Chief Editor
Manohar. R (Manu)
Photo Journalist
chitrataramanu@gmail.com
+91 9845549026
`ನೀಲಕಂಠ`ನಾಗಿ ಬರುತ್ತಿದ್ದಾರೆ ಮಾಸ್ಟರ್​ ಮಹೇಂದ್ರನ್​; ಹುಟ್ಟುಹಬ್ಬಕ್ಕೆ ಸ್ಪೆಷಲ್​ ಸಾಂಗ್​
Posted date: 23 Mon, Jan 2023 08:11:57 AM
ತಮಿಳು ಚಿತ್ರರಂಗದಲ್ಲಿ ಮಾಸ್ಟರ್​ ಮಹೇಂದ್ರನ್​ ಜನಪ್ರಿಯ ಹೆಸರು. ಕೇವಲ ಮೂರು ವರ್ಷದವರಿದ್ದಾಗ ಬಣ್ಣ ಹಚ್ಚಿದ ಮಹೇಂದ್ರನ್​, ಆ ನಂತರ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡವರು. ತಮ್ಮ ಅಭಿನಯದಿಂದ ನಾಲ್ಕು ಬಾರಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವರು. `ವಿಳಾ` ಎಂಬ ಚಿತ್ರದ ಮೂಲಕ ಹೀರೋ ಆದ ಮಹೇಂದ್ರನ್​, ಇದೀಗ ಮೊದಲ ಬಾರಿಗೆ `ನೀಲಕಂಠ` ಎಂಬ ಪ್ಯಾನ್​ ಇಂಡಿಯಾ ಚಿತ್ರದಲ್ಲಿ ನಟಿಸಿದ್ದಾರೆ. 
ಎಲ್​.ಎಸ್​. ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಶ್ರವಣ್ ಜಿ ಕುಮಾರ್ ಎಂ.ಶ್ರೀನಿವಾಸುಲು ಮತ್ತು ಡಿ.ವೇಣುಗೋಪಾಲ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಆಕ್ಷನ್​ ಡ್ರಾಮಾ ಆಗಿದ್ದು, ನಾ. ಅರುಣ್​ ಕಾರ್ತಿಕ್​ ಬರೆದು ನಿರ್ದೇಶಸಿದ್ದಾರೆ. ಈ ಚಿತ್ರವನ್ನು ಸಂಪೂರ್ಣವಾಗಿ ಹಳ್ಳಿಯಲ್ಲಿ ಚಿತ್ರೀಕರಿಸಲಾಗಿರುವುದು ವಿಶೇಷ. ಇಂದು ಮಹೇಂದ್ರನ್​ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು,`ಆಕು ಪಾಕು` ಎಂಬ ಹಾಡನ್ನು ಹುಟ್ಟುಹಬ್ಬರ ಕಾಣಿಕೆಯಾಗಿ ಬಿಡುಗಡೆ ಮಾಡಲಾಗುತ್ತಿದೆ.
 
ಮಹೇಂದ್ರನ್ ಜೊತೆಗೆ ಯಶ್ನಾ ಚೌಧರಿ ಮತ್ತು ನೇಹಾ ಪಠಾಣ್​ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಸ್ನೇಹಾ ಉಲ್ಲಾಳ್​ ಸಹ ಇದ್ದು, ರಾಮ್ಕಿ, ಬಬ್ಲೂ ಪೃಥ್ವಿರಾಜ್, ಶುಭಲೇಖಾ ಸುಧಾಕರ್, ಸತ್ಯ ಪ್ರಕಾಶ್, ಚಿತ್ರಮ್ ಸೀನು, ಕನ್ನಡದ ಜ್ಯೋತಿ ರೈ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 
 
`ನೀಲಕಂಠ` ಚಿತ್ರವು ಸದ್ಯ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ನೀಲಕಂಠ`ನಾಗಿ ಬರುತ್ತಿದ್ದಾರೆ ಮಾಸ್ಟರ್​ ಮಹೇಂದ್ರನ್​; ಹುಟ್ಟುಹಬ್ಬಕ್ಕೆ ಸ್ಪೆಷಲ್​ ಸಾಂಗ್​ - Chitratara.com
Copyright 2009 chitratara.com Reproduction is forbidden unless authorized. All rights reserved.