ಎಲ್ಲರ ಮನಮುಟ್ಟುವ ಸಪ್ತ ಶೈಲಿಯ ಸಂಗೀತ ಚಿತ್ರ
ಮುಚ್ಚಿಕೊಂಡಿದ್ದೇವೆ ಕಣ್ಣು
ಪ್ರೊ.ರಾಧಾಕೃಷ್ಣ ಅವರು
"ಮುಚ್ಚಿಕೊಂಡಿದ್ದೇವೆ ಕಣ್ಣು" ಎಂಬ ಏಳು ಶೈಲಿಗಳ ಸಂಗೀತ ಚಿತ್ರವನ್ನು ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ. ಕೃತಿ ಹಾಗೂ ರಚನೆ ಕೂಡ ರಾಧಾಕೃಷ್ಣ ಅವರದೆ..ಇತ್ತೀಚಿಗೆ ಈ ಹಾಡಿನ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸದಾಶಿವ ಶೆಣೈ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಹಿರಿಯ ನಟರಾದ ಶ್ರೀನಾಥ್, ಸುಂದರರಾಜ್, ಕೆ.ಹೆಚ್.ಪುಟ್ಟಸ್ವಾಮಿಗೌಡ, ಲಕ್ಷ್ಮೀನಾರಾಯಣ್, ಬಿ.ಕೆ.ಶಿವರಾಮ್, ಸುಂದರ ಶಿವರಾಮ್ ಮುಂತಾದ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದು, ಏಳು ಶೈಲಿಗಳ ಸಂಗೀತ ಚಿತ್ರವನ್ನು ವೀಕ್ಷಿಸಿ, ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕೊರೋನದಂತಹ ಕಷ್ಟದ ಸಮಯದಲ್ಲಿ ಎಲ್ಲರೂ ಬಳಲುತ್ತಿದ್ದಾಗ, ಆರಕ್ಷಕರು, ಪೌರ ಕಾರ್ಮಿಕರು, ಆಂಬ್ಯುಲೆನ್ಸ್ ಚಾಲಕರು, ಆಸ್ಪತ್ರೆಯ ಆಯಾಗಳು, ವೈದ್ಯರು ಹಾಗೂ ರುದ್ರಭೂಮಿಯ ಕೆಲಸಗಾರರು ಇಂತಹವರು ಮಾತ್ರ ಒಂದು ದಿನ ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆ ಸಮಯದಲ್ಲಿ ನಾನು ಈ "ಮುಚ್ಚಿಕೊಂಡಿದ್ದೇವೆ ಕಣ್ಣು" ಕೃತಿ ಬರೆದೆ. ಇದನ್ನು ಆತ್ಮೀಯರಾದ ಗಣೇಶ್ ದೇಸಾಯಿ ಅವರ ಬಳಿ ಹೇಳಿ, ಈ ಕೃತಿಯನ್ನು ಸ್ವಲ್ಪ ವಿಭಿನ್ನವಾಗಿ ಮಾಡೋಣ. ಶಾಸ್ತ್ರೀಯ, ಯಕ್ಷಗಾನ, ಪಾಶ್ಚಿಮಾತ್ಯ ಸೇರಿದಂತೆ ಏಳು ಶೈಲಿಗಳಲ್ಲಿ ಈ ಹಾಡನ್ನು ಹಾಡಿಸೋಣ ಎಂದೆ. ಗಣೇಶ್ ದೇಸಾಯಿ ಒಪ್ಪಿಕೊಂಡರು. ಅದ್ಭುತವಾಗಿ ಸಂಗೀತ ಸಂಯೋಜಿಸಿದ್ದಾರೆ. ಏಳು ಶೈಲಿಯಲ್ಲಿ ನಾಡಿನ ಪ್ರಸಿದ್ದ ಸಂಗೀತಗಾರರು ಈ ಹಾಡನ್ನು ಸುಂದರವಾಗಿ ಹಾಡಿದ್ದಾರೆ.
"ಮುಚ್ಚಿಕೊಂಡಿದ್ದೇವೆ ಕಣ್ಣು" ಸಂಗೀತ ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣರಾದ ನನ್ನ ತಂಡಕ್ಕೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಗಣ್ಯರಿಗೆ ಧನ್ಯವಾದ ಎಂದರು ಪ್ರೊ.ರಾಧಾಕೃಷ್ಣ.