Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಾಯನ ನಿಲ್ಲಿಸಿದ ಗಾಯಕಿ ವಾಣಿ ಜಯರಾಂ
Posted date: 05 Sun, Feb 2023 � 08:51:21 AM
`ಈ ಶತಮಾನದ ಮಾದರಿ ಹೆಣ್ಣು`, ಹಾಡು ಹಳೆಯದಾದರೇನು ಭಾವ ನವ ನವೀನ`, `ಭಾವಯ್ಯ ಭಾವಯ್ಯಾ ಇಲ್ಲೇ ನಿಂತಿರೇಕಯ್ಯ` `ತೆರೆದಿದೆ ಮನೆ ಓ ಬಾ ಅತಿಥಿ` ಸೇರಿದಂತೆ ಕನ್ನಡದ ನೂರಾರು ಚಿತ್ರಗಳಿಗೆ ಕನ್ನಡದಲ್ಲಿ 1 ಸಾವಿರ ಹಾಡು ಹಾಡಿದ ಹಿರಿಮೆ ಖ್ಯಾತ ಗಾಯಕಿ ವಾಣಿ ಜಯರಾಮ್ ಅವರದ್ದು.

ಕನ್ನಡದಲ್ಲಿ  1973ರಿಂದ ಹಾಡಲು ಆರಂಭಿಸಿದ ವಾಣಿ ಜಯರಾಂ ಒಂದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.  ಒಟ್ಟು ಹನ್ನೆರಡು ಭಾಷೆಗಳಲ್ಲಿ ಅವರು ಹಾಡಿರುವ ಚಿತ್ರಗೀತೆಗಳ ಸಂಖ್ಯೆಯೇ ಹತ್ತು ಸಾವಿರ ದಾಟಿದೆ.

ವಾಣಿ ಜಯರಾಮ್ ಗಾಯನಲೋಕಕ್ಕೆ ಪೂರ್ಣ ವಿರಾಮ ಹಾಕಿ ಚೆನ್ನೈನಲ್ಲಿ ಇಹಲೋಕ ತ್ಯಜಿಸಿದ್ದಾರೆ.ಅವರಿಗೆ 72 ವರ್ಷ ವಯಸ್ಸಾಗಿತ್ತು. `ತೆರೆದಿದೆ ಮನೆ ಓ ಬಾ ಅತಿಥಿ` ಎಂದು ಹಾಡಿದ ಗಾಯಕಿ ಇನ್ನೂ ನೆನಪು ಮಾತ್ರ.

ವಾಣಿ ಜಯರಾಮ್ ಹಾಡಿದ ಪ್ರಮುಖ ಕನ್ನಡದ ಗೀತೆಗಳೆಂದರೆ `ನಗು ನೀ ನಗು, ಕಿರು ನಗೆ ನಗು`, `ಮೋಹನಾಂಗ ನಿನ್ನ ಕಂಡು ಓಡಿ ನಾ ಬಂದೆನೋ`,`ಈ ಶತಮಾನದ ಮಾದರಿ ಹೆಣ್ಣು`, `ದಾರಿ ಕಾಣದಾಗಿದೆ ರಾಘವೇಂದ್ರನೆ`, `ಸವಿ ನೆನಪುಗಳು ಬೇಕು ಸವಿಯಲೀ ಬದುಕು`, `ಓ ತಂಗಾಳಿಯೇ ನೀನಿಲ್ಲಿಗೆ ಓಡೋಡಿ ನಲಿದು ಒಲಿದು ಬಾ`, `ಲೈಫ್ ಈಸ್ ಎ ಮೆರ್ರಿ ಮೆಲೋಡಿ`, `ದಿವ್ಯ ಗಗನ ವನವಾಸಿನಿ`, `ಆ ದೇವರೆ ನುಡಿದ ಮೊದಲ ನುಡಿ`, `ಬಂದಿದೆ ಬದುಕಿನ ಬಂಗಾರದಾ ದಿನ`ಎಂದು ಪದೇ ಪದೇ ಗುನುಗುವಂತೆ ಇದೆ.

ಇಷ್ಟೇ ಅಲ್ಲದೆ `ನನ್ನಾ ದೇವನ ವೀಣಾವಾದನ`, `ಜೀವನ ಸಂಜೀವನ`, `ಹಾಡು ಹಳೆಯದಾದರೇನು ಭಾವ ನವ ನವೀನ`, `ಭಾವಯ್ಯ ಭಾವಯ್ಯಾ ಇಲ್ಲೇ ನಿಂತಿರೇಕಯ್ಯ`, `ಸದಾ ಕಣ್ಣಲಿ ಒಲವಿನಾ  ಕವಿತೆ ಹಾಡುವೆ`, `ಪ್ರಿಯತಮಾ... ಕರುಣೆಯಾ ತೋರೆಯಾ`, `ಏನೇನೋ ಆಸೆ... ನೀ ತಂದಾ ಭಾಷೆ`, `ರಾಗಾ ಜೀವನ ರಾಗಾ`, `ಬೆಸುಗೆ... ಬೆಸುಗೆ... ಜೀವನವೆಲ್ಲಾ ಸುಂದರ ಬೆಸುಗೆ`, `ಶ್ರಾವಣಮಾಸ ಬಂದಾಗ`, `ಕನಸಲೂ ನೀನೆ ಮನಸಲೂ ನೀನೆ`, `ನಾ ನಿನ್ನ ಮರೆಯಲಾರೆ` ಹಾಡು ಜನಪ್ರಿಯತೆ ಪಡೆದುಕೊಂಡಿವೆ

`ಶುಭಮಂಗಳ ಸುಮುಹೂರ್ತವೇ`, `ತೆರೆದಿದೆ ಮನೆ ಓ ಬಾ ಅತಿಥಿ`, `ಮಧು ಮಾಸ ಚಂದ್ರಮ ನೈದಿಲೆಗೆ ಸಂಭ್ರಮ`, `ವಸಂತ ಬರೆದನು ಒಲವಿನ ಓಲೆ`, `ಗಾಡಾಂಧಕಾರದ ಇರುಳಲ್ಲಿ, ಕಾರ್ಮೋಡ ನೀರಾದ ವೇಳೆಯಲಿ`, `ಗೌರಿ ಮನೋಹರಿಯ ಕಂಡೆ`, `ನೀಲ ಮೇಘ ಶ್ಯಾಮ, ನಿತ್ಯಾನಂದ ಧಾಮ`,  `ಈ ಜೀವ ನಿನದೇ, ಈ ಭಾವ ನಿನದೇ`, `ಅಧರಂ ಮಧುರಂ, ವದನಂ ಮಧುರಂ` , `ನನ್ನೆದೆ ವೀಣೆಯು ಮಿಡಿಯುವುದು` ಹಾಡುಗಳು ಈಗಲೇ ಗುನುಗುಂತೆ ಮಾಡಿದೆ

ಹಲವು ರಾಜ್ಯಪ್ರಶಸ್ತಿಗೆ ಕೊರಳು:

ತಮಿಳಿನಲ್ಲಿ `ಅಪೂರ್ವ ರಾಗಂಗಳ್`, `ತೆಲುಗಿನಲ್ಲಿ ಶಂಕರಾಭರಣಂ`, `ಸ್ವಾತಿ ಕಿರಣಂ` ಚಿತ್ರಗಳಲ್ಲಿನ ಹಿನ್ನಲೆಗಾಯನಕ್ಕೆ ರಾಷ್ಟ್ರಪ್ರಶಸ್ತಿ, ಹಲವಾರು ರಾಜ್ಯಗಳ ಶ್ರೇಷ್ಠ ಗಾಯಕಿ ಪ್ರಶಸ್ತಿ, ಸಂಗೀತ ಸಂಮಾನ್, ಹಿಂದಿ ಭಾಷೆಯನ್ನೊಳಗೊಂಡಂತೆ ಹಲವು ಭಾಷೆಗಳ ಚಿತ್ರಗಳ ಗಾಯನಕ್ಕಾಗಿ ಫಿಲಂ ಫೇರ್ ಪ್ರಶಸ್ತಿ, ಪದ್ಮಭೂಷಣ ಹೀಗೆ ಹಲವಾರು ಪ್ರಶಸ್ತಿಗಳು ವಾಣಿ ಜಯರಾಂ ಸಂದಿದ್ದರಿಂದ ಆ ಪ್ರಶಸ್ತಿಗಳ ಮೌಲ್ಯಗಳು ಹೆಚ್ಚಿವೆ. 

ಈ ಪ್ರಶಸ್ತಿಗಳಲ್ಲಿ ಗುಜರಾಥ್, ಒರಿಸ್ಸಾ ರಾಜ್ಯಗಳ ಪ್ರಶಸ್ತಿಗಳೂ ಸೇರಿವೆ ಎಂದರೆ ವಾಣಿ ಜಯರಾಂ ಅವರಿಗಿರುವ ವ್ಯಾಪ್ತಿಯ ಅರಿವಾಗುತ್ತದೆ.ದೇಶದ ವಿವಿಧ ಭಾಷೆಗಳಲ್ಲಿ ಹಾಡಿ ಎಲ್ಲರ ಮನ ಗೆದ್ದಿದ್ದರು
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಾಯನ ನಿಲ್ಲಿಸಿದ ಗಾಯಕಿ ವಾಣಿ ಜಯರಾಂ - Chitratara.com
Copyright 2009 chitratara.com Reproduction is forbidden unless authorized. All rights reserved.