Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕೋಮಲ್ ಕುಮಾರ್ ಅಭಿನಯದ ``ಕಾಲಾಯ ನಮಃ``ಚಿತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ .
Posted date: 11 Wed, Jan 2023 10:38:00 AM
ತಮ್ಮ ಅಮೋಘ ನಟನೆಯ ಮೂಲಕ ಜನಪ್ರಿಯರಾಗಿರುವ ನಟ ಕೋಮಲ್ ಕುಮಾರ್, ಐದು ವರ್ಷಗಳ ನಂತರ ನಾಯಕರಾಗಿ ನಟಿಸುತ್ತಿರುವ ಚಿತ್ರ "ಕಾಲಾಯಾ ನಮಃ".

ಪ್ರಸ್ತುತ ಈ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈಗ ಮತ್ತೊಂದು ಖುಷಿಯ ವಿಚಾರವೆಂದರೆ, ತಮ್ಮ ನಟನೆಯ ಮೂಲಕ ಭಾರತದಾದ್ಯಂತ ಹೆಸರು ಮಾಡಿರುವ ಬಹುಭಾಷಾ ನಟ ಪ್ರಕಾಶ್ ರೈ " ಕಾಲಾಯಾ ನಮಃ" ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ
 ಪ್ರಕಾಶ್ ರೈ ಅವರ ಅಭಿನಯದ ಸನ್ನಿವೇಶಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. 

ಅನುಸೂಯ ಕೋಮಲ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಮತಿವಣನ್ ನಿರ್ದೇಶಿಸುತ್ತಿದ್ದಾರೆ. ಎಮಿಲ್ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಕೋಮಲ್ ಕುಮಾರ್,  ಆಸಿಯಾ ಫಿರ್ದೋಸ್, ಪ್ರಕಾಶ್ ರೈ, ಸುಚೀಂದ್ರ ಪ್ರಸಾದ್, ತಿಲಕ್, ಯತಿರಾಜ್ ಜಗ್ಗೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೋಮಲ್ ಕುಮಾರ್ ಅಭಿನಯದ ``ಕಾಲಾಯ ನಮಃ``ಚಿತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ . - Chitratara.com
Copyright 2009 chitratara.com Reproduction is forbidden unless authorized. All rights reserved.