Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅದ್ದೂರಿಯಾಗಿ ಸೆಟ್ಟೇರಿತು ನ್ಯಾಚುರಲ್ ಸ್ಟಾರ್ ನಾನಿ, ಮೃಣಾಲ್ ಠಾಕೂರ್ ಸಿನಿಮಾ- ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ ಮೆಗಾ ಸ್ಟಾರ್ ಚಿರಂಜೀವಿ
Posted date: 02 Thu, Feb 2023 10:45:38 AM
ಹೊಸ ವರ್ಷದ ಆರಂಭದ ದಿನ ನ್ಯಾಚುರಲ್ ಸ್ಟಾರ್ ನಾನಿ ತಮ್ಮ ಮೂವತ್ತನೇ ಸಿನಿಮಾದ ಅಪ್ಡೇಟ್ ಹಂಚಿಕೊಂಡಿದ್ದರು. ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಾನಿ ಸಿನಿ ಕೆರಿಯರ್ ನ ಮೂವತ್ತನೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿಕ್ಕ ವೀಡಿಯೋ ಝಲಕ್ ಮೂಲಕ ಗಮನ ಸೆಳೆದಿದ್ದ ಚಿತ್ರತಂಡ ಇಂದು ಅದ್ದೂರಿಯಾಗಿ ಮುಹೂರ್ತ ಆಚರಿಸಿಕೊಂಡು ಸಿನಿಮಾಗೆ ಚಾಲನೆ ನೀಡಿದೆ.
 
ಮೆಗಾ ಸ್ಟಾರ್ ಚಿರಂಜೀವಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದು, ಅಶ್ವಿನಿ ದತ್ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಸಿನಿಮಾಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಬುಚ್ಚಿ ಬಾಬು, ಕಿಶೋರ್ ತಿರುಮಲ, ಹನು ರಾಘವಪುಡಿ, ವಸಿಷ್ಠ ಮತ್ತು ವಿವೇಕ್ ಆತ್ರೇಯ ಚಿತ್ರದ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದ್ರೆ, ವಿಜೇಂದ್ರ ಪ್ರಸಾದ್ ಚಿತ್ರದ ಸ್ಕ್ರಿಪ್ಟ್ ಚಿತ್ರತಂಡಕ್ಕೆ ಹಸ್ತಾಂತರಿಸಿದ್ರು. ಪಸಲ ಕರುಣ್ ಕುಮಾರ್, ಗಿರೀಶ್ ಅಯ್ಯರ್, ಚೋಟ ಕೆ ನಾಯ್ಡು, ಸುರೇಶ್ ಬಾಬು, ದಿಲ್ ರಾಜು,14 ರೀಲ್ಸ್ ಗೋಪಿ-ರಾಮ್ ಅಚಂತ, ಎಕೆ ಅನಿಲ್ ಸುಂಕರ, ಮೈತ್ರಿ ರವಿ, ಡಿವಿವಿ ದಾನಯ್ಯ, ಶ್ರವತಿ ರವಿ ಕಿಶೋರೆ, ಕೆ.ಎಸ್ ರಾವ್, ಸಾಹು ಗರಪಾಟಿ, ನಿಹಾರಿಕ ಕೊನಿಡೇಲ ಸೇರಿದಂತೆ ಹಲವರು ಚಿತ್ರದ ಮುಹೂರ್ತದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.
 
ನಾನಿ ಮೂವತ್ತನೆ ಚಿತ್ರ ಇದಾಗಿದ್ದು, ಶೌರ್ಯುವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರ ಒಳಗೊಂಡಿದೆ. ನಾನಿ ಜೋಡಿಯಾಗಿ `ಸೀತಾ ರಾಮಂ` ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದು, ಚಿತ್ರದ ಟೈಟಲ್ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. 


ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್ ಚಿತ್ರಕ್ಕಿರಲಿದ್ದು, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅದ್ದೂರಿಯಾಗಿ ಸೆಟ್ಟೇರಿತು ನ್ಯಾಚುರಲ್ ಸ್ಟಾರ್ ನಾನಿ, ಮೃಣಾಲ್ ಠಾಕೂರ್ ಸಿನಿಮಾ- ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ ಮೆಗಾ ಸ್ಟಾರ್ ಚಿರಂಜೀವಿ - Chitratara.com
Copyright 2009 chitratara.com Reproduction is forbidden unless authorized. All rights reserved.