇ ಕುಟುಂಬದವರು ಸೇರಿ  ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರಕ್ಕೆ ಸಂಗೀತ ಉತ್ತಮವಾಗಿದೆ.  ಛಾಯಾಗ್ರಹಣದಲ್ಲಿ ಇನ್ನಷ್ಟು ಹೊಸತನ ಬೇಕಿತ್ತು.  ಡಿಫರೆಂಟ್ ಡ್ಯಾನಿ ಅವರ  ಸಾಹಸ ಸಂಯೋಜನೆ ಈ ಚಿತ್ರದ ಹೈಲೈಟ್.
 
ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಯುವ ಪ್ರತಿಭೆ ಮಿಥುನ್ ಬಿಎಡ್ ವಿದ್ಯಾರ್ಥಿಯ ಪಾತ್ರದಲ್ಲಿ ಆಗಿನ ಕಾಲಘಟ್ಟಕ್ಕೆ ಹೊಂದುವ ಹಾಗೆ ತಮಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದು, ಸಾಹಸ ದೃಶ್ಯಗಳನ್ನು ಕೂಡ ಸಮರ್ಥವಾಗಿ ಎದುರಿಸಿದ್ದಾರೆ. ಇನ್ನು ತೆರೆಯ ಮೇಲೆ ಮುದ್ದಾಗಿ ಕಾಣುವ ನಟಿ ಕೃತಿಕಾ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಕೊಡುವುದಕ್ಕೆ ಉತ್ತಮ  ಎಫರ್ಟ್  ಹಾಕಿದ್ದಾರೆ. ಇನ್ನು ಗೆಳೆಯ, ಗೆಳತಿಯರ ಪಾತ್ರಗಳನ್ನು ಯುವಕಲಾವಿದು ಸಮರ್ಥವಾಗಿ ನಿಭಾಯಿಸಿದ್ದಾರೆ. ಉಳಿದ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ. ಒಟ್ಟಾರೆ ಭಾವನೆಗಳ ಬೆಸಿಗೆಯೊಂದಿಗೆ ಪ್ರೀತಿಯ ಮೌಲ್ಯವನ್ನು ಎತ್ತಿ ಹಿಡಿಯುವುದರ ಜೊತೆಗೆ ಬದುಕಿನ ಪಯಣದ ದಿಕ್ಕನ್ನು ಬಹಳ ಸೂಕ್ಷ್ಮವಾಗಿ ತೆರೆದಿಟ್ಟಿರುವ ಈ ಲವ್ ಸ್ಟೋರಿ 1998 ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಭಾವೀ ಶಿಕ್ಷಕಕ ಪ್ರೇಮ ಪ್ರಕರಣ.. 3/5*** - Chitratara.com
Copyright 2009 chitratara.com Reproduction is forbidden unless authorized. All rights reserved.