Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಟಭಯಂಕರ - ಸೂಪರ್ ಸ್ಟಾರ್ ಗೆ ದೆವ್ವದ ಉಪಟಳ - 3.5/5 ****
Posted date: 04 Sat, Feb 2023 03:53:45 PM
ನಿರ್ದೇಶನ: ಪ್ರಥಮ್
ನಿರ್ಮಾಣ: ಸ್ವಾರಸ್ಯ ಸಿನಿ ಕ್ರಿಯೇಶನ್ಸ್
ತಾರಾಗಣ: ಪ್ರಥಮ್, ನಿಹಾರಿಕಾ ಶೆಣೈ, ಸುಶ್ಮಿತಾ, ಚಂದನಾ,  ಸಾಯಿಕುಮಾರ್, ಶೋ`Àರಾಜ್, ಶಂಕರ್ ಅಶ್ವಥ್, ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್ ಇತರರು. 
  
ಬಿಗ್ ಬಾಸ್ ಪ್ರಥಮ್  ಏನೇ ಮಾಡಿದರೂ ಅದು ಡಿಫರೆಂಟಾಗೇ ಇರುತ್ತದೆ. ಬಹಳ ದಿನಗಳ ನಂತರ ಅವರೇ ನಿರ್ದೇಶಿಸಿರುವ ಚಿತ್ರ ನಟಭಯಂಕರ ಬಿಡುಗಡೆಯಾಗಿದ್ದು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಪ್ರಥಮ್ ಈ ಚಿತ್ರದಲ್ಲಿ ಚಿತ್ರನಟನಾಗಿಯೇ ಕಾಣಿಸಿಕೊಂಡಿದ್ದಾರೆ. ಬೆಳ್ಳಿತೆರೆಯ ಹಿಂದೆ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಹಾಸ್ಯಮಯವಾಗೇ ಹೇಳಿಕೊಂಡು ಹೋಗಿರುವ ನಟ, ನಿರ್ದೇಶಕ ಪ್ರಥಮ್, ಅದಕ್ಕೊಂದು ಹಾರರ್ ಟಚ್ ಕೊಟ್ಟಿದ್ದಾರೆ. ತಾನೊಬ್ಬ ಹೀರೋ ಆಗಬೇಕು, ಸೂಪರ್ ಸ್ಟಾರ್ ಆಗಬೇಕೆಂಬ  ಬರುವ ನಾಯಕ ಕಥೆಯಿದು‌.  ಆತ  ಸೂಪರ್‌ಸ್ಟಾರ್ ಆದ ಮೇಲೆ ಏನೆಲ್ಲಾ  ಆಗುತ್ತೆ ಎಂಬುದನ್ನು ಹೇಳಿದ್ದಾರೆ. ಆತ ಅಭಿನಯಿಸಿದ ಚಿತ್ರಗಳೆಲ್ಲ ಸೂಪರ್ ಹಿಟ್ ಆಗುತ್ತವೆ. ಆಗ  ಸಹಜವಾಗಿಯೇ ಈ ಸೂಪರ್‌ಸ್ಟಾರ್ ಹಾಕಿಕೊಂಡು ಚಿತ್ರಮಾಡಲು ಚಿತ್ರ ನಿರ್ಮಾಪಕರು, ನಿರ್ದೇಶಕರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ಆ ಹೀರೋ ಕ್ಯಾರೆಕ್ಟರೇ ವಿಭಿನ್ನ. ಕೆಲಸದಲ್ಲಿ ಸ್ವಲ್ಪವೇ ಹೆಚ್ಚು ಕಡಿಮೆಯಾದರೂ ತನ್ನನ್ನು ಹಾಕಿಕೊಂಡು ಚಿತ್ರ ನಿರ್ಮಿಸುವ ನಿರ್ಮಾಪಕರು, ನಿರ್ದೇಶಕರನ್ನು  ಹೈರಾಣಾಗಿಸಿಬಿಡುತ್ತಾನೆ. ಇವನ ಕಾಟಕ್ಕೆ ಬೇಸತ್ತ ನಿರ್ಮಾಪಕ ನಿರ್ದೇಶಕರು ಆತನಿಗೆ ಹಿಂದಿನಿಂದ ಹಿಡಿಶಾಪ ಹಾಕುತ್ತಾರೆ. ಅಂಥಾ ಒಬ್ಬ ಸೂಪರ್‌ಸ್ಟಾರ್   ದೆವ್ವದ ಮನೆಯೊಂದಕ್ಕೆ ಹೋದಾಗ ಅಲ್ಲಿ ಏನೆಲ್ಲಾ ನಡೆಯುತ್ತದೆ,  ಆ ದೆವ್ವದ ಕೈಯಲ್ಲಿ ಸಿಕ್ಕಿಹಾಕಿಕೊಂಡ ಅವನ ಪಾಡು  ಹೇಗಿರುತ್ತೆ  ಎಂಬುದನ್ನು ನಟ ಭಯಂಕರ ಚಿತ್ರದ ಮೂಲಕ ನಿರ್ದೇಶಕರೂ ಆದ ಪ್ರಥಮ್ ಹೇಳಿದ್ದಾರೆ.  

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಒಬ್ಬ ಸೂಪರ್‌ಸ್ಟಾರ್ ನಟ ಮತ್ತು ಭಯಂಕರ ದೆವ್ವದ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. ಇದೊಂದು ಹಾರರ್ ಕಾಮಿಡಿ  ಚಿತ್ರವಾಗಿದ್ದು, ನಗಿಸುತ್ತಲೇ ಹಾರರ್ ಕಥೆಯನ್ನು  ಹೇಳಿಕೊಂಡು ಹೋಗಿರುವ  ನಿರ್ದೇಶಕರ ಶೈಲಿ  ಪ್ರೇಕ್ಷಕನಿಗೆ ಇಷ್ಟವಾಗುತ್ತದೆ. ಇದರ ಜೊತೆಗೆ ಒಂದಷ್ಟು ಮನರಂಜನಾತ್ಮಕ  ಅಂಶಗಳನ್ನೂ ಸೇರಿಸಿಕೊಂಡಿರುವ ನಿರ್ದೇಶಕ ಪ್ರಥಮ್ ಪ್ರೇಕ್ಷಕರಿಗೆ  ಸಂಪೂರ್ಣ ಮನರಂಜನಾತ್ಮಕ ಚಿತ್ರವನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಅವರು ಸಿನಿಮಾಗಾಗಿ ಆರಿಸಿಕೊಂಡಿರುವ ಕಂಟೆಂಟ್ ತುಂಬಾ ಚೆನ್ನಾಗಿದೆ. ಸಾಮಾನ್ಯ  ಪ್ರೇಕ್ಷಕರನ್ನು ಬೇಗನೇ ತಲುಪುವ ಸಾಕಷ್ಟು ಅಂಶಗಳು  ಈ ಚಿತ್ರದಲ್ಲಿವೆ. ಅದೇ ಕಾರಣಕ್ಕೆ ಪ್ರಥಮ್‌ರ  ಈ ಚಿತ್ರ ಪ್ರತಿಯೊಬ್ಬ ವೀಕ್ಷಕರನ್ನೂ ತಲುಪುತ್ತದೆ. ಚಿತ್ರದ ಹಾಡುಗಳು, ಕ್ಯಾಮೆರಾ ವರ್ಕ್ ಉತ್ತಮವಾಗಿ ಮೂಡಿಬಂದಿದೆ. 

ಈ ಸಿನಿಮಾದಲ್ಲಿ ಪ್ರಥಮ್ ತೆರೆಯ ಮುಂದೆ ನಾಯಕನಾಗಿ, ತೆರೆಯ ಹಿಂದೆ ನಿರ್ದೇಶಕನಾಗಿ ಎರಡೂ ಪಾತ್ರಗಳನ್ನು  ಸಮರ್ಥವಾಗಿ ನಿಭಾಯಿಸಿದ್ದಾರೆ.   ಪ್ರಥಮ್ ಹಾಕಿರುವ ಎಫರ್ಟ್ ತೆರೆಯ ಮೇಲೆ ಕಾಣಿಸುತ್ತದೆ. ಇನ್ನು ನಾಯಕಿಯರಾದ ನಿಹಾರಿಕಾ ಶೆಣೈ,  ಸುಶ್ಮಿತಾ ಜೋಶಿ  ಸಿಕ್ಕ ಅವಕಾಶದಲ್ಲಿ  ಉತ್ತಮ ಅಭಿನಯ ನೀಡುವ ಮೂಲಕ  ನೋಡುಗರಿಗೆ ಇಷ್ಟವಾಗುತ್ತಾರೆ. ಕುರುಡಿ ದೆವ್ವದ ಪಾತ್ರವನ್ನು ಚಂದನಾ ರಾಘವೇಂದ್ರ ಚೆನ್ನಾಗಿಯೇ ಮಾಡಿದ್ದಾರೆ. ಉಳಿದಂತೆ ಕುರಿ ಪ್ರತಾಪ್ ಹಾಗೂ ಓಂಪ್ರಕಾಶ್‌ರಾವ್ ಸಖತ್ತಾಗಿ ನಗಿಸುತ್ತಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಟಭಯಂಕರ - ಸೂಪರ್ ಸ್ಟಾರ್ ಗೆ ದೆವ್ವದ ಉಪಟಳ - 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.