Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಪ್ರಜಾರಾಜ್ಯ`ದ ಸುಂದರ ರೈತ ಗೀತೆ `ಜಗದಲಿ ರೈತನೆಂಬ ಬ್ರಹ್ಮ` ಸಂಕ್ರಾಂತಿ ಹಬ್ಬದಂದು ರಿಲೀಸ್ ಆಗುತ್ತಿದೆ
Posted date: 13 Fri, Jan 2023 � 12:11:16 PM
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಯ್ತು. ಪ್ರಜೆಗಳು ಸಂಪೂರ್ಣವಾಗಿ ಸ್ವಾತಂತ್ರ್ಯರಾಗಿದ್ದಾರಾ? ಎಂಬ ಪ್ರಶ್ನೆ ಹುಟ್ಟು ಹಾಕುವಂತ ಸಿನಿಮಾವೊಂದು ಸಿದ್ಧವಾಗಿದ್ದು ಆ ಚಿತ್ರದ ಹೆಸರು `ಪ್ರಜಾರಾಜ್ಯ` ಈಗಾಗಲೇ ಚಿತ್ರದ `ಜೈ ಎಲೆಕ್ಷನ್ ...` ಎಂಬ ಗೀತೆ ಬಿಡುಗಡೆ ಆಗಿ ಸೌಂಡ್ ಮಾಡಿದೆ. ಈ ಗೀತೆಯನ್ನು ಯೋಗರಾಜ್ ಭಟ್ ಬರೆದಿದ್ದು ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಇದೀಗ ಚಿತ್ರದ ಇನ್ನೊಂದು ಸುಂದವಾದ ಹಾಡು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗುತ್ತಿದೆ. `ಜಗದಲ್ಲಿ ರೈತನೆಂಬ ಬ್ರಹ್ಮ ...` ಗೀತೆಯನ್ನು ಡಾಕ್ಟರ್ ವಿ. ನಾಗೇಂದ್ರ ಪ್ರಸಾದ್ ಬರೆದಿದ್ದು, ಶಂಕರ್ ಮಹದೇವನ್ ಹಾಡಿದ್ದಾರೆ. ಇತ್ತೀಚೆಗೆ ಈ ಗೀತೆ ಬಿಡುಗಡೆ ಮಾಡಿ ಮಾತನಾಡಿದ ನಟ ನಿರ್ದೇಶಕ ಟಿ.ಎಸ್ ನಾಗಾಭರಣ `ರೈತ ಗೀತೆಗಳು ನಮಗೆಲ್ಲ ಹೊಸದಲ್ಲ. ಕುವೆಂಪು ಮಾದರಿ ಕಲ್ಪಿಸಿ ಕೊಟ್ಟಿದ್ದಾರೆ. ಈ ಚಿತ್ರದ ರೈತ ಗೀತೆಯಲ್ಲಿ ಹೊಸದನ್ನು ಹುಟ್ಟುಹಾಕುವ ಪ್ರಯತ್ನವನ್ನು ನಾಗೇಂದ್ರ ಪ್ರಸಾದ್ ಚನ್ನಾಗಿ  ಮಾಡಿದ್ದಾರೆ. ನಮ್ಮ ಮೂಲ ಸಂಸ್ಕೃತಿ ಜೊತೆ ಕೃಷಿ ಹೆಣೆಯಬೇಕು ಎನ್ನುವಾಗ ಗ್ಲೋಬಲ್ ಮಾರ್ಕೆಟ್ ಬಂದು ಅದನ್ನು ಬೆಳೆಯಲು ಬಿಡುತ್ತಿಲ್ಲ. ಈ ಮಾರ್ಕೆಟ್ ನಮ್ಮ ಸಂಸ್ಕೃತಿನ್ನು ಮರೆಸುತ್ತಿದೆ. ರೈತರು ಬೆಳೆದ ಬೆಳೆಗಳ ಬೇಲೆಗಿಂತ ಮಾರಾಟ ಮಾಡುವ ಮದ್ಯವರ್ತಿಗಳಿಗೆ ಬೇಡಿಕೆ ಇದ್ದು ಜಾಗತಿಕ ಮಾರುಕಟ್ಟೆ ಹುನ್ನಾರ ನಡೆದಿದೆ. ಕೃಷಿ ಹಾಳಾದ್ರೆ ಎನಾಗುತ್ತೆ ಎನ್ನುವುದಕ್ಕೆ ಇಂದು ಪಾಕಿಸ್ತಾನ ಒಂದು ಉತ್ತಮ ಉದಾಹರಣೆ. ಆಧುನಿಕ ಗೊಬ್ಬರ ಔಷಧಿ ಹಾಕಿ ಇಂದು ನಾವು ಮತ್ತೆ ಸಾವಯವ ಕೃಷಿಯ ಕಡೆ ಬರತಾ ಇದ್ದೇವೆ. ಟ್ರ್ಯಾಕ್ಟರ್ ಬಂದಮೇಲೆ ಎತ್ತುಗಳು ಕಡಿಮೆ ಆಗಿವೆ. ಆ ಅನುಭವನ್ನು ಜನರಿಗೆ ತಲುಪಿಸುವ ಪ್ರಯತ್ನ ಈ ತಂಡ ಮಾಡಿದೆ. ಪ್ರಜೆಗಳಿಗೆ ಮುಖ್ಯವಾಗಿ ಇರಬೇಕಾದ ಅಂಶದ ಮೇಲೆ ಈ ಸಿನಿಮಾ ಮಾಡಲಾಗಿದೆ. ಹೊಸತನವನ್ನು ಹುಡುಕುತ್ತಾ ಮುಂದೆ ಬಂದಿದೆ ಪ್ರಜಾರಾಜ್ಯ ತಂಡ. ಈ ಸಿನಿಮಾ ಪ್ರಜೆಗಳಿಗೆ ತಲುಪಬೇಕು`ಎಂದರು.

ನಂತರ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ಡಾಕ್ಟರ್ ವರದರಾಜು ಡಿ.ಎಸ್ `ನಾನು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದರೂ ನನ್ನ ಮೂಲ ಕೃಷಿ. ಇಂದು ದೇಶ ಕಾಪಾಡತಾ ಇರೋದು ಕೃಷಿ ಹಾಗೂ ರೈತ. ಆ ರೈತರಿಗೆ ಈ ಸಾಂಗ್ ಸಮರ್ಪಣೆ. ಹಾಗಾಗಿ ನಾವು ಈ ಗೀತೆಯನ್ನು ರೈತರ ಹಬ್ಬವಾದ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದು 75 ವರ್ಷದಲ್ಲಿ ಪ್ರಜಾಪ್ರಭುತ್ವ ಮರೆತಿರುವುದು ನಮ್ಮ ಸಾಧನೆ. ಹಾಗಾಗಿ ಅದನ್ನು ನೆನಪು ಮಾಡುವುದಕ್ಕೆ ಈ ಸಿನಿಮಾ ಮಾಡಲಾಗಿದೆ` ಎಂದು ಹೇಳಿದರು. ಚಿತ್ರದ ನಿರ್ದೇಶಕ ವಿಜಯ್ ಭಾರ್ಗವ `ಇದು ನನ್ನ ಮೊದಲ ಸಿನಿಮಾ. ರೈತ ಗೀತೆ ಶೂಟ್ ಮಾಡಿದ್ದು ಹೆಮ್ಮೆ ಇದೆ` ಎನ್ನುವರು. ಇದೇ ಸಂದರ್ಭದಲ್ಲಿ ಹಿರಿಯ ನಟ ಚಿಕ್ಕ ಜಾಜಿ ಮಹಾದೇವ `ಇದರಲ್ಲಿ ನಾನು ಸ್ಪಿಕರ್ ಪಾತ್ರ ಮಾಡಿದ್ದೇನೆ. ನಾಗಾಭರಣ ರೈತರ ಪಾತ್ರ ಮಾಡಿದ್ದು ಅವರನ್ನು ಗೀತೆಯಲ್ಲಿ ನೋಡುವುದೇ ಚಂದ` ಎಂದು ನತಮಗೆ ಇರುವ ಕೃಷಿಯ ನಂಟನ್ನು ನೆನಪು ಮಾಡಿಕೊಂಡರು. ಕೊನೆಯಲ್ಲಿ ಮಾತನಾಡಿದ ವಿತರಕ ವೆಂಕಟ್ `ಇದೇ ಫೆಬ್ರವರಿ 24ರಂದು ಸಿನಿಮಾ ರಿಲೀಸ್ ಆಗಲಿದೆ. ಇದು ಮೆಸೇಜ್ ಒರೆಂಟ್ ಸಿನಿಮಾ ಆದ್ದರಿಂದ 300ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್ ನಡೆಯುತ್ತಿದೆ` ಎಂದು ಹೇಳಿದರು. ಚಿತ್ರಕ್ಕೆ ವಿಜೇತ ಮಂಜಯ್ಯ ಅವರ ಸಂಗೀತ, ರಾಕೇಶ್ ತಿಲಕ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನವಿದೆ. ಚಿತ್ರದ ಮುಖ್ಯ ಪಾತ್ರದಲ್ಲಿ ನಿರ್ಮಾಪಕ ವರದರಾಜು ಹಾಗೂ ನಿರ್ದೇಶಕ ವಿಜಯ್ ಭಾರ್ಗವ ನಟನೆ ಮಾಡಿದ್ದು, ನಾಯಕಿಯಾಗಿ ದಿವ್ಯಾ ಗೌಡ ಇದ್ದಾರೆ. ಉಳಿದ ತಾರಾಗಣದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್, ಸುಧಾ ಬೆಳವಾಡಿ, ಟಿ.ಎಸ್. ನಾಗಾಭರಣ, ಅಚ್ಚುತ್ ಕುಮಾರ್, ತಬಲಾ ನಾಣಿ, ಸುಧಾರಾಣಿ ಮುಂತಾದವರು ಇದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಪ್ರಜಾರಾಜ್ಯ`ದ ಸುಂದರ ರೈತ ಗೀತೆ `ಜಗದಲಿ ರೈತನೆಂಬ ಬ್ರಹ್ಮ` ಸಂಕ್ರಾಂತಿ ಹಬ್ಬದಂದು ರಿಲೀಸ್ ಆಗುತ್ತಿದೆ - Chitratara.com
Copyright 2009 chitratara.com Reproduction is forbidden unless authorized. All rights reserved.