Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸ್ಪೂಕಿ ಕಾಲೇಜ್ ಇಲ್ಲಿ ಹೇಡನ್ ಆತ್ಮ ಸಂಚರಿಸುತ್ತಿದೆ...! 3.5/5 ****
Posted date: 08 Sun, Jan 2023 09:41:53 AM
ಸ್ಪೂಕಿ ಕಾಲೇಜ್ ಪಕ್ಕಾ  ಹಾರರ್ ಕಥಾಹಂದರ ಒಳಗೊಂಡ ಚಿತ್ರ. ಕಾಲೇಜೊಂದರಲ್ಲಿ ನಡೆಯುವ ದುರ್ಮರಣಗಳು, ಅದರ ಸುತ್ತ ನಡೆಯುವ ಪ್ರಕರಣಗಳನ್ನು  ಇಟ್ಟುಕೊಂಡು ಪ್ರೇಕ್ಷಕರನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ.
 
ಚಿತ್ರದ ಕಥೆ ಇಷ್ಟು;  ನೂರು ವರ್ಷಗಳಷ್ಟು ಹಳೆಯದಾದ  ಬ್ರಿಟಿಷರ ಕಾಲದ ಶಿಥಿಲಾವಸ್ಥೆಯಲ್ಲಿದ್ದ  ಕಾಲೇಜ್ ಕಟ್ಟಡವೊಂದನ್ನು  ನವೀಕರಣಗೊಳಿಸಿ,  ಪುನಃ ಅಲ್ಲಿ ಎಂಜಿನಿಯರಿಂಗ್ ಕಾಲೇಜನ್ನು  ಆರಂಭಿಸುವ  ಪ್ರಿನ್ಸಿಪಾಲ್, ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ನಡೆಸುವ  ಪ್ರಯತ್ನ, ಆ ಹಂತದಲ್ಲಿ ಜರುಗುವ ಕೆಲ ಅಹಿತಕರ ಘಟನೆಗಳು ಕಾಲೇಜಿನ ಬಗ್ಗೆ ಇದ್ದ ಇತಿಹಾಸಕ್ಕೆ  ಸಿಂಕ್ ಆಗಿ ಅಲ್ಲಿದ್ದ ವಿದ್ಯಾರ್ಥಿಗಳಲ್ಲಿ  ಭಯ ಹುಟ್ಟಿಸುತ್ತವೆ. ಆ ಕಾಲೇಜಿನಲ್ಲಿ‌ ಓದುತ್ತಿರುವ  ಖುಷಿ (ಖುಷಿ ರವಿ) ಹಾಗೂ ರಿಷಿ (ವಿವೇಕ್ ಸಿಂಹ ) ಇಬ್ಬರ ಪರಿಚಯ, ನಂತರ ಸ್ನೇಹ ಬೆಳೆದು ಒಳ್ಳೇ ಸ್ನೇಹಿತರೂ ಆಗುತ್ತಾರೆ.  ನಂತರ ಅ  ಕಾಲೇಜಿನಲ್ಲಿ ಒಂದಷ್ಟು ಚಿತ್ರವಿಚಿತ್ರ ಘಟನೆಗಳು,  ದುರ್ಮರಣಗಳು  ನಡೆದು ಅಲ್ಲಿದ್ದವರಲ್ಲಿ ಒಂದು ರೀತಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ.  ಕೆಲವು ವಿಚಾರಗಳ ಬಗ್ಗೆ ಆ ಕಾಲೇಜಿನಲ್ಲಿ  ಚರ್ಚೆ ಕೂಡ ಮಾಡುವಂತಿರಲಿಲ್ಲ. ಮಾಡಿದರೆ ಮುಂದೆ ದೊಡ್ಡ ಅನಾಹುತಗಳೇ ಸಂಭವಿಸುತ್ತೆ ಎನ್ನುವ ವದಂತಿ ಹಬ್ಬಿರುತ್ತದೆ. ಅದು ನಿಜವೋ ಸುಳ್ಳೋ ಎನ್ನುವುದಕ್ಕೆ  ಕ್ಲೈಮ್ಯಾಕ್ಸ್ ನಲ್ಲಿ   ಉತ್ತರವಿದೆ.  ಕಾಲೇಜು ಆವರಣದಲ್ಲೇ ಕೆಲ ವಿದ್ಯಾರ್ಥಿಗಳು ವಿಚಿತ್ರವಾಗಿ ಸಾವನ್ನಪ್ಪುತ್ತಾರೆ.  ಅಷ್ಟಕ್ಕೂ ಆ ಕಾಲೇಜಿನಲ್ಲಿ ನಡೆಯುವ  ಆ ದುರ್ಘಟನೆಗಳಿಗೆ  ಕಾರಣವಾದರೂ ಏನು, ಇದೆಲ್ಲಾ ಆ ಕಾಲೇಜನ್ನು  ಹುಟ್ಟುಹಾಕಿದ ಹೇಡನ್ ಮಾಡ್ತಿರೋ  ಕೆಲಸನಾ, ಅಥವಾ ದೆವ್ವದ ಕೆಲಸವಾ ಎನ್ನುವ  ಪ್ರಶ್ನೆಗಳನ್ನು ಹುಟ್ಟುಹಾಕಿ ಚಿತ್ರದ ಕೊನೆಯಲ್ಲಿ  ಅದಕ್ಕೆ  ಉತ್ತರ ನೀಡಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಭರತ್.  ತಮ್ಮ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡಬೇಕೆಂದು  ಚಿತ್ರಕ್ಕೆ ಸಾಕಷ್ಟು ಎಫರ್ಟ್ ಹಾಕಿದ್ದಾರೆ. ಅದೊಂದು ಎಂಜಿನಿಯರಿಂಗ್  ಕಾಲೇಜ್ ಆದರೂ, ಅಲ್ಲಿ  ಬೆರಳೆಣಿಕೆಯಷ್ಟು  ವಿದ್ಯಾರ್ಥಿಗಳಷ್ಟೇ  ಕಾಣಿಸುವುದರಿಂದ ಕಾಲೇಜ್ ಫೀಲ್ ಕೊಡೋದಿಲ್ಲ, ಅದು  ಹೊಸ ಕಾಲೇಜು, ಅಲ್ಲದೆ ಜನರಲ್ಲಿ ಭಯ ಇರೋದ್ರಿಂದ ಇದಬಹುದು ಎಂದು ನಾವೇ ಉತ್ತರ ಕಂಡುಕೊಳ್ಳಬಹುದು. ಅಲ್ಲದೆ ಅದು ರಿಯಲ್ ಕಾಲೇಜೇ ಆಗಿರುವುದರಿಂದ  ಕಟ್ಟಡದ ಬಗ್ಗೆ ಗೊಂದಲಪಡಬೇಕಿಲ್ಲ,  
 ಉಳಿದಂತೆ  ತಾಂತ್ರಿಕ ವರ್ಗಕ್ಕೆ  ಬಂದರೆ ಮನೋಹರ ಜೋಷಿ ಅವರ  ಛಾಯಾಗ್ರಹಣ ಚಿತ್ರಕ್ಕೆ  ಪ್ಲಸ್ ಆಗಿದೆ. ಉಳಿದಂತೆ  ಚಿತ್ರದ ವಿಎಫ್ ಎಕ್ಸ್  ಎಫೆಕ್ಟ್ ಬಗ್ಗೆ ಮೆಚ್ಚಲೇಬೇಕು.  ಆಗಾಗ ಎದುರಾಗುವ ಭಯಪಡಿಸುವ   ದೃಶ್ಯಗಳು  ಚಿತ್ರದ ಕುತೂಹಲವನ್ನು ಕ್ಲೈಮ್ಯಾಕ್ಸ್ ವರೆಗೆ  ಉಳಿಸಿಕೊಂಡು ಹೋಗಿವೆ.  ಒಂದಷ್ಟು  ತಿರುವುಗಳಿದ್ದರೂ, ಅಷ್ಟೊಂದು ಕುತೂಹಲ ಹುಟ್ಟಿಸಲ್ಲ.  ಚಿತ್ರವನ್ನು ಇನ್ನಷ್ಟು  ಪರಿಣಾಮಕಾರಿಯಾಗಿ ತೆರೆಮೇಲೆ ತರಲು ಅವಕಾಶವಿತ್ತು,  ಅಜನೀಶ್ ಲೋಕನಾಥ್  ಅವರ ಆರ್‌ಆರ್  ಕೊನೆವರೆಗೂ ಥೇಟರ್ನಲ್ಲಿ  ಅಬ್ಬರಿಸಿದ್ದು, ಅದರ ನಡುವೆ ಕೆಲ ಸಂಭಾಷಣೆಗಳನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಖುಷಿ  ಹಾಗೂ  ವಿವೇಕ್ ಸಿಂಹ  ಇಬ್ಬರೂ ತಮಗೆ ಕೊಟ್ಟ  ಪಾತ್ರಗಳನ್ನು ಲವಲವಿಎಕೆಯಿಂದ ನಿರ್ವಹಿಸಿದ್ದಾರೆ. ಹಿಂದೆ ಭಗ್ನ ಪ್ರೇಮಿಯಾಗಿ ಕಾಣಿಸಿಕೊಂಡಿದ್ದ ಖುಷಿ ರವಿ, ಇಲ್ಲಿ ನೋಡುಗರನ್ನೇ ಭಯಪಡಿಸುತ್ತಾರೆ. ವಿಜಯ ಚೆಂಡೂರ್ ಅವರ ಕಾಮಿಡಿ, ಸಿದ್ಲಿಂಗು   ಶ್ರೀಧರ್ ಅವರ  ಅಭಿನಯ ಗಮನ ಸೆಳೆಯತ್ತಾರೆ.  ಹಳೆಯ ಮೆಲ್ಲುಸಿರೇ ಸವಿಗಾನ...` ಹಾಡಿನ ರಿಮಿಕ್ಸ್ ನಲ್ಲಿ  ರೀಷ್ಮಾ ನಾಣಯ್ಯ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸ್ಪೂಕಿ ಕಾಲೇಜ್ ಇಲ್ಲಿ ಹೇಡನ್ ಆತ್ಮ ಸಂಚರಿಸುತ್ತಿದೆ...! 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.